ಉಗ್ರರ ತಾಣ ಆಗ್ತಾ ಇದಿಯಾ ಕಲಬುರಗಿ? ಮತ್ತೊಬ್ಬ ಶಂಕಿತ ಉಗ್ರ ಸೆರೆ
ಉಗ್ರರ ತಾಣ ಆಗ್ತಾ ಇದಿಯಾ ಕಲಬುರ್ಗಿ, ಇದಕ್ಕೆ ತಾಜಾ ಉದಾಹರಣೆ ಅನ್ನುವಂತೆ ಮತ್ತೂಬ್ಬ ಶಂಕಿತ ಉಗ್ರನ ಆಗಿದೆ.
ಕಲಬುರಗಿ: ಆತ ಕಲಬುರ್ಗಿಯ ಸರಾಫ್ ಬಜಾರ್ ನಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದ. ಅಂಗಡಿಯಲ್ಲಿ ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಅದರ ಕೆಲಸ ಮುಗಿಸಿದ ಮೇಲೆ ದೇಶ ದ್ರೋಹ ಕೆಲಸ ಮಾಡೋದು ಶುರು ಮಾಡಿದ್ದ. ಕಳೆದ ಒಂದು ವರ್ಷದಿಂದ ಲಷ್ಕರ ಎ ತೊಯ್ಬಾ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ...
ಆಂಕರ್: ಹೀಗೆ ಈ ಫೋಟೋದಲ್ಲಿ ಕಾಣುತ್ತೀರಿ ಯುವಕನ ಹೆಸರು ಮಮ್ತಾಜ್ ಉಲ್ ಮಲಿಕ್ ಅಂತ . ಮೂಲತಃ ವೆಸ್ಟ್ ಬೆಂಗಾಲ್ ನಿವಾಸಿ ಕಳೆದ ಹಲವು ವರ್ಷಗಳಿಂದ ಈತನ ಸಹೋದರ ಕಲಬುರ್ಗಿಯಲ್ಲಿ ಕೆಲಸ. ಮಾಡ್ತಾ ಇದ್ದ. ಹಾಗಾಗಿ ಕಿರಿಯ ಸಹೋದರ ಮಮ್ತಾಜ್ ಉಲ್ ಮಲಿಕ್ ನಿಗೂ ಕೂಡಾ ಕಲಬುರ್ಗಿಗೆ ಕರೆಸಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಆತ ಕಲಬುರ್ಗಿಗೆ ಬಂದು ಸಹೋದರನ ವಾಸ್ ಮಾಡ್ತಾ ಇದ್ದ ಅವನ ಸಹೋದರ ಜೊತೆ ಚಿನ್ನದ ಆಭರಣ ತಯಾರು ಮಾಡುವ ಕೆಲಸ ಮಾಡ್ತಾ ಇದ್ದ. ಆದರೆ ಇತ್ತೀಚಿಗೆ ಆತ ಕೆಲಸ ಮುಗಿದ ಮೇಲೆ ದೇಶ ವಿರೋಧಿ ಕೆಲಸ ಮಾಡುತಿದ್ದ. ಆತನ ಸಹೋದರ. ಆಗಮನಕ್ಕ ಬಂದಾಗ ಮಲಿಕ್ ಗೆ ಬುದ್ಧಿವಾದ ಹೇಳಿ, ಆತನ ಮೊಬೈಲ್ ನಲ್ಲಿ ಇರುವ ವೀಡಿಯೊ ಎಸ್ ಎಂ ಎಸ್ ಡಿಲಿಟ್ ಮಾಡಿದ್ದ ಆದರೂ ಆತನ ದೇಶ ವಿರೋಧಿ ಕೆಲಸ ಮಾಡೋದನ್ನ ಬಿಟ್ಟಿರಲಿಲ್ಲ, ಫ್ರೀ ಇದ್ದ ಸಮಯದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆ ನಿಕಟ ಸಂಬರ್ಕ ಮಾಡ್ತಾ ಇದ್ದ ಅವರೊಂದಿಗೆ ಎಸ್ಎಂಎಸ್ ಮಾಡೋದು ಮಾಡ್ತಾ ಇದ್ದ ಇದರ ಮಾಹಿತಿ ಪಡೆದ ಕೇಂದ್ರೀಯ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ನೆರವಿನಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆದರೆ ಓರ್ವನ ಪತ್ರ ಏನು ಕಂಡು ಬರದ ಹಿನ್ನಲೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಆದರೆ ಮಮ್ತಾಜ್ ಉಲ್ ಮಲಿಕ್ ನ ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ ವಿಡಿಯೋ ಶೇರ್ ಮಾಡಿದ್ದು ಪಾಕಿಸ್ತಾನದ ಮೂಲದ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ನಿರಂತರ ಸಂಪರ್ಕ ಹೊಂದಿದ್ದ ಮಲೀಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ..
ಕಲಬುರ್ಗಿಯಲ್ಲಿ ಇತ್ತೀಚೆಗೆ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಶಂಕಿತ ಉಗ್ರರರು ಪತ್ತೆಯಾಗಿದ್ದು ಜನರಲ್ಲಿ ಆತಂಕ ಶುರು ಆಗಿದೆ. ಅದಕ್ಕೆ ತಾಜಾ ಉದಾಹರಣೆ ಅನ್ನುವಂತೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಲಷ್ಕರ್ ಎ ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದಾನೆ. ಈ ಬಗ್ಗೆ ಪ್ರತಿ ಕ್ರಿಯೆ ನೀಡಿರುವ ವಿಧಾನ ಪರಿಷತ್ತಿನ ಸದಸ್ಯ ಸಿಟಿ ರವಿ ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ಸರಬರಾಜು ಆಗ್ತಾ ಇದೆ. ಅಲ್ಲದೆ ದಿನದಿಂದ ದಿನಕ್ಕೆ ದೇಶದಲ್ಲಿ ಸ್ಲಿಪ್ಪರ್ ಸೆಲಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ಅದರಲ್ಲೂ ಗೃಹ ಸಚಿವರ ತವರು ಜಿಲ್ಲೆ ದೇಶದ್ರೋಹಿಗಳು ಇದ್ದರೆ ಅಂದರೆ ಲಘುವಾಗಿ ತೆಗೆದುಕೊಳ್ಳಂಗಿಲ್ಲ ಗಂಭೀರವಾಗಿ ಗೆತೆದುಕೊಳ್ಳಬೇಕು. ದೇಶ ದ್ರೋಹಿಗಳಿಗೆ ಯಾರು ಬೆಂಬಲ ಯಾರು ಕೊಡ್ತಾ ಇದ್ದಾರೆ. ಇವರ ಜೊತೆ ಯಾರು ಸಂಪರ್ಕದಲ್ಲಿ ಇದ್ದಾರೆ ಅನ್ನೋದು ಸಂಪೂರ್ಣವ ತನಿಖೆ ಮಾಡಬೇಕು. ಭಯೋತ್ಪಾದನೆ ಬೇರು ಮಟ್ಟದಿಂದ ಕಿತ್ತು ಹಾಕಬೇಕು ಅಂತ ಆಗ್ರಹಿಸಿದರು.
ಒಟ್ಟಲ್ಲಿ ದೇಶದಲ್ಲೇ ಇದ್ದು ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಯುವಕನ ಬಂಧಿಸಿದ ಪೊಲೀಸರು ಆತ ಎಷ್ಟು ವರ್ಷಗಳಿಂದ ಈ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ. ಆತ ಕಲಬುರ್ಗಿಯಲ್ಲಿ ಉಗ್ರ ಚಟುವಟಿಕೀಗಳನ್ನು ಏನಾದ್ರೂ ಮಾಡ್ತಾ ಇದ್ದಾನ ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.