• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!

ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!

ಮಾರ್ಕೆಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ ಆಗಿದ್ದು, ನ್ಯಾಯಾಲಯವು ಅಂತೆ-ಕಂತೆಗಳ ಮಾತುಗಳನ್ನು ಒಪ್ಪುವುದಿಲ್ಲ, ಬದಲಿಗೆ ಅಧಿಕೃತ ದಾಖಲೆಗಳನ್ನು ಮಾತ್ರ ಪರಿಗಣಿಸುತ್ತದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.

Reported ByManjunath NaragundEdited ByManjunath Naragund
Published: Oct 29, 2026, 11:56 AM IST|Updated: Oct 29, 2026, 12:02 PM IST
joinshare
ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!
Image Credit: Dhanveer

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಪಿಎಂ ಗ್ರಾಮ ಸ್ವರಾಜ್‌ ಯೋಜನೆಗೆ ಮೋದಿ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್:‌ ದೇಶದ 2.55 ಲಕ್ಷ ಪಂಚಾಯತ್‌ಗಳ ಸಬಲೀಕರಣಕ್ಕೆ ವಿಶೇಷ ಅನುದಾನ

ಪಿಎಂ ಗ್ರಾಮ ಸ್ವರಾಜ್‌ ಯೋಜನೆಗೆ ಮೋದಿ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್:‌ ದೇಶದ 2.55 ಲಕ್ಷ ಪಂಚಾಯತ್‌ಗಳ ಸಬಲೀಕರಣಕ್ಕೆ ವಿಶೇಷ ಅನುದಾನ

2

ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು-ವಕೀಲ ಪ್ರಜ್ವಲ್ ಸ್ಪಷ್ಟನೆ!

3

ಇಳುವರಿ ಕುಸಿತದ ನಡುವೆಯೂ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ : ಕಂಗಾಲಾದ ಗದಗ ಜಿಲ್ಲೆಯ ರೈತರು!

4

ರಾಜ್ಯ ರಾಜಕೀಯಕ್ಕೆ ಎಚ್.ಡಿ. ಕುಮಾರಸ್ವಾಮಿ ರೀ ಎಂಟ್ರಿ: ನವೆಂಬರ್ ಕ್ರಾಂತಿಗೆ ವೇದಿಕೆ ಸಿದ್ಧ!

5

ದಿನ ಭವಿಷ್ಯ 29-10-2026: ಗುರುವಾರದಂದು ಪರಿಘ ಯೋಗ.. ಈ ರಾಶಿಯವರಿಗೆ ಧನ ಯೋಗ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಯುವ ನಟ ಧನ್ವೀರ್ ವಿರುದ್ಧ ಕೇಳಿಬಂದಿರುವ 10 ಕೋಟಿ ರೂಪಾಯಿ ಹಣಕಾಸು ವ್ಯವಹಾರದ ಆರೋಪಗಳು ಹಾಗೂ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋಗಳ ಬಗ್ಗೆ ಧನ್ವೀರ್ ಪರ ವಕೀಲ ಪ್ರಜ್ವಲ್ ಸ್ಪಷ್ಟನೆ ನೀಡಿದ್ದಾರೆ.

'ಜೀ ಕನ್ನಡ ನ್ಯೂಸ್' ಜೊತೆ ಮಾತನಾಡಿದ ಅವರು, ಧನ್ವೀರ್ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.

ಮಾರ್ಕೆಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋಗಳು ಸಂಪೂರ್ಣವಾಗಿ ಫ್ಯಾಬ್ರಿಕೇಟೆಡ್ ಆಗಿದ್ದು, ನ್ಯಾಯಾಲಯವು ಅಂತೆ-ಕಂತೆಗಳ ಮಾತುಗಳನ್ನು ಒಪ್ಪುವುದಿಲ್ಲ, ಬದಲಿಗೆ ಅಧಿಕೃತ ದಾಖಲೆಗಳನ್ನು ಮಾತ್ರ ಪರಿಗಣಿಸುತ್ತದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.ಜೈಲಿನಿಂದ ದರ್ಶನ್ ಅವರು ಸಂದೇಶ ಕಳುಹಿಸಿದ್ದಾರೆ ಎನ್ನುವ ವಾದಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಅವರು, ಧನ್ವೀರ್ ಮೊದಲ ದಿನದಿಂದಲೂ ದರ್ಶನ್ ಅವರ ಜೊತೆಯಲ್ಲಿದ್ದು, ಅವರನ್ನು ಕಾನೂನುಬದ್ಧವಾಗಿ ಹೊರತರುವಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಹಣಕಾಸಿನ ವಿಚಾರ ಹಾಗೂ 10 ಕೋಟಿ ವ್ಯವಹಾರದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಕೀಲರು, ಈ ಸಂಬಂಧ ಜಾರಿ ನಿರ್ದೇಶನಾಲಯ (ED), ಸಿಬಿಐ ಅಥವಾ ಸಿಸಿಬಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯ ತನಿಖೆಗೂ ಧನ್ವೀರ್ ಸಂಪೂರ್ಣವಾಗಿ ಸಿದ್ಧರಿದ್ದಾರೆ ಎಂದು ಘೋಷಿಸಿದ್ದಾರೆ.

ಪೊಲೀಸರಿಂದ ನೋಟಿಸ್ ಬಂದ ಬಳಿಕ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ.ವಿಜಯಲಕ್ಷ್ಮಿ ಅವರ ಜೊತೆಗಿನ ಒಡನಾಟ ಈಗಲೂ ಮುಂದುವರಿದಿದೆ ಎಂದಿರುವ ಅವರು, ಈ ಪ್ರಕರಣವು ಒಂದು ಥ್ರಿಲ್ಲರ್ ಸಿನಿಮಾದಂತೆ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸತ್ಯಗಳು ಹೊರಬರಲಿವೆ. ನಮ್ಮ ಏಕೈಕ ಹೋರಾಟ ಹಾಗೂ ಗುರಿ ದರ್ಶನ್ ಅವರನ್ನು ಬೇಗ ಹೊರತರುವುದು ಮಾತ್ರ ಎಂದು ವಕೀಲ ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.
 

Add Zee News as a Preferred Source
TAGS:
Kannada News