SOCIAL MEDIA

Newsletter

PARTNER SITES
Select Language Select State

ಎರಡನೇ ಮದುವೆಯೇ ಕಾರಣ... ಚಿಂತಾಮಣಿಯಲ್ಲಿ ನಡುಬೀದಿಯಲ್ಲೇ ಮಹಿಳೆಯ ಭೀಕರ ಹ*ತ್ಯೆ!

ಮಡದಿ ಎರಡನೇ ಮದುವೆ ಆಗಿದ್ದಕ್ಕೆ ಕೋಪಗೊಂಡ ಮೊದಲನೇ ಗಂಡ ಆಕೆಯನ್ನು ನಡು ಬೀದಿಯಲ್ಲೇ ಭೀಕರವಾಗಿ ಹ*ತ್ಯೆಗೈದು ಪರಾರಿ ಆಗಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

Written By Yashaswini V
Published: Oct 13, 2026, 01:32 PM IST | Updated: Oct 13, 2026, 01:34 PM IST
Join

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡುಬೀದಿಯಲ್ಲೇ ಮಹಿಳೆಯ ಬರ್ಬರ ಹ**ತ್ಯೆಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೊದಲ ಪತಿಯೇ ಮಹಿಳೆಯನ್ನು ಕೊ**ಲೆ ಮಾಡಿರುವ ಆರೋಪ ಕೇಳಿಬಂದಿದೆ. ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಬಾಕಿ ಇರುವಾಗಲೇ ಮಹಿಳೆ ಎರಡನೇ ಮದುವೆಯಾಗಿದ್ದಳು ಎನ್ನಲಾಗಿದ್ದು, ಇದೇ ಕೊ***ಲೆಗೆ ಕಾರಣವಾಯಿತೇ ಎಂಬ ಅನುಮಾನವೂ ವ್ಯಕ್ತವಾಗಿದೆ. ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ್ದ ಮೊದಲೇ ಪತಿ ನಡು ಬೀದಿಯಲ್ಲೇ ಆಕೆಯನ್ನು ಹ**ತ್ಯೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೂ ಚಿಂತಾಮಣಿಯಲ್ಲಿ ನಡೆದ ಈ ಭೀಕರ ಕೊ***ಲೆಯ ಹಿಂದಿನ ಕಾರಣವೇನು? ಎಂಬ ಸಂಪೂರ್ಣ ವರದಿ ಇಲ್ಲಿದೆ.

ನಡುರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆ... ಸುತ್ತಮುತ್ತ ಜಮಾಯಿಸಿರುವ ಜನರು... ಜೀವ ಉಳಿಸೋಣ ಅಂತ ಗಾಯಗೊಂಡು ವಿಲ ವಿಲ ಒದ್ದಾಡಿ ನರಳಾಡುತ್ತಿದ್ದ ಮಹಿಳೆಯನ್ನ ಪೊಲೀಸರ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿದ್ದ ಪೊಲೀಸರು.. ಇನ್ನೂ ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿಗಳು... ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅಂಜನಿ ಬಡವಾಣೆಯ ಫಿಲ್ಟರ್‌ ಬೀಟ್‌ ಸರ್ಕಲ್‌ ನಲ್ಲಿ..

