ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ : ಪ್ರತಿ ಟನ್‌ಗೆ 5,500 ರೂ.ಗೆ ಆಗ್ರಹ
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು, ಜ್ವಾಲಾಮುಖಿಯಾಗಿ ಸ್ಪೋಟವಾಗ್ತಿದೆ. ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ರೈತರು, 5500 ರೂ. ಪಡೆದೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ ಬೆನ್ನಲ್ಲೇ, ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ರೈತರಿಗೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ನಗರದಿಂದ ಹಿಡಿದು, ಗ್ರಾಮೀಣ ಭಾಗದಲ್ಲೂ ರೈತರ ಪ್ರತಿಭಟನೆ ನಡೆಸಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ... ಹೇಗಿತ್ತು ರೈತರ ಆಕ್ರೋಶ ಈ ವರದಿ ನೋಡಿ..
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಹೋರಾಟದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ. ಸದ್ಯ ಕಬ್ಬು ಬೆಳೆಗಾರರ ಹೋರಾಟ ಕೇವಲ ಹೋರಾವಾಗಿ ಉಳಿದಿಲ್ಲ. ಜನಾಂದೋಲನವಾಗಿ ಮಾರ್ಪಟ್ಟಿದೆ. ಹಾಗಾದ್ರೆ ಬೆಳಗಾವಿಯಲ್ಲಿ ರೈತರ ಹೋರಾಟ ಯಾವ ರೀತಿ ಇತ್ತು ಅನ್ನೋದನ್ನ ನೋಡೋಣ ಬನ್ನಿ..
ಬೆಳ್ಳಂ ಬೆಳಗ್ಗೆ ಕಬ್ಬು ಬೆಳೆಗಾರರು ಬೆಳಗಾವಿಯ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಅಂತರ ಜಿಲ್ಲಾ ಹಾಗೂ ಹೊರ ರಾಜ್ಯದ ಬಸ್ ತಡೆದು ಉರುಳು ಸೇವೆ ಮಾಡಿ ಕಬ್ಬಿನ ಎಂಎಸಪಿ ದರ ಏರಿಕೆ ಮಾಡಲೇಬೇಕೆಂದು ಆಗ್ರಹಿಸಿದ್ರು. ರೈತರ ಹೋರಾಟ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸಿಮೀತವಾಗಿಲ. ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಗೋಕಾಕ್ ನಗರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಸಿಎಂ ಡಿಕೆ ಶಿವಕುಮಾರ್ ಅಣುಕು ಶವಯಾತ್ರೆ ಮಾಡಿ, ಬೊಬ್ಬೆ ಹೊಡೆದು ಕಿಡಿಕಾರಿದ್ರು. ಇನ್ನೂ ಗೋಕಾಕ್ ಹಾಗೂ ಹಿಡಕಲ್ ಡ್ಯಾಂ ರಾಜ್ಯ ಹೆದ್ದಾರಿ ತಡೆದು ರಸ್ತೆಯಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಬಸವೇಶ್ಬರ್ ಮೂರ್ತಿಗೆ ಹಸಿರು ಟಾವೆಲ್ ಹಾಕಿ ಪ್ರಮಾಣ ವಚನ ಸ್ವೀಕರಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು..
ಅಥಣಿ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ. ಸಂಕೇಶ್ವರ್ - ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಬನೆ ನಡೆಸಿದ್ರು. ಅಷ್ಟೇ ಅಲ್ಲದೇ ಜೋಬು ಖಾಲಿ ಎಂಬ ಸಿಎಂ ಡಿಕೆಶಿ ಹೇಳಿಕೆಗೆ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಕೌಂಟರ್ ಕೊಟ್ಟಿದ್ದಾರೆ..
ಖಾನಾಪೂರ ತಾಲೂಕಿನಲ್ಲೂ ಬೆಳಗ್ಗೆಯಿಂದ ಹೋರಾಡದ ಕಿಚ್ಚು ಹೆಚ್ಚಾಗಿತ್ತು. ರಸ್ತೆ ಮಧ್ಯೆ ಕುಳಿತು ಭಜನೆ ಮಾಡಿದ್ರೆ, ಸಿಎಂ ಡಿಕೆಶಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಕಿಡಿಕಾರಿದ್ದಾರೆ. ಇಷ್ಟೇ ಅಲ್ಲದೇ ಚಿಕ್ಕೋಡಿ, ಸವದತ್ತಿ, ರಾಮದುರ್ಗ, ಯರಗಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಕಬ್ಬು ಬೆಳೆಗಾರರ ಆಕ್ರೋಶ ಕಟ್ಟೆ ಒಡೆದಿದೆ
ಒಟ್ಟಾರೆ ಕಬ್ಬು ಬೆಳೆಗಾರರ ಹೋರಾಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ರೈತರ ಹೋರಾಟಕ್ಕೆ ಮಹಿಳೆಯರು, ಶಾಲಾ ಮಕ್ಕಳು, ಕಲಾವಿದರು ಸೇರಿದಂತೆ ವಿವಿಧ ಸಂಘಟನೆಗಳು ಸಹ ಸಾಥ್ ನೀಡಿವೆ. ಇತ್ತ ಕಳೆದೆರೆಡು ತಿಂಗಳಲ್ಲಿ ಬೀದಿಯಲ್ಲಿ ರೈತರು ಹೋರಾಟ ಮಾಡ್ತಿದ್ರು ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಮೌನ ಮುರಿಯುತ್ತಿಲ್ಲ. ಇದು ಕಬ್ಬು ಬೆಳೆಗಾರರನ್ನ ಮತ್ತಷ್ಟು ಕೆರಳಿಸಿದೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪಕ್ಷಾತೀತವಾಗಿ ರಾಜಕೀಯ ನಾಯಕರ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬರ್ತಿದೆ.
ಒಂದೆಡೆ ಬರಗಾಲದಿಂದ ಕಬ್ಬು ಒಣಗುವ ಹಂತಕ್ಕೆ ಬಂದು ತಲುಪಿದೆ. ಕಾರ್ಖಾನೆಗಳನ್ನೂ ದರ ನಿಗದಿಯಾಗುವವರೆಗೂ ಆರಂಭಿಸಬಾರದೆಂದು ಕಬ್ಬು ಬೆಳೆಗಾರರ ಕಟ್ಟಪ್ಪಣೆ ಹೊರಡಿಸಿದ್ದಾರೆ. ಈಗಾಗಲೇ ಕೇಂದ್ರದ ಸಮಿತಿ ಎರಡು ದಿನಗಳ ಕಾಲ ಕಬ್ನು ಬೆಳೆಗಾರರ ಸಮಸ್ಯೆ ಆಲಿಸಿದ್ದು, ಶೀಘ್ರವೇ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡುತ್ತಾ..? ಅಥವಾ ಕಬ್ಬು ಬೆಳೆಗಾರರಿಗೆ ಕಬ್ನು ಇನ್ನೂ ಕಹಿಯಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ..