• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಗೆಳೆಯನ ಪ್ರೀತಿಗೆ ಸಪೋರ್ಟ್‌ ಮಾಡಲು ಬಂದ ಫ್ರೇಂಡ್ಸ್‌ಗೆ ಥಳಿತ : ಕಂಬಕ್ಕೆ ಕಟ್ಟಿ ಅರೆಬೆತ್ತ*ಲೆಗೊಳಿಸಿ ಹ*ಲ್ಲೆ

ಗೆಳೆಯನ ಪ್ರೀತಿಗೆ ಸಪೋರ್ಟ್‌ ಮಾಡಲು ಬಂದ ಫ್ರೇಂಡ್ಸ್‌ಗೆ ಥಳಿತ : ಕಂಬಕ್ಕೆ ಕಟ್ಟಿ ಅರೆಬೆತ್ತ*ಲೆಗೊಳಿಸಿ ಹ*ಲ್ಲೆ

ಪ್ರೀತಿಸಿ ಮದುವೆಯಾಗಲು ಮುಂದಾದ ಯುವಕ ಹಾಗೂ ಆತನ ಸ್ನೇಹಿತರನ್ನು ಯುವತಿಯ ಸಂಬಂಧಿಕರು ವಿದ್ಯುತ್ ಕಂಬಕ್ಕೆ ಕಟ್ಟಿ, ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..

Written ByKrishna NK
Published: Nov 01, 2026, 03:11 PM IST|Updated: Nov 01, 2026, 03:13 PM IST
joinshare
ಗೆಳೆಯನ ಪ್ರೀತಿಗೆ ಸಪೋರ್ಟ್‌ ಮಾಡಲು ಬಂದ ಫ್ರೇಂಡ್ಸ್‌ಗೆ ಥಳಿತ : ಕಂಬಕ್ಕೆ ಕಟ್ಟಿ ಅರೆಬೆತ್ತ*ಲೆಗೊಳಿಸಿ ಹ*ಲ್ಲೆ
Image Credit: Haveri News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬೆಂಗಳೂರು-ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಗಿಫ್ಟ್! ಬುಲೆಟ್ ರೈಲು ಯೋಜನೆಯೂ ಮುಕ್ತಾಯ

ಬೆಂಗಳೂರು-ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಗಿಫ್ಟ್! ಬುಲೆಟ್ ರೈಲು ಯೋಜನೆಯೂ ಮುಕ್ತಾಯ

2

ಸ್ಟಿಂಗ್ ಆಪರೇಷನ್ ಪ್ರಕರಣ : ಸಿಸಿಬಿ ತನಿಖೆಯಲ್ಲಿ ಬಯಲಾಯ್ತು ರೋಚಕ ಸತ್ಯ

3

ವೇದಿಕೆಯಲ್ಲೇ ಭಾಷಣ ನಿಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ.. ಆತಂಕದಲ್ಲಿ ಓಡಿಬಂದ ನಾಯಕರು!

4

ಮಧುಮೇಹ ಇರುವವರು ಮೊಸರು ತಿನ್ನಬಹುದೇ? ನೀವು ಈ ವಿಷಯಗಳನ್ನು ತಿಳಿದಿರಲೇಬೇಕು!

5

ಗೆಳೆಯನ ಪ್ರೀತಿಗೆ ಸಪೋರ್ಟ್‌ ಮಾಡಲು ಬಂದ ಫ್ರೇಂಡ್ಸ್‌ಗೆ ಥಳಿತ : ಕಂಬಕ್ಕೆ ಕಟ್ಟಿ ಅರೆಬೆತ್ತ*ಲೆಗೊಳಿಸಿ ಹ*ಲ್ಲೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹಾವೇರಿ : ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಪ್ರಿಯತಮ ಹಾಗೂ ಆತನ ಸ್ನೇಹಿತರ ಮೇಲೆ ಯುವತಿಯ ಸಂಬಂಧಿಕರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದ್ದು, ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ಹಿನ್ನೆಲೆ
ರಟ್ಟಿಹಳ್ಳಿ ಮೂಲದ ಪ್ರಮೋದ್ ಹಾಗೂ ಬತ್ತಿಕೊಪ್ಪ ಗ್ರಾಮದ ಭಾವನಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ನಡುವಿನ ಪ್ರೇಮ ಪ್ರಕರಣದ ವಿಚಾರ ತಿಳಿದು, ಕೆಲವು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ತೆರಳಿ ರಿಜಿಸ್ಟರ್ ಮ್ಯಾರೇಜ್ (ನೋಂದಣಿ ವಿವಾಹ) ಮಾಡಿಕೊಳ್ಳಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಭಾವನಾಳ ಪೋಷಕರು ಮತ್ತು ಕುಟುಂಬಸ್ಥರು ಇಬ್ಬರನ್ನೂ ಸಮಾಧಾನಪಡಿಸಿ, ಮನವೊಲಿಸಿ ಭಾವನಾಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ, ಕೆಲ ದಿನಗಳ ಬಳಿಕ ಭಾವನಾಳೇ ಸ್ವತಃ ತನ್ನ ಪ್ರಿಯತಮ ಪ್ರಮೋದ್‌ಗೆ ಪತ್ರ ಬರೆದು, ಹೇಗಾದರೂ ಮಾಡಿ ನಮ್ಮ ಮದುವೆಯಾಗೋಣ ಎಂದು ಸಂದೇಶ ಕಳುಹಿಸಿದ್ದಳು. ಪ್ರೇಮಿಯ ಆಹ್ವಾನದ ಮೇರೆಗೆ ಪ್ರಮೋದ್ ತನ್ನ ಸ್ನೇಹಿತರಾದ ಪ್ರಕಾಶ್ ಹಾಗೂ ಪರಶುರಾಮ ಅವರೊಂದಿಗೆ ಬತ್ತಿಕೊಪ್ಪ ಗ್ರಾಮಕ್ಕೆ ತೆರಳಿದ್ದರು. ಭಾವನಾಳನ್ನು ಕರೆದುಕೊಂಡು ಹೋಗಲು ಬಂದಿದ್ದ ಈ ಯುವಕರ ತಂಡವನ್ನು ಗಮನಿಸಿದ ಯುವತಿಯ ಕುಟುಂಬಸ್ಥರು ಮತ್ತು ಸಂಬಂಧಿಕರು ಉದ್ರೇಕಗೊಂಡಿದ್ದಾರೆ.

ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಕ್ರೂರ ಹಲ್ಲೆ
ಗ್ರಾಮಕ್ಕೆ ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್ ಮತ್ತು ಪರಶುರಾಮ್ ಅವರನ್ನು ಬಲವಂತವಾಗಿ ಹಿಡಿದುಕೊಂಡ ಭಾವನಾಳ ಕುಟುಂಬಸ್ಥರು, ಮೂವರನ್ನೂ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಅಷ್ಟೇ ಅಲ್ಲದೆ, ಅವರ ಬಟ್ಟೆಗಳನ್ನು ಹರಿದು ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ್ದಾರೆ. ಸಾರ್ವಜನಿಕವಾಗಿ ಯುವಕರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಸಹ, ಉದ್ರೇಕಗೊಂಡ ಜನರ ಗುಂಪು ಮತ್ತು ಗಲಾಟೆಯ ಉಲ್ಬಣವನ್ನು ಕಂಡು ಪೊಲೀಸರು ಕೂಡ ಅಸಹಾಯಕರಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಈ ಬರ್ಬರ ಹಲ್ಲೆಗೊಳಗಾದ ಯುವಕರು ತೀವ್ರವಾಗಿ ನೊಂದಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದ ಭಾವನಾ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಪೂರ್ಣ ಪ್ರಕರಣ ಜರುಗಿದ್ದು, ಪೊಲೀಸರು ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಯುವಕರ ಮೇಲೆ ಈ ರೀತಿಯ ಅಮಾನವೀಯ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

Add Zee News as a Preferred Source
TAGS:
Kannada News