• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಲ್ವಾ..? ಕೊನೆಯ ದಿನಾಂಕ ನಿಗದಿ, ತಪ್ಪಿದರೆ ರೇಷನ್ ಬಂದ್!

ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಲ್ವಾ..? ಕೊನೆಯ ದಿನಾಂಕ ನಿಗದಿ, ತಪ್ಪಿದರೆ ರೇಷನ್ ಬಂದ್!

ರಾಜ್ಯದಲ್ಲಿ ಅಕ್ರಮ ಪಡಿತರ ವಿತರಣೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ರೇಷನ್ ಕಾರ್ಡ್ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬರುವ ಅಕ್ಟೋಬರ್ 20 ಕೊನೆಯ ದಿನವಾಗಿದ್ದು, ಒಂದು ವೇಳೆ ಈ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಅಂತಹ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಪಡಿತರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 16, 2026, 09:38 PM IST|Updated: Oct 16, 2026, 09:42 PM IST
joinshare
ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಲ್ವಾ..? ಕೊನೆಯ ದಿನಾಂಕ ನಿಗದಿ, ತಪ್ಪಿದರೆ ರೇಷನ್ ಬಂದ್!
Image Credit: Ration Card ekyc

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸಿಕ್ರೇಟ್‌ ಆಗಿ ಚಿನ್ನದ ಭೇಟೆಯಾಡುತ್ತಿದೆ ಡ್ರ್ಯಾಗನ್‌ ದೇಶ : 1,000 ಟನ್‌ ಬಂಗಾರ ಖರೀದಿಸಿದ್ದೇಕೆ ಗೊತ್ತೆ ಚೀನಾ..?

ಸಿಕ್ರೇಟ್‌ ಆಗಿ ಚಿನ್ನದ ಭೇಟೆಯಾಡುತ್ತಿದೆ ಡ್ರ್ಯಾಗನ್‌ ದೇಶ : 1,000 ಟನ್‌ ಬಂಗಾರ ಖರೀದಿಸಿದ್ದೇಕೆ ಗೊತ್ತೆ ಚೀನಾ..?

2

ಕೇಂದ್ರ ಸರ್ಕಾರದ ಹೊಸ ಹೆಜ್ಜೆ : ನವೆಂಬರ್ 1ರಿಂದ ದೇಶದಲ್ಲಿ CNAP ವ್ಯವಸ್ಥೆ ಜಾರಿ.. ಏನಿದು..?

3

ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಲ್ವಾ..? ಕೊನೆಯ ದಿನಾಂಕ ನಿಗದಿ, ತಪ್ಪಿದರೆ ರೇಷನ್ ಬಂದ್!

4

ಷೇರು ಹೂಡಿಕೆಗೆ ಸ್ಮಾರ್ಟ್ ಅಸಿಸ್ಟೆಂಟ್: ಕ್ವಾಲಾ ಇಂಟೆಲ್ AI ಎಂದರೇನು? ಇದನ್ನು ಬಳಸುವುದು ಹೇಗೆ?

5

ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್‌ಡಿಕೆ ಹೊಸ ಪ್ರಸ್ತಾವನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ರಾಜ್ಯದಲ್ಲಿ ಪ್ರಸ್ತುತ ಸುಮಾರು ಎರಡು ಕೋಟಿ ಅರವತ್ತೇಳು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಫಲಾನುಭವಿಗಳಿದ್ದಾರೆ. ಆದರೆ ಇವರಲ್ಲಿ ಕೆಲವರು ಅನರ್ಹರಾಗಿದ್ದರೂ ಅಕ್ರಮವಾಗಿ ಸೌಲಭ್ಯ ಪಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ದೊಡ್ಡ ಮನೆಗಳನ್ನು ಬಾಡಿಗೆಗೆ ಪಡೆದು, ಐಷಾರಾಮಿ ಕಾರುಗಳಲ್ಲಿ ತಿರುಗುವವರು ಕೂಡ ರೇಷನ್ ಅಂಗಡಿಗಳ ಮುಂದೆ ಸಾಲಾಗಿ ನಿಂತು ಪಡಿತರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಅನರ್ಹರನ್ನು ಗುರುತಿಸಿ ಸಾರ್ವಜನಿಕ ಧಾನ್ಯ ಸೋರಿಕೆಯನ್ನು ತಡೆಯಲು ಸರ್ಕಾರ ಇ-ಕೆವೈಸಿಯಂತಹ ಕಠಿಣ ಕ್ರಮ ಕೈಗೊಂಡಿದೆ.

ಹೌದು.. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ಕಡ್ಡಾಯವಾಗಿ ಆಧಾರ್ ಆಧಾರಿತ ಇ-ಕೆವೈಸಿ ಪರಿಶೀಲನೆಯನ್ನು ಮುಗಿಸಬೇಕು. ಆದರೆ ಅಚ್ಚರಿಯ ಸಂಗತಿಯೆಂದರೆ, ಇಷ್ಟು ದಿನ ಕಳೆದರೂ ಲಕ್ಷಾಂತರ ಫಲಾನುಭವಿಗಳು ಇನ್ನೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಇವರು ಉದ್ದೇಶಪೂರ್ವಕವಾಗಿ ಸುಮ್ಮನಿದ್ದಾರೋ ಅಥವಾ ತಾಂತ್ರಿಕ ಮಾಹಿತಿಯ ಕೊರತೆಯಿಂದ ಮಾಡಿಸಿಲ್ಲವೋ ಎಂಬ ಬಗ್ಗೆ ಗೊಂದಲವಿದೆ. ಕಾರಣ ಏನೇ ಇರಲಿ, ತಮ್ಮ ಪಡಿತರವನ್ನು ಪಡೆದುಕೊಳ್ಳಲು ಇನ್ನುಳಿದ ಕೆಲವೇ ದಿನಗಳಲ್ಲಿ ಇ-ಕೆವೈಸಿ ಮಾಡಿಸುವುದು ಅತ್ಯಾವಶ್ಯಕವಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು 'ಅನ್ನ ಸೇವೆ' ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಜನರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯದೆ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು. ಆದರೆ ಈ ಸೌಲಭ್ಯವು ಸದ್ಯಕ್ಕೆ ಕೆಲವು ನಿರ್ದಿಷ್ಟ ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಉಳಿದ ಜಿಲ್ಲೆಗಳ ಪಡಿತರದಾರರು, ಅನಿವಾರ್ಯವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಕುಟುಂಬದ ಸದಸ್ಯರ ವಿವರಗಳನ್ನು ನವೀಕರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಮನೆಯಿಂದಲೇ ಆ್ಯಪ್ ಮೂಲಕ ಮಾಡುವವರು ಗೂಗಲ್ ಪ್ಲೇ ಸ್ಟೋರ್‌ನಿಂದ 'ಅನ್ನ ಸೇವೆ' ಹಾಗೂ 'ಆಧಾರ್ ಫೇಸ್ ಆರ್‌ಡಿ' ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ತೆರೆದು ರೇಷನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ ಬರುವ ಒಟಿಪಿ ಪರಿಶೀಲಿಸಬೇಕು. ನಂತರ ಯುಐಡಿಎಐ ಫೇಸ್ ಅಥೆಂಟಿಕೇಶನ್ ಬಳಸಿ ಮುಖವನ್ನು ಸ್ಕ್ಯಾನ್ ಮಾಡಿದರೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

Add Zee News as a Preferred Source
TAGS:
Kannada News