SOCIAL MEDIA

Newsletter

PARTNER SITES
Select Language Select State

ದೀಪಾವಳಿ ಹೊತ್ತಲ್ಲೇ ಮಿಂಟೋ ಆಸ್ಪತ್ರೆಯಿಂದ ಪಟಾಕಿಯಿಂದ ಉಂಟಾದ ಅವಘಡಗಳ ಅಂಕಿ ಅಂಶ ಬಿಡುಗಡೆ

ದೀಪಾವಳಿ ಹಬ್ಬ ಎಂದರೇ ಎಲ್ಲರ ಚಿತ್ತ ಪಟಾಕಿಯತ್ತ ನೆಟ್ಟಿರುತ್ತೆ. ಪಟಾಕಿ ಹೊಡೆಯುವಾಗ ಎಚ್ಚರಿಕೆಯಿಂದ ಇರದಿದ್ದರೆ ಅದರಿಂದಾಗುವ ಅಪಾಯ ಕೆಲವೊಮ್ಮೆ ಲೈಫ್‌ ಟೈಮ್‌ ಪರಿತಪಿಸವಂತೆ ಮಾಡುತ್ತದೆ.

Written By Yashaswini V
Published: Nov 04, 2026, 07:10 AM IST | Updated: Nov 04, 2026, 07:46 AM IST
Join

ದೀಪಾವಳಿ ಅಂದ್ರೆ ಬೆಳಕಿನ ಹಬ್ಬ.. ಆದ್ರೆ ಇದೇ ಹಬ್ಬದ ಸಂಭ್ರಮದಲ್ಲಿ ಪಟಾಕಿ ದುರಂತಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ದೀಪಾವಳಿ ಹೊತ್ತಲ್ಲಿ ಉಂಟಾಗುವ ಪಟಾಕಿ ಅವಘಡದಿಂದಾಗಿ ಕಣ್ಣಿಗೆ ಗಾಯವಾಗುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಬಾಬು ನಿನ್ನೆಯಷ್ಟೇ ಮಹತ್ವದ ಸುದ್ದಿಗೋಷ್ಠಿ ನಡೆಸಿ, ಆಸ್ಪತ್ರೆಯ ಸಿದ್ಧತೆಗಳ ಮಾಹಿತಿ ನೀಡಿದ್ದರು. ಇದೀಗ, ದೀಪಾವಳಿ ಹಬ್ಬಕ್ಕೂ ಮೊದಲೇ ಪ್ರತಿ ವರ್ಷ ಪಟಾಕಿಯಿಂದ ಉಂಟಾದ ಅವಘಡಗಳ ಬಗ್ಗೆ  ಮಿಂಟೋ ಆಸ್ಪತ್ರೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಮಿಂಟೋ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಲ್ಲಿ ಒಟ್ಟು 247 ಪಟಾಕಿ ಅವಘಡ ಪ್ರಕರಣಗಳು ದಾಖಲಾಗಿದ್ದು, 5 ವರ್ಷಗಳಲ್ಲಿ 187 ಹೊರರೋಗಿಗಳು (OPD) ಹಾಗೂ 60 ಒಳರೋಗಿಗಳಿಗೆ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಕೊರೊನಾ ಸಮಯದಲ್ಲಿ ಕನಿಷ್ಠ ಪ್ರಕರಣ ದಾಖಲು:
ಮಿಂಟೋ ಆಸ್ಪತ್ರೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ ಗರಿಷ್ಠ 71 ಪ್ರಕರಣಗಳು  ದಾಖಲಾಗಿದ್ದವು. 2025ರಲ್ಲಿ 56 ಪ್ರಕರಣಗಳಿಗೆ ಇಳಿಕೆ ಆಗಿದೆ. ಇದಕ್ಕೂ ಮೊದಲು 2021ರಲ್ಲಿ 34 ಪ್ರಕರಣಗಳು, 2022ರಲ್ಲಿ 45 ಪ್ರಕರಣಗಳು, 2023ರಲ್ಲಿ 41 ಪಟಾಕಿ ಅವಘಡ ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, 2020ರ ಕೊರೊನಾ ಸಮಯದಲ್ಲಿ ಕೇವಲ 23 ಪ್ರಕರಣಗಳು ಮಾತ್ರ ದಾಖಲಾಗಿದ್ದು ಸಾರ್ವಕಾಲಿಕ ಕನಿಷ್ಠ ಪ್ರಕರಣಗಳು ದಾಖಲೆ ಆಗಿವೆ. 2008 ರಿಂದ 2025 ರವರೆಗಿನ ದೀರ್ಘಾವಧಿ ದತ್ತಾಂಶದಲ್ಲಿ 2024 ರಲ್ಲೇ ಅತ್ಯಧಿಕ (71) ಕಣ್ಣಿನ ಗಾಯದ ಪ್ರಕರಣಗಳು ದಾಖಲಾಗಿವೆ.

ಯಾವ ಪಟಾಕಿಯಿಂದ ಎಷ್ಟು ಗಾಯ?
* ಅಪಾಯಕಾರಿ ‘ಬಿಜಲಿ’ ಪಟಾಕಿ: 2025 ರಲ್ಲಿ ಅತ್ಯಧಿಕ 18 ಕಣ್ಣಿನ ಅವಘಡಗಳಿಗೆ ಕಾರಣ
* ಆಟಂ ಬಾಂಬ್‌ನಿಂದ ಗಾಯಗೊಂಡವರ ಸಂಖ್ಯೆ 6
* ಫ್ಲವರ್ ಪಾಟ್ (ಹೂಬಾಣ) ಸಿಡಿದು 5 ಜನರಿಗೆ ಕಣ್ಣಿಗೆ ಗಾಯ
* ಸುರಸುರ ಬತ್ತಿ ಹಾಗೂ ಸ್ಕೈ ಶಾಟ್ಸ್ ನಿಂದ ತಲಾ 4 ಪ್ರಕರಣಗಳು ವರದಿ
* ಬಿಜಲಿ ಬಾಂಬ್ ಹಾಗೂ ರೆಗ್ಯುಲರ್ ಕ್ರ್ಯಾಕರ್ಸ್‌ನಿಂದ ತಲಾ 3 ಜನರಿಗೆ ಗಾಯ
* ಗನ್ ಪೌಡರ್ ಬ್ಲಾಸ್ಟ್‌ನಿಂದ 2, ಪಿಸ್ಟಲ್ ಕ್ರ್ಯಾಕರ್ ಹಾಗೂ ಅಪರಿಚಿತ ಪಟಾಕಿಯಿಂದ ತಲಾ 1 ಪ್ರಕರಣ ದಾಖಲು

ವಯೋಮಾನ ಹಾಗೂ ಲಿಂಗಾಧಾರಿತ ಗಾಯದ ವಿವರ: 


* ಮಕ್ಕಳು ಮತ್ತು ಹದಿಹರೆಯದವರ ಮೇಲೆಯೇ ಅತಿ ಹೆಚ್ಚು ಪಟಾಕಿ ದುಷ್ಪರಿಣಾಮ
* 11 ರಿಂದ 18 ವರ್ಷ ವಯಸ್ಸಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅತ್ಯಧಿಕ 18 ಪ್ರಕರಣಗಳು (17 ಗಂಡು ಮಕ್ಕಳು, 1 ಹೆಣ್ಣು ಮಗು)
* 19 ರಿಂದ 40 ವರ್ಷದ ಯುವಜನತೆಯಲ್ಲಿ 16 ಪ್ರಕರಣಗಳು (13 ಪುರುಷರು, 3 ಮಹಿಳೆಯರು)
* 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 9 ಪ್ರಕರಣಗಳು (8 ಪುರುಷರು, 1 ಮಹಿಳೆ)
* 6 ರಿಂದ 10 ವರ್ಷದ ಮಕ್ಕಳಲ್ಲಿ 8 ಪ್ರಕರಣಗಳು (5 ಗಂಡು ಮಕ್ಕಳು, 3 ಹೆಣ್ಣು ಮಕ್ಕಳು)
* 2 ರಿಂದ 5 ವರ್ಷದ ಪುಟ್ಟ ಮಕ್ಕಳಲ್ಲಿ 5 ಕಣ್ಣಿನ ಅವಘಡ ಪ್ರಕರಣಗಳು (3 ಗಂಡು ಮಕ್ಕಳು, 2 ಹೆಣ್ಣು ಮಕ್ಕಳು)
* ಮಹಿಳೆಯರಿಗೆ ಹೋಲಿಸಿದರೆ ಪುರುಷರು ಮತ್ತು ಗಂಡು ಮಕ್ಕಳೇ ಪಟಾಕಿ ಗಾಯಕ್ಕೆ ಹೆಚ್ಚು ತುತ್ತಾಗಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. 


 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES