SOCIAL MEDIA

Newsletter

PARTNER SITES
Select Language Select State

ಜೀ ಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್ : ಸಂಚಾರಕ್ಕೆ ಮುಕ್ತವಾಯ್ತು ಹೊಸಪೇಟೆ-ಹಂಪಿ ರೈಲ್ವೆ ಮೇಲ್ಸೇತುವೆ

ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ವಿಶ್ವವಿಖ್ಯಾತ ಹಂಪಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿದ್ದ ರೈಲ್ವೆ ಗೇಟ್ ಸಮಸ್ಯೆಗೆ ಕೊನೆಗೂ ಮೂರೂವರೆ ವರ್ಷಗಳ ಬಳಿಕ ಮುಕ್ತಿ ಸಿಕ್ಕಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಈ ಕುರಿತು ಜೀ ಕನ್ನಡ ನ್ಯೂಸ್ ಪ್ರಸಾರ ಮಾಡಿದ್ದ ಸರಣಿ ವರದಿಗಳಿಗೆ ಕೊನೆಗೂ ಫಲ ಸಿಕ್ಕಿದೆ. ಹೆಚ್ಚಿನ ವರದಿ ಇಲ್ಲಿದೆ..

Written By Krishna NK
Published: Oct 20, 2026, 03:22 PM IST | Updated: Oct 20, 2026, 03:25 PM IST
Image Credit: hospete news
Join

ವಿಜಯನಗರ : ಜೀ ಕನ್ನಡ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್.. ಹೊಸಪೇಟೆಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ರೈಲ್ವೆ ಗೇಟ್ ಕಿರಿಕಿರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸತತ ಮೂರೂವರೆ ವರ್ಷಗಳ ಬಳಿಕ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ದಿನದ ಬಹುತೇಕ ಸಮಯ ರೈಲ್ವೆ ಗೇಟ್ ಬಂದ್ ಆಗುತ್ತಿದ್ದರಿಂದ ಸಾರ್ವಜನಿಕರು, ಪ್ರವಾಸಿಗರು ಹಾಗೂ ವಾಹನ ಸವಾರರು ಅನುಭವಿಸುತ್ತಿದ್ದ ಸಂಕಷ್ಟಕ್ಕೆ ಈಗ ತೆರೆ ಬಿದ್ದಿದೆ. ಈ ಸಮಸ್ಯೆ ಕುರಿತು ಜೀ ಕನ್ನಡ ನ್ಯೂಸ್ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಈ ಕುರಿತ ರಿಪೋರ್ಟ್ ಇಲ್ಲಿದೆ ನೋಡಿ.

ಹೌದು.. ಅದು ಹೊಸಪೇಟೆಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ.. ನಿತ್ಯ ನೂರಾರು ವಾಹನಗಳು, ಪ್ರವಾಸಿಗರು ಹಾಗೂ ಸ್ಥಳೀಯರು ಸಂಚರಿಸುವ ಮಾರ್ಗ. ಆದರೆ, ಇದೇ ರಸ್ತೆಯಲ್ಲಿದ್ದ ರೈಲ್ವೆ ಗೇಟ್ ಜನರಿಗೆ ಮಾತ್ರ ದೊಡ್ಡ ತಲೆನೋವಾಗಿತ್ತು. ರೈಲುಗಳ ಸಂಚಾರದ ಕಾರಣ ದಿನದ 24 ಗಂಟೆಗಳಲ್ಲಿ ಸುಮಾರು 18 ಗಂಟೆಗಳ ಕಾಲ ರೈಲ್ವೆ ಗೇಟ್ ಬಂದ್ ಆಗುತ್ತಿತ್ತು ಎನ್ನಲಾಗಿದ್ದು, ಗೇಟ್ ತೆರೆಯುವವರೆಗೂ ವಾಹನ ಸವಾರರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೈಲ್ವೆ ಗೇಟ್ ಕಿರಿಕಿರಿಯಿಂದಾಗಿ ವಾಹನ ಸವಾರರು, ಪ್ರವಾಸಿಗರು ಹಾಗೂ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ಸಂಚಾರಕ್ಕೂ ಅಡ್ಡಿಯಾಗುತ್ತಿತ್ತು. ಗೇಟ್ ಬಂದ್‌ನಿಂದ ಉಂಟಾಗುತ್ತಿದ್ದ ವಿಳಂಬದಿಂದ ಅಮೂಲ್ಯ ಜೀವಗಳಿಗೂ ಅಪಾಯ ಎದುರಾಗುತ್ತಿತ್ತು ಎಂಬ ಆತಂಕ ಸಾರ್ವಜನಿಕರಲ್ಲಿತ್ತು. ಈ ಸಮಸ್ಯೆಯಿಂದ ಮುಕ್ತಿ ನೀಡುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದರು. ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜನರು ಒತ್ತಾಯಿಸುತ್ತಿದ್ದರು.

ಸಾರ್ವಜನಿಕರ ಈ ಸಂಕಷ್ಟದ ಬಗ್ಗೆ ಜೀ ಕನ್ನಡ ನ್ಯೂಸ್ ಕೂಡ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ರೈಲ್ವೆ ಗೇಟ್‌ನಿಂದ ಜನರು ಅನುಭವಿಸುತ್ತಿದ್ದ ಸಮಸ್ಯೆ, ವಾಹನ ಸವಾರರ ಪರದಾಟ ಹಾಗೂ ಮೇಲ್ಸೇತುವೆ ಕಾಮಗಾರಿಯ ವಿಳಂಬದ ಕುರಿತು ಹಲವು ಬಾರಿ ಗಮನ ಸೆಳೆಯಲಾಗಿತ್ತು. ಇದೀಗ ಸತತ ಮೂರೂವರೆ ವರ್ಷಗಳ ಬಳಿಕ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ರೈಲ್ವೆ ಗೇಟ್ ಕಿರಿಕಿರಿಯಿಂದ ಮುಕ್ತಿ ಸಿಗುವ ನಿರೀಕ್ಷೆ ಮೂಡಿದೆ.

ಬಹುದಿನಗಳಿಂದ ಎದುರು ನೋಡುತ್ತಿದ್ದ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದು ಸಾರ್ವಜನಿಕರಿಗೆ ನಿರಾಳತೆ ತಂದಿದೆ. ಹೊಸಪೇಟೆ–ಹಂಪಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದ್ದು, ಪ್ರವಾಸಿಗರ ಪ್ರಯಾಣವೂ ಸುಗಮವಾಗುವ ನಿರೀಕ್ಷೆಯಿದೆ. ರೈಲ್ವೆ ಗೇಟ್ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪುವ ಆಶಾಭಾವನೆ ಜನರಲ್ಲಿ ಮೂಡಿದೆ.

ಒಟ್ಟಿನಲ್ಲಿ, ಮೂರೂವರೆ ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಹೊಸಪೇಟೆಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ರೈಲ್ವೆ ಮೇಲ್ಸೇತುವೆ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಸಾರ್ವಜನಿಕರ ಸಮಸ್ಯೆಯನ್ನು ನಿರಂತರವಾಗಿ ವರದಿ ಮಾಡಿದ್ದ ಜೀ ಕನ್ನಡ ನ್ಯೂಸ್, ಇದೀಗ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿರುವ ಬೆಳವಣಿಗೆಯನ್ನು ನಿಮ್ಮ ಮುಂದಿಡುತ್ತಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES