• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್‌ : ಸೂಟ್​ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್‌ ಪಕ್ಕನಾ..?

ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್‌ : ಸೂಟ್​ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್‌ ಪಕ್ಕನಾ..?

ಬಿಗ್‌ಬಾಸ್ ಕನ್ನಡ 13 ಮನೆಯಲ್ಲಿ ಆಟದ ರೂಲ್ಸ್ ಅರ್ಥಮಾಡಿಕೊಳ್ಳದ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. "ಗೇಮ್ ಅರ್ಥ ಆಗಿಲ್ಲ ಅಂದ್ರೆ ಈಗಲೇ ಸೂಟ್​ಕೇಸ್ ಪ್ಯಾಕ್ ಮಾಡಿ ಹೊರಡಿ" ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.. ಇದರ ಬೆನ್ನಲ್ಲೇ ಇಂದು ಜಗ್ಗ ಮಮ್ಮಿ ಮೇಲೆ ಎಲಿಮಿನೇಟ್‌ ತೂಗುಗತ್ತಿ ತೂಗಾಡುತ್ತಿದ್ದು.. ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಏನಾಗುತ್ತೆ ಅನ್ನೋ ಕುತೂಹಲ ಮೂಡಿದೆ..

Written ByKrishna NK
Published: Oct 18, 2026, 07:01 PM IST|Updated: Oct 18, 2026, 07:02 PM IST
joinshare
ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್‌ : ಸೂಟ್​ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್‌ ಪಕ್ಕನಾ..?
Image Credit: bigg boss Jagga Mummy

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಅನಿರುದ್ಧ್ ಫಸ್ಟ್‌ ಗರ್ಲ್‌ಫ್ರೇಂಡ್‌ ಯಾರು ಗೊತ್ತೆ..? 6 ವರ್ಷ ದೊಡ್ಡವಳು.. ಸಖತ್‌ ವೈರಲ್‌ ಆಗಿದ್ವು ಫೋಟೋಸ್‌

ಅನಿರುದ್ಧ್ ಫಸ್ಟ್‌ ಗರ್ಲ್‌ಫ್ರೇಂಡ್‌ ಯಾರು ಗೊತ್ತೆ..? 6 ವರ್ಷ ದೊಡ್ಡವಳು.. ಸಖತ್‌ ವೈರಲ್‌ ಆಗಿದ್ವು ಫೋಟೋಸ್‌

2

ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ವಾರ್ನಿಂಗ್‌ : ಸೂಟ್​ಕೇಸ್ ಪ್ಯಾಕ್ ಆಗಿದೆ, ಎಲಿಮಿನೇಟ್‌ ಪಕ್ಕನಾ..?

3

ಉಗ್ರರ ತಾಣ ಆಗ್ತಾ ಇದಿಯಾ ಕಲಬುರಗಿ? ಮತ್ತೊಬ್ಬ ಶಂಕಿತ ಉಗ್ರ ಸೆರೆ

4

ಮೈಸೂರು ದಸರಾ ಏರ್ ಶೋ: ನಾಳೆ ಆಕಾಶದಲ್ಲಿ ಸೂರ್ಯಕಿರಣ್ ತಂಡದ ಅದ್ಭುತ ವೈಮಾನಿಕ ಕಸರತ್ತು

5

‘ರಾಹುಲ್ ಗಾಂಧಿ ಒರಿಜಿನಲ್ ಬ್ರೀಡ್ ಅಲ್ಲ’; ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ವಾಗ್ದಾಳಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kannada 13 today elimination : ಬಿಗ್ ಬಾಸ್ ಮನೆಯಲ್ಲಿ ಆಟದ ರೂಲ್ಸ್ ಅರ್ಥ ಮಾಡಿಕೊಳ್ಳದೇ ಇರೋರು ಹಾಗೂ ಟಾಸ್ಕ್ ಹಾಳು ಮಾಡೋ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಈ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರ ಕೋಪ ನೆತ್ತಿಗೇರಿತ್ತು. ಕಳೆದ ವಾರ 'ಮಾಡರ್ನ್ ಕವಿ' ಮಂಜು ಮನೆಯಿಂದ ಹೊರಬಂದಿದ್ದರು. ಆದ್ರೆ, ಈವರೆಗೆ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡೋ ಅಧಿಕಾರ ತನಗಿಲ್ಲ ಅಂತಾ ಹೇಳ್ತಿದ್ದ ಸುದೀಪ್, ಈ ಬಾರಿ ಮಾತ್ರ "ನನಗೂ ಆ ಪವರ್ ಇದೆ, ಬೇಕಿದ್ರೆ ಗೇಟ್ ಓಪನ್ ಮಾಡಿ ನಾನೇ ಹೊರಹಾಕ್ತೀನಿ" ಅಂತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಗೇಮ್ ಅರ್ಥ ಆಗಿಲ್ಲ ಅಂದ್ರೆ ಈಗಲೇ ಸೂಟ್​ಕೇಸ್ ಪ್ಯಾಕ್ ಮಾಡಿ!
ಶನಿವಾರದ ಎಪಿಸೋಡ್‌ನಲ್ಲಿ ಟಾಸ್ಕ್ ಮತ್ತು ಆಟದ ನಿಯಮಗಳ ಬಗ್ಗೆ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಕೆಲವರು ಸರಿಯಾಗಿ ಆಡದೆ ಟಾಸ್ಕ್ ರದ್ದಾಗುವಂತೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಜಗ್ಗ ಮಮ್ಮಿ ಕಡೆ ತಿರುಗಿ ಪ್ರಶ್ನೆ ಕೇಳಿದಾಗ, ಜಗ್ಗ ಮಮ್ಮಿಗೆ ವಿಷಯವೇ ಸರಿಯಾಗಿ ಅರ್ಥವಾಗಿಲ್ಲ. ತಮಗೆ ತೋಚಿದ ಉತ್ತರ ಕೊಟ್ಟ ಅವರು, "ನನಗೆ ಇನ್ನು ಗೇಮ್ ಸರಿಯಾಗಿ ಅರ್ಥ ಆಗಿಲ್ಲ ಸರ್" ಅಂದ್ರು. ಇದನ್ನು ಕೇಳಿ ಸುದೀಪ್‌ಗೆ ಸಿಟ್ಟು ನೆತ್ತಿಗೇರಿತು.

ಕೋಪಗೊಂಡ ಸುದೀಪ್, "ಇಷ್ಟು ವಾರಗಳಾದ್ರೂ ಆಟ ಅರ್ಥ ಆಗಿಲ್ವಾ? ಹಾಗಾದ್ರೆ ಇನ್ಯಾಕೆ ಅಲ್ಲಿರೋದು? ಕೂಡಲೇ ಹೋಗಿ ಸೂಟ್​ಕೇಸ್ ರೆಡಿ ಮಾಡಿಕೊಳ್ಳಿ, ಐದು ನಿಮಿಷದಲ್ಲಿ ಮನೆಯಿಂದ ಹೊರಗೆ ಬನ್ನಿ" ಅಂತಾ ಶಾಕ್ ಕೊಟ್ಟರು. ಸುದೀಪ್ ಮಾತು ಕೇಳಿ ಜಗ್ಗ ಮಮ್ಮಿ ಹಾಗೂ ಇಡೀ ಮನೆ ದಂಗಾಗಿ ಹೋಯ್ತು.

"ನನಗೂ ಗೇಟ್ ಓಪನ್ ಮಾಡೋ ಪವರ್ ಇದೆ"
ಸ್ಪರ್ಧಿಗಳ ಬಳಿ ಮಾತಾಡುತ್ತಾ ಸುದೀಪ್, "ಯಾರಿಗೆ ಆಟ ಅರ್ಥ ಆಗಿಲ್ಲವೋ ಅವರು ಈ ಕೂಡಲೇ ಹೊರಗೆ ಬನ್ನಿ, ನಂಗೆ ಯಾವುದೇ ಬೇಸರ ಇಲ್ಲ. ಈ ಬಾರಿ ನನಗಂತೂ ಇಬ್ಬರು ಮೂವರನ್ನು ಹೊರಗೆ ಕಳಿಸಬೇಕು ಅನಿಸುತ್ತಿದೆ. ಹೊರಗೆ ಕಳಿಸುವ ಅಧಿಕಾರ ನನಗೂ ಇದೆ, ನಾನೂ ಗೇಟ್ ತೆರೆಯಬಲ್ಲೆ" ಎಂದು ಹೇಳುವ ಮೂಲಕ ಎಲ್ಲರಿಗೂ ಖಡಕ್ ಎಚ್ಚರಿಕೆ ನೀಡಿದರು.

ಜಗ್ಗ ಮಮ್ಮಿ ಮನೆಯಿಂದ ಹೊರಬಂದ್ರರಾ?
ಸುದೀಪ್ ಹೇಳಿದ ತಕ್ಷಣ ಜಗ್ಗ ಮಮ್ಮಿ ತಮ್ಮ ಸೂಟ್​ಕೇಸ್ ರೆಡಿ ಮಾಡಿಕೊಂಡು ಬಾಗಿಲು ಬಳಿ ಬಂದರು. ಆದರೂ, ಸುದೀಪ್ ಕೊನೆಗೆ ಅವರನ್ನು ಆಟದಿಂದ ಹೊರಹಾಕಲಿಲ್ಲ. ಸದ್ಯ ಜಗ್ಗ ಮಮ್ಮಿ ಈ ವಾರ ನಾಮಿನೇಷನ್‌ನಲ್ಲಿದ್ದಾರೆ. ಅವರ ಜೊತೆಗೆ ಇನ್ನು ಕೆಲವು ಪ್ರಮುಖ ಸ್ಪರ್ಧಿಗಳು ಕೂಡ ಡೇಂಜರ್ ಜೋನ್‌ನಲ್ಲಿದ್ದು, ಈ ವಾರ ಮನೆಯಿಂದ ಯಾರು ಹೊರನಡೆಯಲಿದ್ದಾರೆ ಎಂಬುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

Add Zee News as a Preferred Source
TAGS:
Kannada News