SOCIAL MEDIA

Newsletter

PARTNER SITES
Select Language Select State

ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿ ಅನುಮಾನಾಸ್ಪದ ಸ್ಪೋಟ: ಸುಧಾರಿತ ಸ್ಪೋಟಕ ಸಾಧನಗಳ‌ನ್ನ ಬಳಸಿರುವ ಶಂಕೆ..!

ಅಕ್ಟೋಬರ್ 20 ರಾಜ್ಯಾದ್ಯಂತ ನವರಾತ್ರಿಯ ಸಂಭ್ರಮ ಆದರೆ ಬೆಂಗಳೂರಿನ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೇಜರ್ ಟೌನ್ ನ ಜಾರ್ಮಿಯಾ ರಸ್ತೆಯಲ್ಲಿ ಮಧ್ಯಾಹ್ನ 2:30 ರ ಸುಮಾರಿಗೆ ಒಂದು ಸ್ಪೋಟ ಸಂಭವಿಸಿತ್ತು.

Reported By Manjunath Naragund Written By Manjunath Naragund
Published: Oct 21, 2026, 06:02 PM IST | Updated: Oct 21, 2026, 06:09 PM IST
Image Credit: Fraser Town
Join

ದಸರಾ ಹಬ್ಬದ ಸಡಗರದ ನಡುವೆ ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಪೋಟ ಸಂಭವಿಸಿದೆ.ಬಿಲ್ಡಿಂಗ್ ಸೆಕ್ಯೂರಿಟಿ ಗಾರ್ಡ್ ಗೆ ಬಂದ ಒಂದು ಅನಾಮಧೇಯ ಕರೆಯ ಹಿಂದೆ ಸಾಕಷ್ಟು ಶಂಕೆ ವ್ಯಕ್ತವಾಗಿದೆ.ಘಟನೆ ನಡೆದ ಜಾಗದಲ್ಲಿ IED ಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿರೋ ಮಾಹಿತಿಯಿದ್ದು,ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಅಕ್ಟೋಬರ್ 20 ರಾಜ್ಯಾದ್ಯಂತ ನವರಾತ್ರಿಯ ಸಂಭ್ರಮ ಆದರೆ ಬೆಂಗಳೂರಿನ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೇಜರ್ ಟೌನ್ ನ ಜಾರ್ಮಿಯಾ ರಸ್ತೆಯಲ್ಲಿ ಮಧ್ಯಾಹ್ನ 2:30 ರ ಸುಮಾರಿಗೆ ಒಂದು ಸ್ಪೋಟ ಸಂಭವಿಸಿತ್ತು. ನಿರ್ಮಾಣ ಹಂತದಲ್ಲಿರೋ ಏಳು ಫ್ಲೋರ್ ಬಿಲ್ಡಿಂಗ್ ನ ಐದನೇ ಫ್ಲೋರ್ ನಲ್ಲಿ ಘಟನೆ ನಡೆದಿದ್ದು ಸ್ತಳದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿತ್ತು.ಕೂಡಲೇ ಸ್ಥಳೀಯರು ಇಬ್ಬರನ್ನ ಬೌರಿಂಗೆ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ತಿಳಿಸಿದ್ರು.ಸ್ಥಳಕ್ಕೆ ಬಂದ ಪುಲಿಕೇಶಿನಗರ ಪೊಲೀಸರು ಆರಂಭದಲ್ಲಿ ಬ್ಯಾಟರಿ ಬ್ಲಾಸ್ಟ್ ಆಗಿರೋ ಅನುಮಾನದ ಮೇರೆಗೆ ಪರಿಶೀಲನೆ ನಡೆಸಿದ್ರು.ಅನುಮಾನ ಕಂಡುಬಂದ ಹಿನ್ನೆಲೆ ಎ ಟಿ ಸಿ ಮತ್ತು ಬಾಂಬ್ ಸ್ಕ್ವಾಡ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಮೇಲ್ನೋಟಕ್ಕೆ Improvised explossive device ಅಂದರೆ ಸುಧಾರಿತ ಸ್ಪೋಟಕ ಸಾಧನಗಳಲ್ಲಿ ಬಳಸುವ ವಸ್ತುಗಳನ್ನ ಬಳಕೆ ಮಾಡಿರೋ ಮಾಹಿತಿ ಸಿಕ್ಕಿದೆ.ಸಿಕ್ಕಿರೋ ವಸ್ತುಗಳನ್ನ ಎಫ್ ಎಸ್ ಎಲ್ ಗೆ ರವಾನೆ ಮಾಡಿದ್ದು ಇನ್ನು ವರದಿ ಬರಬೇಕಿದೆ. ಇನ್ನು ನಿನ್ನೆ ಮಧ್ಯಾಹ್ನದ ಸುಮಾರಿಗೆ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಅಲ್ಲಾವುದ್ದೀನ್ ಎಂಬಾತನಿಗೆ ಒಂದು ಅಪರಿಚಿತ ಕರೆ ಬಂದಿದ್ದು ಒಂದು ಪಾರ್ಸೆಲ್ ಇದೆ ತೆಗೆದುಕೊಳ್ಳುವಂತೆ ಹೇಳಲಾಗಿತ್ತು.ಬಳಿಕ ಆತ ಪೈಂಟರ್ ಆಗಿ ಕೆಲಸ ಮಾಡ್ತಿದ್ದ ಸೂರಜ್ ಎಂಬಾತನಿಗೆ ವಿಷಯ ತಿಳಿಸಿದ್ದನಂತೆ.ಇಬ್ಬರೂ‌ ಹೋಗಿ ವಸ್ತುವನ್ನ ಅಪಾರ್ಟ್ಮೆಂಟ್ ಗೆ ತಂದು ಐದನೇ ಫ್ಲೋರ್ ನಲ್ಲಿ ಚೆಕ್ ಮಾಡಲು ಮುಂದಾಗಿದ್ರು.ಈ ವೇಳೆ ಬ್ಯಾಟರಿ ಬಟನ್ ಕ್ಲಿಕ್ ಮಾಡ್ತಿದ್ದಂತೆ ಏಕಾಏಕಿ ಬ್ಲಾಸ್ಟ್ ಆಗಿದೆ.ಘಟನಾ ಸ್ಥಳದಲ್ಲಿ ಒಂದು ಕವರ್ ನಲ್ಲಿ ಮೂರು ಬ್ಯಾಟಗಳಿದ್ದವು ಎಂಬ‌ ಮಾಹಿತಿ ಸಿಕ್ಕಿದೆ.ಇನ್ನು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದು,ಒಬ್ಬ ಡಿಸ್ಚಾರ್ಜ್ ಆಗಿದ್ದಾನೆ.ಗಾಯಾಳುಗಳು ಹಾಗೂ ಕಟ್ಟದ ಮಾಲೀಕ ಅಬ್ದುಲ್ ರೆಹಮಾನ್ ಎಂಬುವವರ ಹೇಳಿಕೆ ದಾಖಲಿಕೊಂಡು ಸಿಕ್ಕಿರೋ ವಸ್ತುಗಳನ್ನ ಎಫ್ ಎಸ್ ಎಲ್ ಗೆ ಕಳಿಸಲಾಗಿದೆ. ವರದಿ ಬಳಿಕ ಮುಂದಿನ ತನಿಖೆ ಕ್ರಮ ವಹಿಸಲು ಪೊಲೀಸರು ಮುಂದಾಗಿದ್ದಾರೆ.

ಇನ್ನು ಘಟನೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತಿಕ್ರಿಯಿಸಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ. ಜನರು ಗಾಳಿಸುದ್ದಿಗಳಿಗೆ ಕಿವಿಗೊಡಬಾರದು. ಸ್ಫೋಟವು ರಾಸಾಯನಿಕ ಕ್ರಿಯೆಯಿಂದ ಸಂಭವಿಸಿದೆಯೇ ಅಥವಾ ಐಇಡಿ ಸ್ಫೋಟವೇ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ತಿಳಿಯಲಿದೆ ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು ಮತ್ತು ಕಾಲ್ ರೆಕಾರ್ಡ್ ಗಳನ್ನ ಕಲೆ ಹಾಕಿದ್ದು,ಐ ಇ ಡಿ ಬಳಕೆಯ ಶಂಕೆಯ ಆಧಾರದ ಮೇಲೆ ತನಿಖೆ ಸಾಗ್ತಿದೆ. ಯಾರಿಂದ ಸೆಕ್ಯೂರಿಟಿಗೆ ಕರೆ ಬಂದಿತ್ತು..? ಕೃತ್ಯದ ಹಿಂದಿನ ಉದ್ದೇಶವೇನು.. ಎಂದು ತನಿಖೆಯ ಬಳಿಕ ತಿಳಿದುಬರಬೇಕಿದೆ. ವಿಜಯದಶಮಿ ಸಂದರ್ಭದಲ್ಲೇ ಈ ಸ್ಪೋಟ ಸಂಭವಿಸಿರುವ ಹಿನ್ನೆಲೆ‌ ನಿನ್ನೆ ರಾತ್ರಿಯಿಂದಲೇ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿತ್ತು.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES