• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್‌ಡಿಕೆ ಹೊಸ ಪ್ರಸ್ತಾವನೆ

ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್‌ಡಿಕೆ ಹೊಸ ಪ್ರಸ್ತಾವನೆ

ಕೆಪಿಸಿಸಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಪ್ರಸ್ತುತ ಇರುವ ಸರ್ಕಾರಿ ಉದ್ಯೋಗದ ಸೇವಾ ಅವಧಿಯನ್ನು ಕಡಿಮೆ ಮಾಡಬೇಕು, ಪ್ರತಿ ಒಂದು ಕುಟುಂಬಕ್ಕೆ ಕನಿಷ್ಠ ಒಂದು ಸರ್ಕಾರಿ ನೌಕರಿ ಸಿಗುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 16, 2026, 07:49 PM IST|Updated: Oct 16, 2026, 07:51 PM IST
joinshare
ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್‌ಡಿಕೆ ಹೊಸ ಪ್ರಸ್ತಾವನೆ
Image Credit: HD Kumaraswamy news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಷೇರು ಹೂಡಿಕೆಗೆ ಸ್ಮಾರ್ಟ್ ಅಸಿಸ್ಟೆಂಟ್: ಕ್ವಾಲಾ ಇಂಟೆಲ್ AI ಎಂದರೇನು? ಇದನ್ನು ಬಳಸುವುದು ಹೇಗೆ?

ಷೇರು ಹೂಡಿಕೆಗೆ ಸ್ಮಾರ್ಟ್ ಅಸಿಸ್ಟೆಂಟ್: ಕ್ವಾಲಾ ಇಂಟೆಲ್ AI ಎಂದರೇನು? ಇದನ್ನು ಬಳಸುವುದು ಹೇಗೆ?

2

ಸೇವಾ ಅವಧಿ ಕಡಿಮೆ ಮಾಡಿ, ಕುಟುಂಬಕ್ಕೊಂದು ಸರ್ಕಾರಿ ನೌಕರಿ : ಹೆಚ್‌ಡಿಕೆ ಹೊಸ ಪ್ರಸ್ತಾವನೆ

3

ಪವಿತ್ರ ಕಾವೇರಿ ತೀರ್ಥೋದ್ಭವ : ಅ.17 ರಂದು ರಜೆ ಘೋಷಣೆ, ಸಾರಿಗೆ ಸೌಲಭ್ಯ ಸೇರಿದಂತೆ ಮಾಹಿತಿ

4

ಮಳೆ ನಿಂತಿತು ಅಂದುಕೊಳ್ಳಬೇಡಿ.. ರಾಜಧಾನಿ ಜನರಿಗೆ ಎಚ್ಚರಿಕೆ.. ಈ 5 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ!

5

ಟೆಸ್ಲಾದಿಂದ ಹಾರುವ ಕಾರು: ರಾಕೆಟ್ ತಂತ್ರಜ್ಞಾನದೊಂದಿಗೆ ಹೊಸ ರೋಡ್‌ಸ್ಟರ್ ಅನಾವರಣ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ನಗರದಲ್ಲಿ ನಡೆದ ಕೆಪಿಎಸ್‌ಸಿ ವಿದ್ಯಾರ್ಥಿಗಳ ಸಂವಾದದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಯುವ ಸಮೂಹದ ಅಳಲನ್ನು ಆಲಿಸಿದರು. ನಿರುದ್ಯೋಗ ನಿವಾರಣೆಗಾಗಿ ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಎಂಬ ವಿನೂತನ ಚಿಂತನೆಯನ್ನು ತೆರೆದಿಟ್ಟಿರುವ ಅವರು, ದಸರಾ ಬಳಿಕ ಕೆಪಿಎಸ್ಸಿ ಹಗರಣದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ರು.

ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ
ಸಂವಾದದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಸ್ತುತ ಇರುವ ಸರ್ಕಾರಿ ಉದ್ಯೋಗಗಳ ಸೇವಾವಧಿಯ ಬಗ್ಗೆ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಪ್ರತಿ ಕುಟುಂಬಕ್ಕೂ ಕನಿಷ್ಠ ಒಂದು ಸರ್ಕಾರಿ ಉದ್ಯೋಗ ಸಿಗುವಂತಾಗಲು, 35 ವರ್ಷಗಳ ಸೇವಾವಧಿಯನ್ನು 10 ರಿಂದ 15 ಅಥವಾ 20 ವರ್ಷಗಳಿಗೆ ಇಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಸಿಗುವುದರ ಜೊತೆಗೆ, ಉದ್ಯೋಗ ಸಿಗದೇ ಇರುವ ಇತರರಿಗೂ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು. ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಮಾತನಾಡಿದ ಅವರು, ಕೇವಲ ಚರ್ಚೆಯಿಂದ ವಿರಮಿಸುವುದು ಬೇಡ. ದಸರಾ ಹಬ್ಬದ ಬಳಿಕ ಯುವಕರ ಪರವಾಗಿ ಬಹುದೊಡ್ಡ ಹೋರಾಟವನ್ನು ಸಂಘಟಿಸೋಣ, ನಾನು ನಿಮ್ಮ ಜೊತೆ ನಿಲ್ಲುತ್ತೇನೆ‌ ಎಂದು ಭರವಸೆ ನೀಡಿದರು.

ಕೆಪಿಎಸ್ಸಿ ಭ್ರಷ್ಟಾಚಾರದ ಬಗ್ಗೆ ಯುವಕರ ಅಳಲು
ಸಂವಾದದ ವೇಳೆ ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ ನೂರಾರು ಯುವ ಅಭ್ಯರ್ಥಿಗಳು ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಳಂಬದಿಂದ ತಾವು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಅಭ್ಯರ್ಥಿಗಳು ಸಚಿವರ ಮುಂದೆ ತೋಡಿಕೊಂಡರು.
​ಉತ್ತರ ಕರ್ನಾಟಕ ಭಾಗದಿಂದ ಬಂದು ಬೆಂಗಳೂರಿನಲ್ಲಿ ಕಷ್ಟಪಟ್ಟು ಓದುತ್ತಿದ್ದರೂ, ಕೆಪಿಎಸ್ಸಿಯ ಗೊಂದಲಮಯ ನಡವಳಿಕೆಯಿಂದ ಯುವಕರ ಭವಿಷ್ಯ ಅಯೋಮಯವಾಗಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅರ್ಹ ಯುವಕರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಎಚ್.ಡಿ. ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಪ್ರಿಯಾಂಕ್ ಖರ್ಗೆ ಅವರ ನಡವಳಿಕೆಯನ್ನು ನೋಡಿದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಬೇಕಿದ್ದ ಅವಕಾಶ ತಪ್ಪಿಸಲು ಸಿದ್ದರಾಮಯ್ಯ ಕಾರಣ. ಅದಕ್ಕಾಗಿ  ಮತ್ತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಒಳಸಂಚು ನಡೆದಿರುವಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಪೊಲೀಸರ ವಿಚಾರ ಹಾಗೂ ವೈಯಕ್ತಿಕ ಟೀಕೆಗಳಿಗೂ ತಿರುಗೇಟು ನೀಡಿದ ಅವರು, ತಮ್ಮ ಅಧಿಕಾರಾವಧಿ ಕೊನೆ ಹಂತಕ್ಕೆ ಬಂದಿದೆ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದರು.

Add Zee News as a Preferred Source
TAGS:
Karnataka Politics