ಬೆಂಗಳೂರು: KPSC ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಸ್ಫೋಟಕ ತಿರುವು ಪಡೆದುಕೊಂಡಿದೆ.̧ ED ವಿಚಾರಣೆ ವೇಳೆ KPSC ಅಧಿಕಾರಿ ಜ್ಞಾನೇಂದ್ರ ನೀಡಿರುವ ಹೇಳಿಕೆಯಲ್ಲಿ ವೆಟರ್ನರಿ ಮತ್ತು ಪ್ರೊಬೆಷನರಿ ನೇಮಕಾತಿ ಮಾತ್ರವಲ್ಲದೆ, 15ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.̧ ಮೂವರು ಮಹಿಳಾ KPSC ಸದಸ್ಯರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದು,ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ED ವಿಚಾರಣೆ ವೇಳೆ KPSC ಅಧಿಕಾರಿ ಜ್ಞಾನೇಂದ್ರ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.ವೆಟರಿನರಿ ಆಫೀಸರ್, ಪ್ರೊಬೆಷನರಿ ನೇಮಕಾತಿಗೆ ಮಾತ್ರ ಸೀಮಿತವಾಗಿರದೆ 15ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.ಪ್ರತಿ ಡೀಲ್ ಬಳಿಕ ಹಣದ ಸಮಾನ ಹಂಚಿಕೆ ನಡೆಯುತ್ತಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲ ಸದಸ್ಯರ ಹಸ್ತಕ್ಷೇಪವಿಲ್ಲದೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು ಈ ಪ್ರಕರಣದಲ್ಲಿ ಮೂವರು ಮಹಿಳಾ KPSC ಸದಸ್ಯರ ಹೆಸರುಗಳು ಕೇಳಿಬಂದಿವೆ.ಸದಸ್ಯರಾದ ಬಿ.ವಿ. ಗೀತಾ, ಶಾಂತಹೊಸಮನಿ mಮತ್ತು ಎಲ್ಪ್ರೀಡಾ ಡಿ ಸಿಲ್ವಾ. ನೇಮಕಾತಿ ಅಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ಅಧಿಕಾರಿ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.1:3ರ ತಾತ್ಕಾಲಿಕ ಪಟ್ಟಿಯಲ್ಲಿ ಬರುವ ಅಭ್ಯರ್ಥಿಗಳ ಮಾಹಿತಿ ಪಡೆಯುತ್ತಿದ್ದರು. ಪಟ್ಟಿ ಸಿದ್ಧವಾದ ಬಳಿಕ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಭೇಟಿ ಮಾಡುತ್ತಿದ್ದರು ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ.
ಅಷ್ಟೇ ಅಲ್ಲ.ಕೆಲಸ ಕೊಡಿಸುವುದಾಗಿ ಹೇಳಿ ಮುಂಗಡವಾಗಿ 5ರಿಂದ 10 ಲಕ್ಷ ರೂಪಾಯಿ ಹಣ ಪಡೆಯಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಇದೆ.ಅಧಿಕಾರಿ ಜ್ಞಾನೇಂದ್ರ ಬಳಿ ಬಂದು 1:3ರ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ KPSC ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರು ಮಾಹಿತಿ ಪಡೆಯುತ್ತಿದ್ದರು ಎನ್ನಲಾಗಿದೆ.ಮಹಿಳಾ ಸದಸ್ಯರ ಸೂಚನೆ ಬಳಿಕ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತಿತ್ತಂತೆ.ಆದರೆ ಈ ಎಲ್ಲಾ ಆರೋಪಗಳು ತನಿಖೆಯ ಭಾಗವಾಗಿದ್ದು, ತನಿಖಾ ಸಂಸ್ಥೆಗಳ ಅಂತಿಮ ವರದಿ ಮತ್ತು ನ್ಯಾಯಾಲಯದ ತೀರ್ಪಿನ ಬಳಿಕವೇ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.