ಸರ್ಕಾರಿ ವೈದ್ಯರಿಗೆ ಹೊಸ ರೂಲ್ಸ್.. ನವೆಂಬರ್ 1ರಿಂದ ರಾತ್ರಿ 9ಕ್ಕೆ ಆ್ಯಪ್‌ನಲ್ಲಿ ಹಾಜರಾತಿ ಕಡ್ಡಾಯ!
ಕರ್ನಾಟಕದ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಇನ್ಮುಂದೆ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ರಾತ್ರಿ 9 ಗಂಟೆಗೆ ಹಾಜರಾತಿ ಹಾಕೋದು ಕಡ್ಡಾಯ. ಅದೂ ಮೊಬೈಲ್‌ನಲ್ಲಿರುವ ‘ಕರ್ತವ್ಯ’ ಆ್ಯಪ್ ಮೂಲಕವೇ ಹಾಜರಾತಿ ದಾಖಲಿಸಬೇಕು.
ಕರ್ನಾಟಕದ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಇನ್ಮುಂದೆ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ರಾತ್ರಿ 9 ಗಂಟೆಗೆ ಹಾಜರಾತಿ ಹಾಕೋದು ಕಡ್ಡಾಯ. ಅದೂ ಮೊಬೈಲ್‌ನಲ್ಲಿರುವ ‘ಕರ್ತವ್ಯ’ ಆ್ಯಪ್ ಮೂಲಕವೇ ಹಾಜರಾತಿ ದಾಖಲಿಸಬೇಕು. ಗ್ರಾಮೀಣ ಭಾಗದಲ್ಲಿ ವೈದ್ಯರು ಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಈ ಹೊಸ ನಿಯಮ ಯಾವಾಗಿನಿಂದ ಜಾರಿ? ಹಾಜರಾತಿ ಹಾಕದಿದ್ರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ರಾಜ್ಯದ ಸರ್ಕಾರಿ ವೈದ್ಯರಿಗೆ ಆರೋಗ್ಯ ಇಲಾಖೆ ಹೊಸ ಜವಾಬ್ದಾರಿ ನೀಡಿದೆ. ಇನ್ಮುಂದೆ ರಾತ್ರಿ 9 ಗಂಟೆಯ ಬಳಿಕ ‘ಕರ್ತವ್ಯ’ ಆ್ಯಪ್ ಮೂಲಕ ಹಾಜರಾತಿ ದಾಖಲಿಸೋದು ಕಡ್ಡಾಯ. ನವೆಂಬರ್ 1ರಿಂದ ಈ ನಿಯಮ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಈ ನಿಯಮ ಅನ್ವಯವಾಗಲಿದೆ.
ಒಂದು ವೇಳೆ ಅನುಮತಿ ಇಲ್ಲದೆ ವೈದ್ಯರು ತಮ್ಮ ಕರ್ತವ್ಯದ ಕೇಂದ್ರದಲ್ಲಿ ಗೈರಾಗಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಅಧಿಕೃತ ರಜೆ, ಸರ್ಕಾರಿ ಕರ್ತವ್ಯ ಅಥವಾ ಸಮರ್ಥ ಪ್ರಾಧಿಕಾರದಿಂದ ಅನುಮತಿ ಪಡೆದು ಹೊರಗಿರುವ ವೈದ್ಯರಿಗೆ ವಿನಾಯಿತಿ ನೀಡಲಾಗುತ್ತದೆ. ಆದ್ರೆ, ಈ ಬಗ್ಗೆ ಕೂಡ ಆ್ಯಪ್‌ನಲ್ಲಿ ಸೂಕ್ತ ವಿವರ ದಾಖಲಿಸೋದು ಕಡ್ಡಾಯವಾಗಿದೆ.
ಇನ್ನು ಪ್ರತಿ ತಿಂಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ವೈದ್ಯರ ಹಾಜರಾತಿ ವರದಿಯನ್ನು ಪರಿಶೀಲಿಸಲಿದ್ದಾರೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಇತರ ನೌಕರರಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ವೈದ್ಯರು ಕರ್ತವ್ಯದ ಸಮಯದಲ್ಲಿ ತಮ್ಮ ಕೇಂದ್ರದಲ್ಲೇ ಇದ್ದಾರಾ? ಗ್ರಾಮೀಣ ಭಾಗದ ಜನರಿಗೆ ರಾತ್ರಿ ವೇಳೆಯೂ ವೈದ್ಯಕೀಯ ಸೇವೆ ಸಿಗುತ್ತಿದೆಯಾ? ಅನ್ನೋದನ್ನ ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಅಕ್ಟೋಬರ್ 17ರಂದು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಹಾಜರಾತಿ ದಾಖಲಿಸಲು ಆ್ಯಪ್‌ನಲ್ಲಿ ಪ್ರತ್ಯೇಕ ರಾತ್ರಿ ಹಾಜರಾತಿ ಮಾಡ್ಯೂಲ್ ಕೂಡ ಸಿದ್ಧಪಡಿಸಲಾಗಿದೆ.
ಇನ್ನು ಈ ವ್ಯವಸ್ಥೆಯಲ್ಲಿ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಅಂದ್ರೆ, ವೈದ್ಯರು ತಾವು ಕರ್ತವ್ಯ ನಿರ್ವಹಿಸುವ ನಿಗದಿತ ಸ್ಥಳದಲ್ಲೇ ಇದ್ದು ಹಾಜರಾತಿ ದಾಖಲಿಸುತ್ತಿದ್ದಾರಾ ಅನ್ನೋದನ್ನ ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗುತ್ತೆ.ತಾಲೂಕು ಅಥವಾ ಗ್ರಾಮ ಮಟ್ಟದಲ್ಲಿ ನಿಯೋಜನೆಗೊಂಡಿರುವ ವೈದ್ಯರು ಪೂರ್ವಾನುಮತಿ ಇಲ್ಲದೆ ತಮ್ಮ ಕೇಂದ್ರಸ್ಥಾನದಿಂದ ಹೊರಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಒಂದು ವೇಳೆ ಅನುಮತಿ ಇಲ್ಲದೆ ವೈದ್ಯರು ತಮ್ಮ ಕರ್ತವ್ಯದ ಕೇಂದ್ರದಲ್ಲಿ ಗೈರಾಗಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಅಧಿಕೃತ ರಜೆ, ಸರ್ಕಾರಿ ಕರ್ತವ್ಯ ಅಥವಾ ಸಮರ್ಥ ಪ್ರಾಧಿಕಾರದಿಂದ ಅನುಮತಿ ಪಡೆದು ಹೊರಗಿರುವ ವೈದ್ಯರಿಗೆ ವಿನಾಯಿತಿ ನೀಡಲಾಗುತ್ತದೆ. ಆದ್ರೆ, ಈ ಬಗ್ಗೆ ಕೂಡ ಆ್ಯಪ್‌ನಲ್ಲಿ ಸೂಕ್ತ ವಿವರ ದಾಖಲಿಸೋದು ಕಡ್ಡಾಯವಾಗಿದೆ.
ಇನ್ನು ಪ್ರತಿ ತಿಂಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ವೈದ್ಯರ ಹಾಜರಾತಿ ವರದಿಯನ್ನು ಪರಿಶೀಲಿಸಲಿದ್ದಾರೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಇತರ ನೌಕರರಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ಕರ್ನಾಟಕದ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ನವೆಂಬರ್ 1ರಿಂದ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ವೈದ್ಯರು ರಾತ್ರಿ 9 ಗಂಟೆಯ ಬಳಿಕವೂ ತಮ್ಮ ಹಾಜರಾತಿಯನ್ನು ದಾಖಲಿಸಬೇಕಾಗುತ್ತದೆ. ಅದೂ ಕರ್ತವ್ಯ ಆ್ಯಪ್ ಮೂಲಕ! ವೈದ್ಯರು ತಮ್ಮ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಲಾಗಿದೆ. ಕರ್ನಾಟಕದಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ವೈದ್ಯರು ನವೆಂಬರ್ 1ರಿಂದ ರಾತ್ರಿ 9 ಗಂಟೆಯ ನಂತರ ಕರ್ತವ್ಯ ಆ್ಯಪ್ ಮೂಲಕ ತಮ್ಮ ರಾತ್ರಿ ಹಾಜರಾತಿಯನ್ನು ದಾಖಲಿಸಬೇಕು. ವೈದ್ಯರು ಕರ್ತವ್ಯದಲ್ಲಿರಬೇಕಾದ ಸ್ಥಳದಲ್ಲಿ ನಿಜವಾಗಿಯೂ ಲಭ್ಯವಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ಕ್ರಮದ ಮುಖ್ಯ ಉದ್ದೇಶ. ವಿಶೇಷವಾಗಿ ರಾತ್ರಿ ಸಮಯದಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆಯ ಅಗತ್ಯ ಎದುರಾದಾಗ, ಸಂಬಂಧಪಟ್ಟ ವೈದ್ಯರು ತಮ್ಮ ಗೊತ್ತುಪಡಿಸಿದ ಪ್ರಧಾನ ಕಚೇರಿಯಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ರಾತ್ರಿ ವೇಳೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗ ವೈದ್ಯರ ಸೇವೆ ಸಿಗಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ.ಈ ಹಿನ್ನೆಲೆಯಲ್ಲಿ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವ ನಿಯಮ ವೈದ್ಯರ ಲಭ್ಯತೆಯ ಮೇಲ್ವಿಚಾರಣೆಗೆ ಸಹಕಾರಿಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ, ನವೆಂಬರ್ 1ರಿಂದ ಸರ್ಕಾರಿ ವೈದ್ಯರ ರಾತ್ರಿ ಹಾಜರಾತಿ ಮೇಲೆ ಡಿಜಿಟಲ್ ನಿಗಾ ಇರಲಿದೆ. ಆದರೆ ಈ ನಿಯಮದ ಅನುಷ್ಠಾನ, ಹಾಜರಾತಿ ದಾಖಲಿಸುವ ನಿಖರ ವಿಧಾನ ಮತ್ತು ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕ್ರಮಗಳ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಒಟ್ಟಿನಲ್ಲಿ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಹೆಚ್ಚಿಸುವುದು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಈ ಹೊಸ ನಿಯಮದ ಉದ್ದೇಶ. ಆದ್ರೆ, ಈ ನಿಯಮ ಜಾರಿಯಿಂದ ವೈದ್ಯರ ಹಾಜರಾತಿ ಮತ್ತು ರಾತ್ರಿ ಸೇವೆಯಲ್ಲಿ ಎಷ್ಟರಮಟ್ಟಿಗೆ ಸುಧಾರಣೆ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.