ನೋಡೋಕೆ ಅಮಾಯಕರು.. ಆದ್ರೆ ಕಿರಾತಕರು..! ಹಣ ಡಬ್ಲಿಂಗ್ ಆಸೆ ತೋರಿಸಿ ಜೀವ ತೆಗೆದ ಕೀಚಕರು
ಹಣ ಡಬ್ಲಿಂಗ್ ಆಸೆಗೆ ಬಲಿಯಾಗಿ, ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದ ಬಡ ಗಾರೆ ಕೆಲಸಗಾರನೊಬ್ಬ ಸಾಲಗಾರರ ಕಾಟ ತಾಳಲಾರದೆ ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿರುವ ಧಾರುಣ ಘಟನೆ ನಡೆದಿದೆ. ಪತಿ ಇಲ್ಲದ ನತದೃಷ್ಟ ಪತ್ನಿ ಹಾಗೂ ಇಬ್ಬರು ಕಂದಮ್ಮಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.. ಈ ಕುರಿತ ಸುದ್ದಿ ಇಲ್ಲಿದೆ..
ಬೆಂಗಳೂರು : ಅವರು ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಊರಿಗೆ ಬಂದು ಜೀವನ ಸಾಗಿಸುತ್ತಿದ್ದ ಬಡದಂಪತಿಗಳು. ತಾವಾಯಿತು ತಮ್ಮ ಕೆಲಸವಾಯಿತು ಅಂತ ಕೆಲಸ ಮಾಡಿಕೊಂಡಿದ್ದ ಕುಟುಂಬಕ್ಕೆ ಆಸೆ ಎಂಬ ಮಹಾಮಾಯೆ ಸುತ್ತುವರಿದು ತಮ್ಮ ಜೀವವನ್ನೇ ಬಲಿ ಪಡೆದು ಕೊಂಡಿದೆ. ಅಷ್ಟಕ್ಕೂ ಎನಿ ಆಸೆಯ ವಿಚಾರ ಯಾರ ಬಲಿಯಾಯ್ತು ಕಂಪ್ಲೇಂಟ್ ರಿಪೋರ್ಟ್ ಇಲ್ಲಿದೆ ನೋಡಿ..
ಈಗೆ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಹೆಸರು ಭೀಮಣ್ಣ. ಮೂಲತಃ ಗುಲ್ಬರ್ಗ ಜಿಲ್ಲೆಯವರು ಹೊಟ್ಟೆಪಾಡಿಗಾಗಿ ಗಾರೆ ಕೆಲಸವನ್ನ ಅವಲಂಬಿತವಾಗಿದ್ದ ಈ ಕುಟುಂಬ ಕಳೆದ 5 ವರ್ಷಗಳಿಂದ ಬೆಂಗಳೂರಿನ ಚಿಕ್ಕಜಾಲ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದರು. ಅಷ್ಟರಲ್ಲೇ ಯಮರೂಪಿಯಂತೆ ಪರಿಚಯವಾದ ಸ್ಥಳೀಯ ಚಿಕ್ಕಜಾಲ ಗ್ರಾಮದ ಆರತಿ ಎಂಬ ಮಹಿಳೆಯಯ ಪರಿಚಯವಾಗಿದೆ. ನಮ್ಮದೇ ಒಂದು ಕಂಪನಿ ಇದೇ ಅದರ ಹೆಸರು ಕಾಳಿಕಾಂಬದೇವಿ ಎಂಟರ್ಪ್ರೈಸಸ್ ಅಂತಾ, ನೀನು ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಒಂದು ಲಕ್ಷ ಹಣಕ್ಕೆ ಮತ್ತೊಂದು ಲಕ್ಷ ಸೇರಿಸಿ ಕೊಡ್ತವೆ ಅಂತಾ ಪುಸಲಾಯಸಿ ಆಸೆ ಹುಟ್ಟಿಸಿದ್ದಾರೆ.. ಅಷ್ಟಕ್ಕೂ ಸುಮ್ಮನಿರದ ಈ ಆರತಿ ನಮ್ಮ ಕಂಪನಿ ಮ್ಯಾನೇಜರ್ ಇವರು ಹಾಗೇ ಈಗೆ ಅಂತಾ ಬಿಲ್ಡಪ್ ಕೊಟ್ಟು ಆಂಧ್ರ ಮೂಲದ ಕಿರಣ್ ಎಂಬತನನ್ನ ಪರಿಚಯ ಮಾಡಿಸಿ ಹಣ ಡಬ್ಲಿಂಗ್ ಆಸೆಗೆ ಒಳ್ಳೆ ಕಥೆಯನ್ನೇ ಬರೆದು ಮನ ಒಳಿಸಿದ್ದಾರೆ.
ಕೇಳಿದ್ರಲ್ಲ ಪತ್ನಿ ಮಾತನ್ನ ಎರಡು ಪಟ್ಟು ಹಣ ಬರುತ್ತೆ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ ಅಂತದ್ದೇ ಆಸೆಯಿಂದ ಭೀಮಣ್ಣ ತನ್ನ ಸ್ವಂತ ಊರಲ್ಲಿ ಸ್ನೇಹಿತರ ಬಳಿ ಕೆಲಸ ಮಾಡುವ ಓನರ್ ಗಳ ಬಲಿ ಹೀಗೆ ಒಟ್ಟು ನಾಲ್ಕು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಣ ಠೇವಣಿ ಮಾಡಿದ್ದಾರೆ. ಮೊದಲ ತಿಂಗಳಲ್ಲಿ ನಾಲ್ಕು ವರೆ ಸಾವಿರ ಎರಡನೇ ತಿಂಗಳಲ್ಲಿ 10 ಸಾವಿರ ಹೀಗೆ ಒಂದೆರಡು ತಿಂಗಳು ಹಣ ಕೊಟ್ಟ ಈ ಕಂಪನಿ ಕ್ಲೋಸ್ ಮಾಡಿದ್ದಾರೆ. ಇತ್ತ ಹಣ ಹೂಡಿಕೆ ಮಾಡಿದ್ದ ಭೀಮಣ್ಣ ಕುಟುಂಬ ಈಗ ಹಣ ಬರುತ್ತೆ ಆಗ ಹಣ ಬರುತ್ತೆ ಅಂತಾ ಕಾದು ಕಾದು ಕೊನೆಗೆ ಭೀಮಣ್ಣನ ಮನೆಗೆ ಬಂದವರು ಅಸಲಿ ಹಣ ಕೊಟ್ಟ ಸಂಬಂದಿಕರು ಸ್ನೇಹಿತರು, ಯಾವಾಗ ಹಣ ಕೊಟ್ಟೋರು ಬಡ್ಡಿ ಕಟ್ಟಿ ಅಂತಾ ಪದೇ ಪದೇ ಬಂದು ಗಲಾಟೆ ಮಾಡಿದ್ರೋ ಭೀಮಣ್ಣ ತನ್ನ ಬಾಡಿಗೆ ಮನೆಯಲ್ಲೇ ನೇಣಿಗೆ ಕೊರೊಳೋಡಿದ್ದಾನೆ.
ಇಷ್ಟೆಲ್ಲ ಆದ್ರೂ ಕಾಳಿಕಾಂಬ ಎಂಟರ್ಪ್ರೈಸಸ್ ಎಂಬ ಖಾಸಗಿ ಕಂಪನಿಯ ಮೋಸದ ಜಾಲದ ಕಿರಾತಕರು ಮಾತ್ರ ನಿಮ್ಮ ಹಣವನ್ನ ಕೋರ್ಟ್ ನಲ್ಲಿ ತಗೋಳಿ ಅಂತಿದ್ದಾರಂತೆ. ಇತ್ತ ಹಣವು ಹೋಯ್ತು, ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಭೀಮಣ್ಣನ ಜೀವವು ಹೊಯ್ತು. ಇದೀಗ ಪತ್ನಿ ಲಕ್ಷ್ಮಿ ಇಬ್ಬರು ಕಂದಮ್ಮಗಳ ಮುಖ ನೋಡಿ ಜೀವನ ಸಾಗಿಸಬೇಕಿದೆ. ಒಟ್ಟಾರೆ ಎಲ್ಲಿಯವರೆಗೆ ಮೋಸ ಹೋಗೋರು ಇರ್ತಾರೋ ಅಲ್ಲಿಯ ತನಕ ಮೋಸ ಮಾಡೋರು ಇರ್ತಾರೆ ಎಚ್ಚರಿಕೆ.
ಒಟ್ಟಾರೆಯಾಗಿ.. ಮೋಸದ ಜಾಲಗಳ ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುವುದರಿಂದ ಜೀವಿತಾವಧಿಯ ಸಂಪಾದನೆ ಮಾತ್ರವಲ್ಲ, ಇಡೀ ಕುಟುಂಬವೇ ಬೀದಿಪಾಲುಾಗುವ ದುಸ್ಥಿತಿ ಎದುರಾಗುತ್ತದೆ ಎಂಬುದಕ್ಕೆ ಈ ಘಟನೆ ಒಂದು ಕಣ್ಣುತೆರೆಸುವ ಉದಾಹರಣೆಯಾಗಿದೆ. ದುರಾಸೆಗೆ ಬಿದ್ದು ಸಾಲ ಮಾಡಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸುವುದು ಎಷ್ಟು ಮುಖ್ಯವೋ, ಅಂತಹ ವಂಚಕರ ಜಾಲವನ್ನು ಗುರುಕಿ ಕಾನೂನು ಕ್ರಮ ಜರುಗಿಸುವುದು ಅಷ್ಟೇ ಅಗತ್ಯ. ಗಂಡನನ್ನು ಕಳೆದುಕೊಂಡು ಅತಂತ್ರವಾಗಿರುವ ಬಡ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ ಮತ್ತು ಇಂತಹ ಹಗಲು ದರೋಡೆಯ ಮೋಸದ ಜಾಲಗಳ ಬಗ್ಗೆ ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕಿದೆ.