• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಪತಿಯ ಕಿರುಕುಳಕ್ಕೆ ಆರ್ಟಿಸ್ಟ್ ಶರಣ್ಯ ಬ*ಲಿ : ಮೊಮ್ಮಗಳ ನೋಡಲು ತೆರಳಿದ್ದ ಶಿಕ್ಷಕಿ ಮೇಲೆಯೂ ಹ*ಲ್ಲೆ ಆರೋಪ

ಪತಿಯ ಕಿರುಕುಳಕ್ಕೆ ಆರ್ಟಿಸ್ಟ್ ಶರಣ್ಯ ಬ*ಲಿ : ಮೊಮ್ಮಗಳ ನೋಡಲು ತೆರಳಿದ್ದ ಶಿಕ್ಷಕಿ ಮೇಲೆಯೂ ಹ*ಲ್ಲೆ ಆರೋಪ

ಮಗಳು ಪ್ರಾಣ ಕಳೆದುಕೊಂಡರೂ, ಆಕೆಯ ಏಳು ವರ್ಷದ ಹೆಣ್ಣುಮಗಳಿಗಾಗಿ ನೋವನ್ನು ನುಂಗಿಕೊಂಡಿದ್ದ ತಾಯಿಗೆ ಕೊನೆಗೆ ದಕ್ಕಿದ್ದು ಕೇವಲ ಅವಮಾನ ಮತ್ತು ಹಲ್ಲೆ. ಮೊಮ್ಮಗಳನ್ನು ನೋಡಲು ಹೋದ ದೇವನಹಳ್ಳಿಯ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ಕವಿತಾ ಅವರ ಮೇಲೆ ಅಳಿಯನೇ ಮೃಗೀಯವಾಗಿ ಹಲ್ಲೆ ನಡೆಸಿದ್ದಾನೆ.. ಮುಂದಾಗಿದ್ದು ಮಾತ್ರ ದುರಂತ..

Reported ByKrishna NKEdited ByKrishna NK
Published: Oct 06, 2026, 06:07 PM IST|Updated: Oct 06, 2026, 06:10 PM IST
joinshare
ಪತಿಯ ಕಿರುಕುಳಕ್ಕೆ ಆರ್ಟಿಸ್ಟ್ ಶರಣ್ಯ ಬ*ಲಿ : ಮೊಮ್ಮಗಳ ನೋಡಲು ತೆರಳಿದ್ದ ಶಿಕ್ಷಕಿ ಮೇಲೆಯೂ ಹ*ಲ್ಲೆ ಆರೋಪ
Image Credit: Today news karnataka

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂ ಕದ ತಟ್ಟಿದ ವಿಜಯಲಕ್ಷ್ಮಿ, ಪವಿತ್ರಾ ಗೌಡಗೆ ನೆಮ್ಮದಿಯ ಸುದ್ದಿ

ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂ ಕದ ತಟ್ಟಿದ ವಿಜಯಲಕ್ಷ್ಮಿ, ಪವಿತ್ರಾ ಗೌಡಗೆ ನೆಮ್ಮದಿಯ ಸುದ್ದಿ

2

ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ದಾದಾ ದರ್ಬಾರ್‌.. IPL ಟ್ರೋಫಿಯೇ ಟಾರ್ಗೆಟ್‌, DC ಬಿಗ್‌ ಪ್ಲಾನ್

3

ಹುಣಸೆ ಬೀಜ ಎಸೆಯುವ ಅಭ್ಯಾಸ ಬಿಡಿ! ಈ ಪುಟ್ಟ ಬೀಜದಲ್ಲಿದೆ ಹಲವು ಆರೋಗ್ಯಕಾರಿ ಗುಣಗಳು

4

ಸುಳ್ಯ ಶಾಸಕಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು, ಹೇಗಿದೆ ಆರೋಗ್ಯ?

5

ಕೆಪಿಎಸ್ ಹಗರಣದಲ್ಲಿ ದೊಡ್ಡ ಬೆಳವಣಿಗೆ : ಶಿವಶಂಕರಪ್ಪ ಸಾಹುಕರ್, ಗೀತಾ ಬಂಧನ.. ಯಾರಿವರು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಆಕೆ ಆರ್ಟಿಸ್ಟ್.. ಅವಳ ಕೈನಿಂದ ಅದೆಷ್ಟೋ ಅದ್ಭುತ ಕಲಾಕೃತಿಗಳು ಮೂಡಿದ್ವು. ಆದ್ರೆ ತನ್ನದೇ ಜೀವನ ರೂಪಿಸಿಕೊಳ್ಳುವಲ್ಲಿ ಎಡವಿಬಿಟ್ಟಿದ್ಳು. ಐದು ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ನೇಣಿಗೆ ಕೊರಳೊಡ್ಡಿದ್ಳು. ಮೊಮ್ಮಗಳಿಗಾಗಿ ಮಗಳ ಸಾವಿನ್ನು ಸಹಿಸಿಕೊಂಡ ತಾಯಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಬರೀ ನೋವು, ಅವಮಾನ.. ಸರ್ಕಾರಿ ಶಿಕ್ಷಕಿ ಮೇಲಾದ ಹಲ್ಲೆಯ ರೋಚಕ ಕಹಾನಿ ಇಲ್ಲಿದೆ..

ಆಸ್ಪತ್ರೆ ಬೆಡ್ ಮೇಲೆ ಕೂತು ತನಗಾದ ನೋವನ್ನ ಹೇಳಿಕೊಳ್ತಿರೊ ಇವ್ರ ಹೆಸರು ಕವಿತಾ. ದೇವನಹಳ್ಳಿ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ. ಸಾವಿರಾರು ವಿದ್ಯಾರ್ಥಿಗಳ‌ ಜೀವನ ರೂಪಿಸಿದ್ದ ಈಕೆಗೆ ತನ್ನ ಮಗಳನ್ನೇ ಉಳಿಸಿಕೊಳ್ಳಲು ಆಗಿಲ್ಲ ಅನ್ನೋದು ವಿಪರ್ಯಾಸ. ಆದ್ರೆ, ಮೊಮ್ಮಗಳನ್ನು ನೋಡಲು ಹೋದಾಕೆಯ ಮೇಲೆ ಅಳಿಯನ ಮೃಗನ ರೀತಿ ವರ್ತಿಸಿದ್ದಾನೆ..

‎ಹೌದು.. ಈ ಫೋಟೊದಲ್ಲಿ ಕಾಣ್ತಿರೋದು ಶರಣ್ಯ ಮತ್ತು ಮಂಜುನಾಥ್ ದಂಪತಿ. 2017 ರಲ್ಲಿ ವಿವಾಹವಾಗಿದ್ರು. ಆದರೆ ಆರಂಭದಿಂದಲೂ ಕೌಟುಂಬಿಕ ಕಲಹ ಉಂಟಾಗಿತ್ತು. ಪತಿಯ ಅನೈತಿಕ ಸಂಬಂಧದ ಶಂಕೆಯಿಂದ ಪ್ರತಿ ದಿನ ಜಗಳ ನಡಿತಾನೆ ಇತ್ತು. ಅದು ಅತಿರೇಕಕ್ಕೆ ಹೋದ ಬಳಿಕ ಅರ್ಟಿಸ್ಟ್ ಆಗಿದ್ದ ಶರಣ್ಯ ಐದು ತಿಂಗಳ‌ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಳು. ಆದ್ರೆ 7 ವರ್ಷದ ಹೆಣ್ಣು ಮಗು ದಂಪತಿಗೆ ಇತ್ತು.. ಗಂಡನ ಕಿರುಕುಳ ಕೇಸ್ ಅಂತೆಲ್ಲಾ ಹೋದರೆ ಮಗು ತಬ್ಬಲಿ ಆಗಿಬಿಡುತ್ತೆ ಅಂದುಕೊಂಡ ಶರಣ್ಯ ಕಟುಂಬಸ್ಥರು ಹೊಟ್ಟೆ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೇಸ್ ಕ್ಲೋಸ್ ಮಾಡಿಸಿದ್ರಂತೆ..

‎ಆದ್ರೆ ಇತ್ತೀಚೆಗೆ‌‌ ಮೊಮ್ಮಗಳನ್ನು ನೋಡಲು ಅಳಿಯ ಬಿಡ್ತಿರ್ಲಿಲ್ಲ. ಕಳೆದ ಶನಿವಾರ ಮನೆ ಬಳಿ ಹೋದಾಗ ಮೊಮ್ಮಗಳನ್ನು ನೋಡಲು ಬಿಡದೆ ಅಳಿಯ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಗಾಯಾಳು ಕವಿತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತೀದ್ದಾರೆ. ‎ಮಗಳನ್ನು ಕಳೆದುಕೊಂಡ ಶರಣ್ಯ ಕುಟುಂಬಸ್ಥರು, ಮೊಮ್ಮಗಳಲ್ಲಿ ಖುಷಿ ಕಾಣೊ ಆಸೆಯಲ್ಲಿದ್ರು. ಆದ್ರೆ ಅದು ಕೂಡ ನೆರವೇರದ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.

Add Zee News as a Preferred Source
TAGS:
Kannada News