ಪತಿಯ ಕಿರುಕುಳಕ್ಕೆ ಆರ್ಟಿಸ್ಟ್ ಶರಣ್ಯ ಬ*ಲಿ : ಮೊಮ್ಮಗಳ ನೋಡಲು ತೆರಳಿದ್ದ ಶಿಕ್ಷಕಿ ಮೇಲೆಯೂ ಹ*ಲ್ಲೆ ಆರೋಪ
ಮಗಳು ಪ್ರಾಣ ಕಳೆದುಕೊಂಡರೂ, ಆಕೆಯ ಏಳು ವರ್ಷದ ಹೆಣ್ಣುಮಗಳಿಗಾಗಿ ನೋವನ್ನು ನುಂಗಿಕೊಂಡಿದ್ದ ತಾಯಿಗೆ ಕೊನೆಗೆ ದಕ್ಕಿದ್ದು ಕೇವಲ ಅವಮಾನ ಮತ್ತು ಹಲ್ಲೆ. ಮೊಮ್ಮಗಳನ್ನು ನೋಡಲು ಹೋದ ದೇವನಹಳ್ಳಿಯ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ಕವಿತಾ ಅವರ ಮೇಲೆ ಅಳಿಯನೇ ಮೃಗೀಯವಾಗಿ ಹಲ್ಲೆ ನಡೆಸಿದ್ದಾನೆ.. ಮುಂದಾಗಿದ್ದು ಮಾತ್ರ ದುರಂತ..
ಬೆಂಗಳೂರು : ಆಕೆ ಆರ್ಟಿಸ್ಟ್.. ಅವಳ ಕೈನಿಂದ ಅದೆಷ್ಟೋ ಅದ್ಭುತ ಕಲಾಕೃತಿಗಳು ಮೂಡಿದ್ವು. ಆದ್ರೆ ತನ್ನದೇ ಜೀವನ ರೂಪಿಸಿಕೊಳ್ಳುವಲ್ಲಿ ಎಡವಿಬಿಟ್ಟಿದ್ಳು. ಐದು ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ನೇಣಿಗೆ ಕೊರಳೊಡ್ಡಿದ್ಳು. ಮೊಮ್ಮಗಳಿಗಾಗಿ ಮಗಳ ಸಾವಿನ್ನು ಸಹಿಸಿಕೊಂಡ ತಾಯಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಬರೀ ನೋವು, ಅವಮಾನ.. ಸರ್ಕಾರಿ ಶಿಕ್ಷಕಿ ಮೇಲಾದ ಹಲ್ಲೆಯ ರೋಚಕ ಕಹಾನಿ ಇಲ್ಲಿದೆ..
ಆಸ್ಪತ್ರೆ ಬೆಡ್ ಮೇಲೆ ಕೂತು ತನಗಾದ ನೋವನ್ನ ಹೇಳಿಕೊಳ್ತಿರೊ ಇವ್ರ ಹೆಸರು ಕವಿತಾ. ದೇವನಹಳ್ಳಿ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ. ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ್ದ ಈಕೆಗೆ ತನ್ನ ಮಗಳನ್ನೇ ಉಳಿಸಿಕೊಳ್ಳಲು ಆಗಿಲ್ಲ ಅನ್ನೋದು ವಿಪರ್ಯಾಸ. ಆದ್ರೆ, ಮೊಮ್ಮಗಳನ್ನು ನೋಡಲು ಹೋದಾಕೆಯ ಮೇಲೆ ಅಳಿಯನ ಮೃಗನ ರೀತಿ ವರ್ತಿಸಿದ್ದಾನೆ..
ಹೌದು.. ಈ ಫೋಟೊದಲ್ಲಿ ಕಾಣ್ತಿರೋದು ಶರಣ್ಯ ಮತ್ತು ಮಂಜುನಾಥ್ ದಂಪತಿ. 2017 ರಲ್ಲಿ ವಿವಾಹವಾಗಿದ್ರು. ಆದರೆ ಆರಂಭದಿಂದಲೂ ಕೌಟುಂಬಿಕ ಕಲಹ ಉಂಟಾಗಿತ್ತು. ಪತಿಯ ಅನೈತಿಕ ಸಂಬಂಧದ ಶಂಕೆಯಿಂದ ಪ್ರತಿ ದಿನ ಜಗಳ ನಡಿತಾನೆ ಇತ್ತು. ಅದು ಅತಿರೇಕಕ್ಕೆ ಹೋದ ಬಳಿಕ ಅರ್ಟಿಸ್ಟ್ ಆಗಿದ್ದ ಶರಣ್ಯ ಐದು ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಳು. ಆದ್ರೆ 7 ವರ್ಷದ ಹೆಣ್ಣು ಮಗು ದಂಪತಿಗೆ ಇತ್ತು.. ಗಂಡನ ಕಿರುಕುಳ ಕೇಸ್ ಅಂತೆಲ್ಲಾ ಹೋದರೆ ಮಗು ತಬ್ಬಲಿ ಆಗಿಬಿಡುತ್ತೆ ಅಂದುಕೊಂಡ ಶರಣ್ಯ ಕಟುಂಬಸ್ಥರು ಹೊಟ್ಟೆ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೇಸ್ ಕ್ಲೋಸ್ ಮಾಡಿಸಿದ್ರಂತೆ..
ಆದ್ರೆ ಇತ್ತೀಚೆಗೆ ಮೊಮ್ಮಗಳನ್ನು ನೋಡಲು ಅಳಿಯ ಬಿಡ್ತಿರ್ಲಿಲ್ಲ. ಕಳೆದ ಶನಿವಾರ ಮನೆ ಬಳಿ ಹೋದಾಗ ಮೊಮ್ಮಗಳನ್ನು ನೋಡಲು ಬಿಡದೆ ಅಳಿಯ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಗಾಯಾಳು ಕವಿತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತೀದ್ದಾರೆ. ಮಗಳನ್ನು ಕಳೆದುಕೊಂಡ ಶರಣ್ಯ ಕುಟುಂಬಸ್ಥರು, ಮೊಮ್ಮಗಳಲ್ಲಿ ಖುಷಿ ಕಾಣೊ ಆಸೆಯಲ್ಲಿದ್ರು. ಆದ್ರೆ ಅದು ಕೂಡ ನೆರವೇರದ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.