• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಇಳುವರಿ ಕುಸಿತದ ನಡುವೆಯೂ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ : ಕಂಗಾಲಾದ ಗದಗ ಜಿಲ್ಲೆಯ ರೈತರು!

ಇಳುವರಿ ಕುಸಿತದ ನಡುವೆಯೂ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ : ಕಂಗಾಲಾದ ಗದಗ ಜಿಲ್ಲೆಯ ರೈತರು!

ಮಳೆಯಿಲ್ಲದೆ ಒಣಗಿ, ಅಳಿದುಳಿದು ಮಾರುಕಟ್ಟೆಗೆ ಈರುಳ್ಳಿ ಹೊತ್ತುತಂದ ರೈತರಿಗೆ ನಿರಾಶೆಯೇ ಕಾದಿದೆ. ಚಿಕ್ಕ ಗಾತ್ರದ ಹಾಗೂ ಹಸಿ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆ ಇಲ್ಲದಂತಾಗಿದೆ.

Reported ByManjunath NaragundEdited ByManjunath Naragund
Published: Oct 29, 2026, 11:37 AM IST|Updated: Oct 29, 2026, 11:43 AM IST
joinshare
ಇಳುವರಿ ಕುಸಿತದ ನಡುವೆಯೂ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ : ಕಂಗಾಲಾದ ಗದಗ ಜಿಲ್ಲೆಯ ರೈತರು!
Image Credit: APMC

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಪಿಎಂ ಗ್ರಾಮ ಸ್ವರಾಜ್‌ ಯೋಜನೆಗೆ ಮೋದಿ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್:‌ ದೇಶದ 2.55 ಲಕ್ಷ ಪಂಚಾಯತ್‌ಗಳ ಸಬಲೀಕರಣಕ್ಕೆ ವಿಶೇಷ ಅನುದಾನ

ಪಿಎಂ ಗ್ರಾಮ ಸ್ವರಾಜ್‌ ಯೋಜನೆಗೆ ಮೋದಿ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್:‌ ದೇಶದ 2.55 ಲಕ್ಷ ಪಂಚಾಯತ್‌ಗಳ ಸಬಲೀಕರಣಕ್ಕೆ ವಿಶೇಷ ಅನುದಾನ

2

ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!

3

ಇಳುವರಿ ಕುಸಿತದ ನಡುವೆಯೂ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ : ಕಂಗಾಲಾದ ಗದಗ ಜಿಲ್ಲೆಯ ರೈತರು!

4

ರಾಜ್ಯ ರಾಜಕೀಯಕ್ಕೆ ಎಚ್.ಡಿ. ಕುಮಾರಸ್ವಾಮಿ ರೀ ಎಂಟ್ರಿ: ನವೆಂಬರ್ ಕ್ರಾಂತಿಗೆ ವೇದಿಕೆ ಸಿದ್ಧ!

5

ದಿನ ಭವಿಷ್ಯ 29-10-2026: ಗುರುವಾರದಂದು ಪರಿಘ ಯೋಗ.. ಈ ರಾಶಿಯವರಿಗೆ ಧನ ಯೋಗ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗದಗ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಉಂಟಾಗಿರುವ ತೀವ್ರ ಏರಿಳಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದೆ ಅನ್ನದಾತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಮಾರುಕಟ್ಟೆಗೆ ತಂದ ಈರುಳ್ಳಿಗೆ ಸಿಗುತ್ತಿರುವ ಬೆಲೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮಾರ್ಕೆಟ್‌ಗೆ ಈರುಳ್ಳಿಯ ಆವಕ (ಮಾರುಕಟ್ಟೆಗೆ ಬರುವ ಪ್ರಮಾಣ) ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗಣನೀಯವಾಗಿ ಕಡಿಮೆಯಾಗಿದೆ.ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಈರುಳ್ಳಿ ಬಂದಿರುವುದರಿಂದ ಕೆಲ ಉತ್ತಮ ಗುಣಮಟ್ಟದ ಬೆಳೆಗೆ ಮಾತ್ರ ಸ್ವಲ್ಪ ಮಟ್ಟಿಗೆ ಉತ್ತಮ ಬೆಲೆ ಸಿಗುತ್ತಿದ್ದು, ದೊಡ್ಡ ಗಾತ್ರದ ಒಣಗಿದ ಅತ್ಯುತ್ತಮ ಈರುಳ್ಳಿಗೆ ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ವರೆಗೆ ರೇಟ್ ಸಿಗುತ್ತಿದೆ. ಆದರೆ, ಈ ಅದೃಷ್ಟ ನೂರರಲ್ಲಿ ಒಬ್ಬಿಬ್ಬರಿಗೆ ಮಾತ್ರ ಸಿಗುತ್ತಿದ್ದು, ಉಳಿದ ರೈತರ ಪಾಡು ಶೋಚನೀಯವಾಗಿದೆ.

ಮಳೆಯಿಲ್ಲದೆ ಒಣಗಿ, ಅಳಿದುಳಿದು ಮಾರುಕಟ್ಟೆಗೆ ಈರುಳ್ಳಿ ಹೊತ್ತುತಂದ ರೈತರಿಗೆ ನಿರಾಶೆಯೇ ಕಾದಿದೆ. ಚಿಕ್ಕ ಗಾತ್ರದ ಹಾಗೂ ಹಸಿ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆ ಇಲ್ಲದಂತಾಗಿದೆ. ಅಂತಹ ಸಾಮಾನ್ಯ ಮತ್ತು ಕಳಪೆ ಗುಣಮಟ್ಟದ ಈರುಳ್ಳಿಗೆ ಕೇವಲ 500 ರೂಪಾಯಿ ವರೆಗೆ ಮಾತ್ರ ಬೆಲೆ ಸಿಗುತ್ತಿರುವುದು ರೈತರ ಕಣ್ಣೀರಿಗೆ ಕಾರಣವಾಗಿದೆ.

ಮನೆಗೆ ವಾಪಸ್ ತೆಗೆದುಕೊಂಡು ಹೋಗಲು ಆಗದೆ, ಸಾಗಾಣಿಕೆ ವೆಚ್ಚವೂ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ರೈತರು ಅನಿವಾರ್ಯವಾಗಿ ಸಿಕ್ಕಷ್ಟೇ ಅಲ್ಪ ಪ್ರಮಾಣದ ಬೆಲೆಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿ ಕೈಸುಟ್ಟುಕೊಂಡು ಹೊರಡುತ್ತಿದ್ದಾರೆ. ಮಳೆಯ ವೈಪರೀತ್ಯದಿಂದ ನಷ್ಟ ಅನುಭವಿಸಿರುವ ರೈತರಿಗೆ ಈ ಬೆಲೆ ಏರಿಳಿತದ ಬಿಸಿ ತಟ್ಟಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಈರುಳ್ಳಿಗೂ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ.
 

Add Zee News as a Preferred Source
TAGS:
Kannada News