ಕೊಡಗು : ಎತ್ತನೋಡಿದರೂ ಜನಸಾಗರ, ನಿಸರ್ಗದ ಸಿರಿಯ ನಡುವೆ ಸಡಗರ ಸಂಭ್ರಮ, ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತಿರೋ ಭೂಲೋಕ, ಕಾವೇರಿಯ ಸನ್ನಿಧಿಗೆ ದೇವಲೋಕದ ಕಳೆ. ಹೌದು.. ದಕ್ಷಿಣ ಗಂಗೆ ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಇಂದು ಅಕ್ಷರಶಃ ದೇವಲೋಕವಾಗಿ ಬದಲಾಗಿತ್ತು, ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದ ಕಾವೇರಿ ಭಕ್ತರ ಕೋರಿಕೆಯಂತೆ ವರ್ಷಕ್ಕೊಮ್ಮೆ ತೀರ್ಥಸ್ವರೂಪಿಣಿಯಾಗಿ ಉಕ್ಕಿಬರೋ ಪುಣ್ಯಕಾಲ ತುಲಾಸಂಕ್ರಮಣದ ತಿರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು.
ಪೂರ್ವನಿಗದಿಯಂತೆ ಮೇಷ ಲಗ್ನದಲ್ಲಿ ಸಂಜೆ 7 ಗಂಟೆ 50 ನಿಮಿಷಕ್ಕೆ ಸರಿಯಾಗಿ ಬ್ರಹ್ಮಕುಂಡಿಕೆಯಿಂದ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದ ಕಾವೇರಿಯನ್ನು ಕಣ್ತುಂಬಿಕೊಂಡ ಭಕ್ತಗಣ ಜೈ ಜೈ ಮಾತಾ ಕಾವೇರಿ ಮಾತ ಕಾವೇರಿ ಮಾತ ಜೈ ಜೈ ಮಾತ ಎಂದು ಹರ್ಷೋದ್ಘಾರಮಾಡುತ್ತಾ ಭಾವಪರವಶತೆಯಲ್ಲಿ ಮುಳುಗಿದ್ದರು, ಸೂರ್ಯ ತುಲಾ ರಾಶಿಯನ್ನ ಪ್ರವೇಶಿಸಿದ 7 ಗಂಟೆ 50 ನಿಮಿಷಕ್ಕೆ ಸರಿಯಾಗಿ ಕಾವೇರಿಮಾತೆ ಉಕ್ಕಿ ಬರುತ್ತಲೆ ಈ ವಿಸ್ಮಯವನ್ನು ಕಣ್ತುಂಬಿಕೊಂಡ ಭಕ್ತಸಾಗರ ಕಾವೇರಿಮಾತೆಗೆ ಜೈ ಘೋಷಹಾಕುತ್ತಾ ಸ್ವಾಗತಿಸಿದರು.
ಪುರೋಹಿತರು ಮಹಾ ಸಂಕಲ್ಪ ಪೂಜೆ, ಮಹಾಪೂಜೆ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಮಾಡುತ್ತಲೆ ಅಲೆ ಅಲೆಯಾಗಿ ತೂಗುತ್ತಾ ತೀರ್ಥಕುಂಡಿಕೆಯಿಂದ ಪವಿತ್ರ ಜಲ ಉಕ್ಕಿಬಂದಿದ್ದನ್ನು ಕಂಡ ಭಕ್ತರು ಜೈ ಜೈಮಾತಾ ಕಾವೇರಿ ಮಾತಾ ಎಂದು ಘೋಷ ಮೊಳಗಿಸುತ್ತಾ ಕಾವೇರಿ ಮಾತೆಯ ದರ್ಶನಪಡೆದರು. ಪವಿತ್ರ ತಿರ್ಥೊದ್ಭವಕ್ಕೆ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಎಸ್ಪಿ ಬಿಂದುಮಣಿ, ಡಿಸಿ ಸೋಮಶೇಖರ್ ಸೇರಿದಂತೆ ಗಣ್ಯ. ಅಥಿಗಳು ಭಾಗಿಯಾಗಿದ್ರು.
ಕೊಡಗಿನ ಜನರ ಪಾಲಿಗೆ ಕಾವೇರಿ ಕೇವಲ ನದಿಯಲ್ಲ ಆಕೆ ಕೊಡಗಿನ ಜನರ ಕುಲದೇವತೆ, ಪಾಪನಾಶಿನಿ, ಬೇಡಿದ ವರವನೀಡೋ ಕರುಣಾಮಯಿ ಹಾಗಾಗಿಯೆ ಕಾವೇರಿ ತಾಯಿಯ ದರ್ಶನಕ್ಕೆ ಇಷ್ಟೊಂದು ಬಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ರು. ಭ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಬರೋ ಪವಿತ್ರ ಕಾವೇರಿ ಮಾತೆಯ ಜಲವನ್ನು ಸಂಗ್ರಹಿಸಲು ಜನರು ಮುಂಜಾನೆಯಿಂದ ಕಾದು ಕುಳಿತಿದ್ದರು, ವಿಶೇಷವಾಗಿ ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದಿತು. ಈ ಸಮಯದಲ್ಲಿ ತಲಕಾವೆರಿಯಲ್ಲಿ ಪುಣ್ಯಸ್ನಾನಮಾಡಿ ತೀರ್ಥ ಸಂಗ್ರಹಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆಂಬ ನಂಭಿಕೆಯಿಂದ ಭಕ್ತರು ಬಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು.ಬ್ರಹ್ಮಕುಂಕೆಯ ಮಂಭಾಗದಲ್ಲಿರೋ ಪವಿತ್ರ ಕೊಳದಲ್ಲಿ ಪ್ರತಿವರ್ಷ ಕೂಡ ಭಕ್ತರು ಸ್ನಾನ ಮಾಡಿ ಪುನಿತಾರಾಗುತಿದ್ರು
ಅಭಿಷೇಷ, ಪಂಚಾಮೃತ ಅಭಿಷೇಕ, ಅರ್ಚನೆ, ಕುಂಕುಮಾರ್ಚನೆ, ಆರತಿ ಸಂಕಲ್ಪ ಸೇರಿ ವಿವಿಧ ಪೂಜೆಗಳನ್ನ ನೆರವೇರಿಸಲಾಯ್ತು. ಈ ಶುಭ ವೇಳೆ ಉಕ್ಕಿ ಬಂದ ಕಾವೇರಿ ಎಲ್ಲರಿಗೆ ದರ್ಶನ ನೀಡಿದಳು. ಬ್ರಹ್ಮ ಕುಂಡಿಕೆಯಿಂದ ಕಾವೇರಿಮಾತೆ ಉಕ್ಕಿ ಹರಿಯುತ್ತಿದ್ದಂತೆ ಅರ್ಚಕರು ಎಲ್ಲರೆಡೆಗೆ ತೀರ್ಥಪ್ರೋಕ್ಷಣೆಮಾಡಿ ಕಾವೇರಿ ಆಗಮನ ದೃಡಪಡಿಸಿದರು. ಭಕ್ತರು ತೀರ್ಥ ಸಂಗ್ರಹಮಾಡಿ ಕಾವೇರಮಾತೆಯನ್ನು ದರ್ಶನಮಾಡಿದ ಧನ್ಯತಾಭಾವದಿಂದ ಮನೆಗೆ ಮರಳಿದ್ರು.ಕಾವೇರಿ ತುಲಾ ಸಂಕ್ರಮಣ ಇನ್ನೂ ಒಂದು ತಿಂಗಳು ನಡೆಯಲಿದ್ದು, ಒಂದು ತಿಂಗಳ ಅವದಿಯಲ್ಲಿ ಇಲ್ಲಿಗೆ ಬಂದು ಪವಿತ್ರ ಸ್ನಾನಮಾಡಿ ತೀರ್ಥ ಸ್ವೀಕರಿಸಿದರೆ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿಂದ ಸಹಸ್ರ ಸಹಸ್ರ ಭಕ್ತರು ತಲಕಾವೇರಿಗೆ ಲಗ್ಗೆಯಿಡುತ್ತಿದ್ದು, ಕಾವೇರಿ ಘೋಷ ಮೊಳಗುತ್ತಿತ್ತು.