ನಡುರಸ್ತೆಯಲ್ಲೇ ಭೀಕರವಾಗಿ ಹ**ತ್ಯೆಯಾಗಿರುವ ಮಹಿಳೆ ಹೆಸರು ಸುಮಿತ್ರಮ್ಮ. ಸುಮಾರು 40 ವರ್ಷದ ಸುಮಿತ್ರಮ್ಮ ಚಿಂತಾಮಣಿ ತಾಲೂಕಿನ ಕಾಪ್ಪಲ್ಲಿ ಗ್ರಾಮದ ನಿವಾಸಿಯಾಗಿದ್ದು ವೆಂಕಟರೆಡ್ಡಿ ಎಂಬಾತನ ಜೊತೆ ವಿವಾಹವಾಗಿದ್ದರು. ಆಕೆಗೆ ಸರಿಸುಮಾರು 12 ವರ್ಷದ ಹೆಣ್ಣು ಮಗು ಕೂಡ ಇದೆ. ಆದ್ರೆ ಒಂದು ವರ್ಷದ ಹಿಂದೆ ಕೌಟುಂಬಿಕ ಕಲಹದ ಹಿನ್ನಲೆ ಗಂಡನನ್ನ ಬಿಟ್ಟು ಬಂದಿದ್ದ ಸುಮಿತ್ರಮ್ಮ ರಮೇಶ ಎಂಬಾತನ ಜೊತೆ ಎರಡನೇ ಮದುವೆಯಾಗಿ ಚಿಂತಾಮಣಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ಲಂತೆ.. ತನ್ನನ್ನ ಬಿಟ್ಟು ಮತ್ಯಾವನನ್ನೋ ಮದುವೆಯಾಗಿರೋ ಕೋಪದಿಂದ ಹೆಂಡತಿಯನ್ನ ಮೊದಲನೇ ಗಂಡನೇ ಹಿಂಬಾಲಿಸಿ ಮಚ್ಚಿನಿಂದ ಕೊ**ಚ್ಚಿ ಕೊ***ಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಅಸಲಿಗೆ ಸುಮಿತ್ರಮ್ಮ ತನ್ನ ಮಗಳ ಜೊತೆ ದೇವಸ್ಥಾನಕ್ಕೆ ಬಂದು ಚಿಂತಾಮಣಿ ನಗರದ ಕೆಎಸ್‌ಆರ್‌ಟಿಸಿ ಡಿಪೋ ಬಳಿ ತರಕಾರಿ ಖರೀದಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಮೊದಲ ಪತಿ ವೆಂಕಟರೆಡ್ಡಿ ಅವರನ್ನು ಹಿಂಬಾಲಿಸಿ ಬಂದು ಮಚ್ಚಿನಿಂದ ಕೊ**ಚ್ಚಿ ಕೊ**ಲೆ ಮಾಡಿದ್ದಾನೆ. ಸಂಜೆಯಿಂದಲೇ ಸುಮಿತ್ರಮ್ಮ ಅವರನ್ನು ವೆಂಕಟರೆಡ್ಡಿ ಹಿಂಬಾಲಿಸುತ್ತಿದ್ದ ಎನ್ನಲಾಗಿದ್ದು, ಮೊದಲೇ ಕೊ**ಲೆಗೆ ಸಂಚು ರೂಪಿಸಿದ್ದನೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಘಟನೆ ನಂತರ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ ಪದ್ಮಿನಿ ಸಾಹು ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಪರಾರಿಯಾಗಿರೋ ಗಂಡನಿಗಾಗಿ ಸಿಸಿಟಿವಿಗಳು ಮೊಬೈಲ್‌ ಲೋಕೇಶನ್‌ ನ ಆಧಾರದ ಮೇಲೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದು ಪರಾರಿ ಆಗಿರುವ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.

ರಮೇಶ್‌ ವಿಚಾರವಾಗಿಯೇ ಸುಮಿತ್ರಮ್ಮ ಮತ್ತು ವೆಂಕಟರೆಡ್ಡಿ ನಡುವೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಇದ್ರಿಂದಲೇ ಸುಮಿತ್ರಮ್ಮ ಗಂಡನನ್ನ ಬಿಟ್ಟು ಬಂದು ರಮೇಶ್‌ ಜೊತೆ ರಹಸ್ಯವಾಗಿ ತಾಳಿ ಕಟ್ಟಿಸಿಕೊಂಡಿ ಮಗಳೊಂದಿಗೆ ಜೀವನ ನಡೆಸುತ್ತಿದ್ದಳಂತೆ. ಇನ್ನೂ ಡೈವೋರ್ಸ್‌ ಕೇಸ್‌ ಸಹ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಸುಮಿತ್ರಮ್ಮ ರಮೇಶ್ ಮದುವೆಯಾಗಿ ಸಂಸಾರ ಸಾಗಿಸಿದ್ಲು. ಇದು ವೆಂಕಟರೆಡ್ಡಿ ಕೋಪ ತಾಪ ಮತ್ತಷ್ಟು ಏರುವಂತೆ ಮಾಡಿದ್ದು ಕಟ್ಟಿಕೊಂಡ ಹೆಂಡತಿಯನ್ನೇ ನಡುರಸ್ತೆಯಲ್ಲಿ ಕೊ***ಚ್ಚಿ ಕೊ***ಲೆ ಮಾಡುವಂತೆ ಮಾಡಿದೆ ಎನ್ನುತ್ತಾರೆ ಸ್ಥಳೀಯರು. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES