• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /1:3 ಪಟ್ಟಿ ತಯಾರಿಸಿ ಲಕ್ಷ ಲಕ್ಷ ಲೂಟಿ : 3 ಮಹಿಳಾ ಸದಸ್ಯರ ಶಾಮೀಲು ಶಂಕೆ, KPSC ಅಕ್ರಮ ತೆರೆದಿಟ್ಟ ED

1:3 ಪಟ್ಟಿ ತಯಾರಿಸಿ ಲಕ್ಷ ಲಕ್ಷ ಲೂಟಿ : 3 ಮಹಿಳಾ ಸದಸ್ಯರ ಶಾಮೀಲು ಶಂಕೆ, KPSC ಅಕ್ರಮ ತೆರೆದಿಟ್ಟ ED

ED ತನಿಖೆಯ ವೇಳೆ KPSC ನೇಮಕಾತಿ ಅಕ್ರಮದ ಬಗ್ಗೆ ಅಧಿಕಾರಿ ಜ್ಞಾನೇಂದ್ರ ನೀಡಿದ್ದಾರೆ ಎನ್ನಲಾದ ಹೇಳಿಕೆಗಳಿಂದಾಗಿ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. 15ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, KPSCಯ ಮೂವರು ಮಹಿಳಾ ಸದಸ್ಯರು ಹಾಗೂ ಅಧ್ಯಕ್ಷರ ಪಾತ್ರದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ.

Reported ByKrishna NKEdited ByKrishna NK
Published: Oct 04, 2026, 08:54 PM IST|Updated: Oct 04, 2026, 09:25 PM IST
joinshare
1:3 ಪಟ್ಟಿ ತಯಾರಿಸಿ ಲಕ್ಷ ಲಕ್ಷ ಲೂಟಿ : 3 ಮಹಿಳಾ ಸದಸ್ಯರ ಶಾಮೀಲು ಶಂಕೆ, KPSC ಅಕ್ರಮ ತೆರೆದಿಟ್ಟ ED
Image Credit: KPSC Scamm Updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

2

KPSC ನೇಮಕಾತಿ ಅಕ್ರಮ ತನಿಖೆ: ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲು

3

ಆರ್ಯನ್ ಖಾನ್ ಡೇಟಿಂಗ್ ಮಾಡ್ತಿರೋ ಈ ಬ್ರೆಜಿಲ್ ಸುಂದರಿ ಯಾರು ಗೊತ್ತೇ?

4

ಕನ್ನಡದ ಸ್ಟಾರ್‌ ನಟಿ ರಚಿತಾ ರಾಮ್‌ ಮೊದಲ ಸಂಬಳವೆಷ್ಟು ಗೊತ್ತಾ? ಡಿಂಪಲ್‌ಕ್ವೀನ್‌ಗೆ ಈಗಿರುವ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!

5

1:3 ಪಟ್ಟಿ ತಯಾರಿಸಿ ಲಕ್ಷ ಲಕ್ಷ ಲೂಟಿ : 3 ಮಹಿಳಾ ಸದಸ್ಯರ ಶಾಮೀಲು ಶಂಕೆ, KPSC ಅಕ್ರಮ ತೆರೆದಿಟ್ಟ ED

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : KPSC ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಸ್ಫೋಟಕ ತಿರುವು ಪಡೆದುಕೊಂಡಿದೆ. ED ವಿಚಾರಣೆ ವೇಳೆ KPSC ಅಧಿಕಾರಿ ಜ್ಞಾನೇಂದ್ರ ನೀಡಿರುವ ಹೇಳಿಕೆಯಲ್ಲಿ, ವೆಟರ್ನರಿ ಮತ್ತು ಪ್ರೊಬೆಷನರಿ ನೇಮಕಾತಿ ಮಾತ್ರವಲ್ಲದೆ, 15ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೂವರು ಮಹಿಳಾ KPSC ಸದಸ್ಯರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ED ವಿಚಾರಣೆ ವೇಳೆ KPSC ಅಧಿಕಾರಿ ಜ್ಞಾನೇಂದ್ರ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ವೆಟರಿನರಿ ಆಫೀಸರ್, ಪ್ರೊಬೆಷನರಿ ನೇಮಕಾತಿಗೆ ಮಾತ್ರ ಸೀಮಿತವಾಗಿರದೆ 15ಕ್ಕೂ ಹೆಚ್ಚು ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪ್ರತಿ ಡೀಲ್ ಬಳಿಕ ಹಣದ ಸಮಾನ ಹಂಚಿಕೆ ನಡೆಯುತ್ತಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲ ಸದಸ್ಯರ ಹಸ್ತಕ್ಷೇಪವಿಲ್ಲದೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ಈ ಪ್ರಕರಣದಲ್ಲಿ ಮೂವರು ಮಹಿಳಾ KPSC ಸದಸ್ಯರ ಹೆಸರುಗಳು ಕೇಳಿಬಂದಿವೆ. ಸದಸ್ಯರಾದ ಬಿ.ವಿ. ಗೀತಾ, ಶಾಂತಹೊಸಮನಿ, ಮತ್ತು ಎಲ್ಪ್ರೀಡಾ ಡಿ ಸಿಲ್ವಾ. ನೇಮಕಾತಿ ಅಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ಅಧಿಕಾರಿ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 1:3 ರ ತಾತ್ಕಾಲಿಕ ಪಟ್ಟಿಯಲ್ಲಿ ಬರುವ ಅಭ್ಯರ್ಥಿಗಳ ಮಾಹಿತಿ ಪಡೆಯುತ್ತಿದ್ದರು.. ಪಟ್ಟಿ ಸಿದ್ಧವಾದ ಬಳಿಕ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಭೇಟಿ ಮಾಡುತ್ತಿದ್ದರು ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ. ಅಷ್ಟೇ ಅಲ್ಲ, ಕೆಲಸ ಕೊಡಿಸುವುದಾಗಿ ಹೇಳಿ ಮುಂಗಡವಾಗಿ 5ರಿಂದ 10 ಲಕ್ಷ ರೂಪಾಯಿ ಹಣ ಪಡೆಯಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಇದೆ.

ಅಧಿಕಾರಿ ಜ್ಞಾನೇಂದ್ರ ಬಳಿ ಬಂದು 1:3ರ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ KPSC ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರು ಮಾಹಿತಿ ಪಡೆಯುತ್ತಿದ್ದರು ಎನ್ನಲಾಗಿದೆ. ಮಹಿಳಾ ಸದಸ್ಯರ ಸೂಚನೆ ಬಳಿಕ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತಿತ್ತಂತೆ. ಆದರೆ ಈ ಎಲ್ಲಾ ಆರೋಪಗಳು ತನಿಖೆಯ ಭಾಗವಾಗಿದ್ದು, ತನಿಖಾ ಸಂಸ್ಥೆಗಳ ಅಂತಿಮ ವರದಿ ಮತ್ತು ನ್ಯಾಯಾಲಯದ ತೀರ್ಪಿನ ಬಳಿಕವೇ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.

Add Zee News as a Preferred Source
TAGS:
Kannada News