• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರಾಖಿ ಸಾವಂತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ..! 16 ವರ್ಷದ ಹಳೆ ಕೇಸ್‌ಗೆ ಮಹತ್ವದ ತಿರುವು

ರಾಖಿ ಸಾವಂತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ..! 16 ವರ್ಷದ ಹಳೆ ಕೇಸ್‌ಗೆ ಮಹತ್ವದ ತಿರುವು

ಸದಾ ಒಂದಲ್ಲ ಒಂದು ವಿವಾದಿಂದ ವೈರಲ್‌ ಆಗುತ್ತಿದ್ದ ಬಿಟೌನ್‌ ಚೆಲುವೆ ನಟಿ ರಾಖಿ ಸಾವಂತ್‌ ಅವರಿಂಗೆ ಇದೀಗ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದೆ. 16 ವರ್ಷಗಳ ಹಳೆಯ ಪ್ರಕರಣವೊಂದರಲ್ಲಿ ಝಾನ್ಸಿ ನ್ಯಾಯಾಲಯವು ಈ ಆದೇಶ ನೀಡಿದೆ.. ಅಸಲಿಗೆ ಆಗಿದ್ದೇನು.. ಪ್ರಕರಣದ ಹಿನ್ನೆಲೆ ಏನು..? ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Oct 17, 2026, 09:08 PM IST|Updated: Oct 17, 2026, 09:17 PM IST
joinshare
ರಾಖಿ ಸಾವಂತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ..! 16 ವರ್ಷದ ಹಳೆ ಕೇಸ್‌ಗೆ ಮಹತ್ವದ ತಿರುವು
Image Credit: Rakhi Sawant case updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬ್ರಹ್ಮಕುಂಡಿಕೆಯಿಂದ ಉಕ್ಕಿಬಂದ ಕಾವೇರಿ : ಕರುನಾಡ ಜೀವನದಿ ಕಂಡು ಭಕ್ತಗಣ ಪುಳಕಿತ

ಬ್ರಹ್ಮಕುಂಡಿಕೆಯಿಂದ ಉಕ್ಕಿಬಂದ ಕಾವೇರಿ : ಕರುನಾಡ ಜೀವನದಿ ಕಂಡು ಭಕ್ತಗಣ ಪುಳಕಿತ

2

ರಾಖಿ ಸಾವಂತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ..! 16 ವರ್ಷದ ಹಳೆ ಕೇಸ್‌ಗೆ ಮಹತ್ವದ ತಿರುವು

3

ಸಿಜೆಪಿ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ, ಫಂಡಿಂಗ್ ಆರೋಪಕ್ಕೆ ಹರಿಪ್ರಸಾದ್ ತಿರುಗೇಟು

4

ರಾಜ್ಯದಲ್ಲಿ ವರುಣಾರ್ಭಟ ಮುಂದುವರಿಕೆ.. ಈ ಜಿಲ್ಲೆಗಳಿಗೆ ಅ.19ರವರೆಗೆ ಎಲ್ಲೊ ಅಲರ್ಟ್ ಘೋಷಣೆ!

5

ಹಸೆಮಣೆ ಏರಲು ಸಜ್ಜಾದ ಕಾವ್ಯಾ ಮಾರನ್‌ ರಿಯಲ್‌ ವಯಸ್ಸು ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Rakhi Sawant case : ಬಾಲಿವುಡ್‌ನ 'ಡ್ರಾಮಾ ಕ್ವೀನ್' ನಟಿ ರಾಖಿ ಸಾವಂತ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡ ಯುವಕನೊಬ್ಬನ ಸಾವಿಗೆ ಸಂಬಂಧಿಸಿದ 16 ವರ್ಷಗಳ ಹಳೆಯ ಪ್ರಕರಣದಲ್ಲಿ ಝಾನ್ಸಿ ನ್ಯಾಯಾಲಯವು ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರೆಂಟ್ ಜಾರಿ ಮಾಡಿದೆ.

ಏನಿದು ಹಳೆ ಪ್ರಕರಣ?
2010ರಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ನಡೆಸಿಕೊಟ್ಟ ಜನಪ್ರಿಯ ರಿಯಾಲಿಟಿ ಶೋ 'ರಖಾ ಕಾ ಇನ್ಸಾಫ್' (Rakhi Ka Insaaf) ಕಾರ್ಯಕ್ರಮದಲ್ಲಿ ಝಾನ್ಸಿಯ ಲಕ್ಷ್ಮಣ್ ಅಹಿರ್ವರ್ ಎಂಬ ಯುವಕ ಭಾಗವಹಿಸಿದ್ದನು. ಪತ್ನಿಯೊಂದಿಗೆ ಉಂಟಾದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಶೋಗೆ ತೆರಳಿದ್ದ ಆ ಯುವಕನನ್ನು, ಶೋನಲ್ಲಿದ್ದ ರಾಖಿ ಸಾವಂತ್ ಸಾರ್ವಜನಿಕವಾಗಿ ಅವಮಾನಿಸಿದ್ದರು ಮತ್ತು ಶಕ್ತಿಹೀನ ಎಂದು ಬೈದಿದ್ದರು ಎಂಬ ಗಂಭೀರ ಆರೋಪವಿತ್ತು.

ಅಕ್ಟೋಬರ್ 23, 2010ರಂದು ಈ ಕಾರ್ಯಕ್ರಮ ಪ್ರಸಾರವಾದ ಬಳಿಕ, ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಲಕ್ಷ್ಮಣ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾದರು. ಜನರನ್ನು ಎದುರಿಸಲು ಹೆದರುತ್ತಿದ್ದ ಅವರು ಊಟ-ತಿಂಡಿಯನ್ನು ಕೂಡ ಬಿಟ್ಟಿದ್ದರು. ರಾಖಿ ತಮ್ಮ ಜೀವನವನ್ನು ಹಾಳುಮಾಡಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಿದ್ದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಕೊನೆಗೆ ನವೆಂಬರ್ 9ರಂದು ಆಸ್ಪತ್ರೆಗೆ ದಾಖಲಿಸಲ್ಪಟ್ಟ ಅವರು, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 10, 2010ರಂದು ಕೊನೆಯುಸಿರೆಳೆದರು.

ತಾಯಿಯ ಕಾನೂನು ಹೋರಾಟ
ಲಕ್ಷ್ಮಣ್‌ ಅವರ ತಾಯಿ ನೀಡಿದ ದೂರಿನ ಪ್ರಕಾರ, ರಾಖಿ ನಡೆಸಿಕೊಟ್ಟ ಆ ಶೋನಿಂದಾಗಿ ಮಗನ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ್ 2010ರ ನವೆಂಬರ್ 10ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮಗನ ಸಾವಿಗೆ ರಾಖಿ ಸಾವಂತ್ ಅವರೇ ಕಾರಣ ಎಂದು ಆರೋಪಿಸಿ ಲಕ್ಷ್ಮಣ್ ತಾಯಿ ಕಾನೂನು ಹೋರಾಟ ಆರಂಭಿಸಿದ್ದರು.

ಕೋರ್ಟ್‌ಗೆ ಗೈರು ಹಾಜರಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಹಿಂದೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ರಾಖಿ ಸಾವಂತ್ ವಿಚಾರಣೆಗೆ ಹಾಜರಾಗಿರಲಿಲ್ಲ. ಸತತ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಈಗ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಅಲ್ಲದೆ, ಕೂಡಲೇ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಳ್ಳುವಂತೆ ಸೂಚನೆ ನೀಡಿದೆ. ಈ ಹೈ-ಪ್ರೊಫೈಲ್ ಪ್ರಕರಣದ ಮುಂದಿನ ವಿಚಾರಣೆಯು ಡಿಸೆಂಬರ್ 1 ರಂದು CAW (FTC) ನ್ಯಾಯಾಲಯದಲ್ಲಿ ನಡೆಯಲಿದೆ.

ಒಟ್ಟಾರೆಯಾಗಿ ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಸದ್ದು ಮಾಡುವ ಬಿ ಟೌನ್‌ ತಾರೆ ರಾಖಿ ಸಾವಂತ್ ಪಾಲಿಗೆ ಈ ಬಾರಿ ಕಾನೂನಿನ ಬಿಸಿ ತಟ್ಟಿದ್ದು, ಮುಂಬರುವ ದಿನಗಳಲ್ಲಿ ನಟಿಯ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಬಂಧನ ಭೀತಿಯೂ ಎದುರಾಗಿದೆ..

Add Zee News as a Preferred Source
TAGS:
Cinema