• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದಸರಾದಲ್ಲಿ ಆತಂಕ ಸೃಷ್ಟಿಸಿದ ಆನೆ.. ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಟ! ಜಂಬೂಸವಾರಿ ಅರ್ಧಕ್ಕೆ ಮೊಟಕು

ದಸರಾದಲ್ಲಿ ಆತಂಕ ಸೃಷ್ಟಿಸಿದ ಆನೆ.. ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಟ! ಜಂಬೂಸವಾರಿ ಅರ್ಧಕ್ಕೆ ಮೊಟಕು

ದಸರಾ ಅಂಬಾರಿ ಮೆರವಣಿಗೆ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಮೊದಲ ಬಾರಿ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದೆ. ಜೀವ ಭಯದಿಂದ ನೆರೆದಿದ್ದ ಜನರು ಸಹ ಚಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ.. ಈ ಕುರಿತ ಹೆಚ್ಚಿನ ಸುದ್ದಿ ಇಲ್ಲಿದೆ..

Written ByKrishna NK
Published: Oct 21, 2026, 06:29 PM IST|Updated: Oct 21, 2026, 06:31 PM IST
joinshare
ದಸರಾದಲ್ಲಿ ಆತಂಕ ಸೃಷ್ಟಿಸಿದ ಆನೆ.. ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಟ! ಜಂಬೂಸವಾರಿ ಅರ್ಧಕ್ಕೆ ಮೊಟಕು
Image Credit: Shivamogga Dasara Elephant

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ

ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ

2

ಕಣ್ಣನ್ನೇ ಟಾರ್ಗೆಟ್‌ ಮಾಡುತ್ತಾ ಈ ಹಾವು? ಹಾವಿನ ವಿಚಿತ್ರ ವರ್ತನೆಯ ಅಸಲಿ ಕಥೆ!

3

2027ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್-ರೋಹಿತ್ ಆಡ್ತಾರಾ? ಬಿಸಿಸಿಐ ಅಧ್ಯಕ್ಷರಿಂದ ಗ್ರೀನ್ ಸಿಗ್ನಲ್, ಆದ್ರೆ 2 ಷರತ್ತುಗಳು!

4

“ನಾಳೆ ನನಗೇನಾದರೂ ಆದರೆ ಯಾರು ಹೊಣೆ?” ಖ್ಯಾತ ನಟಿಗೆ ಬೆದರಿಕೆ! ಬೆಚ್ಚಿಬಿದ್ದ ಕಲಾವಿದೆ

5

ದಸರಾದಲ್ಲಿ ಆತಂಕ ಸೃಷ್ಟಿಸಿದ ಆನೆ.. ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಟ! ಜಂಬೂಸವಾರಿ ಅರ್ಧಕ್ಕೆ ಮೊಟಕು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಶಿವಮೊಗ್ಗ: ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹಾಗೂ ಸಂಭ್ರಮದಿಂದ ನಡೆದುಕೊಂಡು ಬರುವ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಈ ಬಾರಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ.  ನಗರದಲ್ಲಿ ನಡೆಯುತ್ತಿದ್ದ ಜಂಬೂಸವಾರಿ ಮೆರವಣಿಗೆಯ ವೇಳೆ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ 'ಸೋಮಣ್ಣ' ಎಂಬ ಆನೆ ಏಕಾಏಕಿ ಹೆದರಿ ದಿಕ್ಕಾಪಾಲಾಗಿ ಓಡಿಹೋಗಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೌದು.. ಇಂದು ಮಧ್ಯಾಹ್ನ ಶಿವಮೊಗ್ಗದ ಐತಿಹಾಸಿಕ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಆರಂಭವಾದ ಜಂಬೂಸವಾರಿಯು ಅಲ್ಲಮಪ್ರಭು ಮೈದಾನದವರೆಗೆ ಸಾಗಬೇಕಿತ್ತು. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮೆರವಣಿಗೆಯು ಸಾಗುತ್ತಿದ್ದ ಮಾರ್ಗದುದ್ದಕ್ಕೂ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಆದರೆ, ಮೆರವಣಿಗೆಯು ಮಧ್ಯಭಾಗದಲ್ಲಿದ್ದಾಗ, ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಯಾವುದೋ ಸದ್ದು ಅಥವಾ ಜನಸ್ತೋಮಕ್ಕೆ ವಿಚಲಿತಗೊಂಡು ಇದ್ದಕ್ಕಿದ್ದಂತೆ ಹೆದರಿ ದಿಕ್ಕಾಪಾಲಾಗಿ ಓಡಲು ಶುರು ಮಾಡಿತು.

ಆನೆ ಏಕಾಏಕಿ ಓಡಲು ಶುರು ಮಾಡುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಸಾರ್ವಜನಿಕರು ಪ್ರಾಣಭಯದಿಂದ ಅಲ್ಲಿಂದ ಓಡಿ ಹೋದರು. ಆನೆ ಓಡಿದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಒಂದು ಕಾರು ಹಾಗೂ 2 ರಿಂದ 3 ಬೈಕ್‌ಗಳಿಗೆ ತೀವ್ರ ಹಾನಿಯಾಗಿದೆ. ಅಲ್ಲದೆ, ಆನೆಯ ಮೇಲಿದ್ದ ಚಾಮುಂಡೇಶ್ವರಿ ದೇವಿಯ ಬೆಳ್ಳಿ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣವಾಗಿ ಹಾನಿಗೊಂಡಿತು..

 

ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಹಾಗೂ ಡಿಸಿ, ಎಸ್‌ಪಿ ಭೇಟಿ
ಆನೆಯನ್ನು ನಿಯಂತ್ರಿಸಲು ಜೊತೆಯಲ್ಲಿದ್ದ ಮಾವುತರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಭಾರೀ ಹರಸಾಹಸ ಪಟ್ಟರು. ಕೊನೆಗೆ ಪರಿಸ್ಥಿತಿ ಕೈಮೀರುತ್ತಿದ್ದಂತೆ ಅರಿವಳಿಕೆ ಮದ್ದು ನೀಡಿ ಆನೆಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಯಿತು. ಸ್ವಲ್ಪ ದೂರ ಓಡಿಹೋಗಿದ್ದ ಸೋಮಣ್ಣ ಆನೆ ಬಳಿಕ ಸಹಜ ಸ್ಥಿತಿಗೆ ಮರಳಿತು. ಘಟನಾ ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು.

ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ
ಈ ಬಾರಿಯ ಶಿವಮೊಗ್ಗ ದಸರಾದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿತ್ತು. ಹಲವು ವರ್ಷಗಳಿಂದ ನಿರಂತರವಾಗಿ ಬೆಳ್ಳಿ ಅಂಬಾರಿ ಹೊರುತ್ತ ಬಂದಿದ್ದ 'ಸಾಗರ' ಎಂಬ ಆನೆಯ ಬದಲಿಗೆ, ಈ ಬಾರಿ 'ಸೋಮಣ್ಣ' ಆನೆಗೆ ಆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮೊದಲ ಬಾರಿಗೆ ಬೆಳ್ಳಿ ಅಂಬಾರಿ ಹೊತ್ತು ಹೊರಣ ಸೋಮಣ್ಣ ಆನೆಗೆ ಇದು ಹೊಸ ಅನುಭವ. ಆದರೆ ಕೊನೆಯ ಹಂತದಲ್ಲಿ ನಡೆದ ಈ ಅನಿರೀಕ್ಷಿತ ಅನಾಹುತದಿಂದ ಇಡೀ ದಸರಾ ಸಂಭ್ರಮವು ಆತಂಕಕ್ಕೆ ತಿರುಗುವಂತಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Add Zee News as a Preferred Source
TAGS:
Kannada News