SOCIAL MEDIA

Newsletter

PARTNER SITES
Select Language Select State

ಕ್ಷುಲ್ಲಕ ಕಾರಣಕ್ಕೆ ಹೋದ ಪ್ರಾಣ: ಸ್ನೇಹಿತನನ್ನೇ ಕೊಂ*ದು ಜೈಲು ಸೇರಿದ ಯುವಕರು

ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಬೈಕ್ ವಿಚಾರಕ್ಕೆ ನಡೆದ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, 22 ವರ್ಷದ ಯುವಕನೊಬ್ಬ ತನ್ನದೇ ರೂಮ್‌ಮೇಟ್‌ಗಳಿಂದ ಬರ್ಬರವಾಗಿ ಹತ್ಯೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಿಂದ ಆಂತರಿಕ ರಕ್ತಸ್ರಾವವಾದರೂ ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ವಹಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ದಾರುಣ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Written By Krishna NK
Published: Nov 25, 2026, 18:02 IST | Updated: Nov 25, 2026, 18:04 IST
Image Credit: Crime news
Join

ಬೆಂಗಳೂರು : ಡಿ.ಜೆ. ಹಳ್ಳಿಯಲ್ಲಿ ಸ್ನೇಹಕ್ಕೇ ಕಳಂಕ ತರುವಂತಹ ಭೀಕರ ಘಟನೆಯೊಂದು ನಡೆದಿದೆ. ಜೊತೆಯಲ್ಲಿದ್ದ ಸ್ನೇಹಿತರೇ, ಕುಚುಕು ಗೆಳೆಯನ ಕಥೆ ಮುಗಿಸಿದ್ದಾರೆ. ಅದು ಮುಖಕ್ಕೆ ಗುದ್ದಿ ಗುದ್ದಿ ಕೊಂದುಬಿಟ್ಟಿದ್ದಾರೆ. ಆತ್ಮೀಯರಾಗಿದ್ದ ಗೆಳೆಯರ ನಡುವೆ ಅಂತದ್ದೇನಾಯ್ತು ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮತ್ತೆ ನೆತ್ತರು ಹರಿದಿದೆ. ಡಿ.ಜೆ. ಹಳ್ಳಿ ಯ ಟಿಪ್ಪು ಸರ್ಕಲ್ ಬಳಿ ನಡೆದ ಘಟನೆಯಲ್ಲಿ 22 ವರ್ಷದ ಆಂಬರ್ ಎಂಬ ಯುವಕ ತನ್ನದೇ ಸ್ನೇಹಿತರ ಕೈಯಲ್ಲಿ ಬರ್ಬರವಾಗಿ  ಕೊಲೆಯಾಗಿದ್ದಾನೆ.ಮೃತ ಆಂಬರ್, ಯೂನೂಸ್ ಮತ್ತು ಜುನೈದ್ ಸೇರಿದಂತೆ ನಾಲ್ವರು ಗೆಳೆಯರೊಂದಿಗೆ ಒಂದೇ ರೂಮ್‌ನಲ್ಲಿ ವಾಸವಿದ್ದ. ಚೆನ್ನಾಗಿಯೇ ಇದ್ದ ಈ ಸ್ನೇಹಿತರ ನಡುವೆ ಬೈಕ್ ವಿಚಾರವಾಗಿ ಸಣ್ಣದೊಂದು ಗಲಾಟೆ ಶುರುವಾಗಿದೆ. ನೋಡ ನೋಡುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೋಪದ ಭರದಲ್ಲಿ ಜುನೈದ್, ಯೂನೂಸ್ ಹಾಗೂ ಇತರರು ಸೇರಿ ಆಂಬರ್‌ನ ಮುಖ, ಬೆನ್ನು ಮತ್ತು ಹೊಟ್ಟೆಗೆ ಮನಸೋಇಚ್ಛೆ ಕೈಗಳಿಂದ ಗುದ್ದಿದ್ದಾರೆ.

ಗೆಳೆಯರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಆಂಬರ್ ನಿತ್ರಾಣನಾಗಿ ಕುಸಿದಿದ್ದ. ಆದ್ರೆ ಆರೋಪಿಗಳು ಆತನಿಗೆ ಏನೂ ಆಗುವುದಿಲ್ಲ ಎಂದು ಭಾವಿಸಿ, ಆಸ್ಪತ್ರೆಗೆ ಕರೆದೊಯ್ಯುವ ಗೋಜಿಗೆ ಹೋಗಿಲ್ಲ. ಬದಲಾಗಿ ಅವನಿಗೆ ಸುಸ್ತಾಗಿದೆ ಎಂದು ಭಾವಿಸಿ, ಲೀಟರ್‌ಗಟ್ಟಲೆ ಸ್ಟಿಂಗ್ ಎನರ್ಜಿ ಡ್ರಿಂಕ್ ಹಾಗೂ ಓಆರ್‌ಎಸ್ ದ್ರಾವಣವನ್ನು ಕುಡಿಸಿ ರೂಮ್‌ನಲ್ಲಿಯೇ ಮಲಗಿಸಿದ್ದಾರೆ.

ತೀವ್ರ ಪೆಟ್ಟಿನಿಂದ ಏನ ನ್ನೂ ಸೇವಿಸಲಾಗದೆ ಒದ್ದಾಡುತ್ತಿದ್ದ ಆಂಬರ್, ಚಿಕಿತ್ಸೆ ಸಿಗದೆ ಆಂತರಿಕ ಸ್ರಾವದಿಂದ ಕೊನೆಯು ಸಿರೆಳೆದಿದ್ದಾನೆ. ಘಟನೆ ಬಳಿಕ ಮೊದಲಿಗೆ ಪೊಲೀಸರು ಇದನ್ನು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಹೊಟ್ಟೆ ಮತ್ತು ದೇಹದ ಆತಂರಿಕ ರಕ್ತಸ್ರಾವವಾಗಿ ಆಂಬರ್ ಸಾವನ್ನಪ್ಪಿರುವುದು ಪೋಸ್ಟ್ ಮಾರ್ಟಂನಲ್ಲಿ ದೃಢಪಟ್ಟಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಡಿ.ಜೆ. ಹಳ್ಳಿ ಪೊಲೀಸರು, ಇದನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿಕೊಂಡು, ಸ್ನೇಹಿತನ ಜೀವ ತೆಗೆದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬೈಕ್ ವಿಚಾರಕ್ಕೆ ಶುರುವಾದ ಜಗಳ ಒಂದು ಅಮಾ ಯಕ ಜೀವವನ್ನೇ ಬಲಿ ಪಡೆದಿದೆ. ಸದ್ಯ ಆರೋಪಿಗಳು ಜೈಲು ಪಾಲಾಗಿದ್ದು, ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES