ವ್ಯಾಪಕ ಡಿಸ್ಕೌಂಟ್ ನೀಡಿ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಔಷಧ ತಯಾರಕ ಕಂಪನಿಗಳಿಗೆ ರಾಜ್ಯ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ- ಎಫ್‌ಡಿಎ ಬಿಗ್ ಶಾಕ್ ನೀಡಿದ್ದು, ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವ ಔಷಧಗಳ ಗುಣಮಟ್ಟ ಪರಿಶೀಲಿಸಲು ಮಹತ್ವದ ಕ್ರಮ ಕೈಗೊಂಡಿದೆ.
ಯಾದೃಚ್ಛಿಕ ಪರೀಕ್ಷೆ ಮೂಲಕ ಗುಣಮಟ್ಟ ಪರೀಶೀಲನೆ:
ಹೌದು, ಡಿಸ್ಕೌಂಟ್ ನೀಡುತ್ತಿರುವ ಔಷಧಗಳ ಗುಣಮಟ್ಟ ಟೆಸ್ಟ್ ಮಾಡಲು ಮುಂದಾಗಿರುವ ರಾಜ್ಯ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ- ಎಫ್‌ಡಿಎ ಎಲ್ಲಾ ಔಷಧ ಕಂಪನಿಗಳ ಔಷಧಿಗಳನ್ನು ಯಾದೃಚ್ಛಿಕ ಪರೀಕ್ಷೆ ಎಂದರೆ random test ಮೂಲಕ ಅವುಗಳ ಗುಣಮಟ್ಟವನ್ನು ಚೆಕ್ ಮಾಡಲು ನಿರ್ಧರಿಸಿದೆ.
ಔಷಧಿಗಳನ್ನು ಪರೀಕ್ಷೆಗೆ ಒಳಪಡಿಸಲು ಪ್ರಮುಖ ಕಾರಣ ಏನು?
ವಾಸ್ತವವಾಗಿ, ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಾಗಲಿವೆ. ಔಷಧಿಗಳು ಇದಕ್ಕೆ ಹೊರತಾಗಿಲ್ಲ. ಯಾವುದೇ ಔಷಧಿ ಬೇಕಿದ್ದರೂ ಅದು ಹತ್ತೇ ಹತ್ತು ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ. ಅದೂ ಕೂಡ ರಿಯಾಯಿತಿ ದರದಲ್ಲಿ ಔಷಧಿಯನ್ನು ಖರೀದಿಸಬಹುದಾಗಿದೆ.
25–30% ಡಿಸ್ಕೌಂಟ್ ದರದಲ್ಲಿ ಮೆಡಿಸಿನ್..!
ಈ ರೀತಿಯಾಗಿ ಬರೋಬ್ಬರಿ 25–30% ಡಿಸ್ಕೌಂಟ್ ನೀಡಿ 10 ನಿಮಿಷದಲ್ಲಿ ಮೆಡಿಸಿನ್ ಡೆಲಿವರಿ ಮಾಡುತ್ತಿರುವ ಔಷಧಿ ಕಂಪನಿಗಳು ನಿಜವಾಗಿಯೂ ಜನರಿಗೆ ಗುಣಮಟ್ಟದ ಔಷಧಿಗಳನ್ನು ನೀಡುತ್ತಿದೆಯೇ ಎಂಬ ಅನುಮಾನ ಜನರಲ್ಲಿದೆ. ಹೀಗಾಗಿ, ಫಾರ್ಮಸಿಗಳ ಔಷಧಿಗಳ ಗುಣಮಟ್ಟಗಳನ್ನು random test ಮೂಲಕ ಪರಿಶೀಲಿಸಲು ಎಫ್‌ಡಿಎ ಮುಂದಾಗಿದೆ.
ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಸಿನ್ ಮಾರಾಟಕ್ಕೆ ಕಡಿವಾಣ!
ಆನ್‌ಲೈನ್ ಔಷಧ ಮಾರಾಟದ ಮೇಲೆ FDA ಹದ್ದಿನ ಕಣ್ಣು ನೆಟ್ಟಿದ್ದು ಔಷಧ ಮಳಿಗೆಗಳ ಮೆಡಿಸಿನ್‌ಗಳ ಗುಣಮಟ್ಟ ಪರೀಕ್ಷೆಗೆ FDA ಮುಂದಾಗಿದೆ. ಇದರ ಜೊತೆಗೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಸಿನ್ ಮಾರಾಟಕ್ಕೆ ಕಡಿವಾಣಕ್ಕೆ ಪ್ಲಾನ್ ಮಾಡಿರುವ ಎಫ್‌ಡಿಎ, Schedule H, H1 ಮತ್ತು X ವರ್ಗದ ಔಷಧಗಳಿಗೆ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಆದರೆ, ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವಾಗ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದೆ.
ಆನ್‌ಲೈನ್ ಔಷಧ ಖರೀದಿಯ ದೊಡ್ಡ ಸವಾಲು:
ಆನ್‌ಲೈನ್‌ನಲ್ಲಿ ಔಷಧ ಖರೀದಿಸುವುದರ ಬಹುದೊಡ್ಡ ಸವಾಲೆಂದರೆ ಡಾಕ್ಟರ್ ಸಲಹೆ ನೀಡಿರುವ ಅವರು ಬರೆದಿರುವ ಮೆಡಿಸಿನ್ ಬದಲಿಗೆ ಪರ್ಯಾಯ ಔಷಧ ಅಥವಾ ಬೇರೆ ಕಂಪನಿಯ ಬ್ರ್ಯಾಂಡ್ ಔಷಧಿಗಳನ್ನು ನೀಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ನಿಯಮ ಉಲ್ಲಂಘಿಸಿದೆ ಕಾನೂನು ಕ್ರಮ:
ಈ ರೀತಿ ವೈದ್ಯರ ಅನುಮತಿ ಇಲ್ಲದೆ ವೈದ್ಯರು ಸಲಹೆ ನೀಡಿರುವ ಔಷಧಿ ಬದಲಿಗೆ ಅದನ್ನು ಬೇರೆ ಔಷಧಯೊಂದಿಗೆ ಬದಲಿಸುವುದರಿಂದ ಇದು ನೇರವಾಗಿ ರೋಗಿಯ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತದೆ. ಹಲವು ಸಂದರ್ಭಗಳಲ್ಲಿ ಇದು ರೋಗಿಯ ಆರೋಗ್ಯ ಸುರಕ್ಷತೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಈ ಹಿನ್ನಲೆಯಲ್ಲಿ ಔಷಧೀಯ ಕಂಪನಿಗಳು ಭಾರೀ ಡಿಸ್ಕೌಂಟ್ ದರದಲ್ಲಿ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುವ ಬಗ್ಗೆಯೂ ಕೂಡ ಭಾರೀ ವಿರೋಧಗಳು ಕೇಳಿ ಬಂದಿವೆ. ಹೀಗಾಗಿ ಔಷಧ ಇಲಾಖೆ ಔಷಧ ಮಳಿಗೆಗಳಲ್ಲಿ ಔಷಧಗಳ Quality Test ಮಾಡಲು ಮುಂದಾಗಿದೆ. ಔಷಧಗಳ ಗುಣಮಟ್ಟ, ಲೇಬಲಿಂಗ್, ಸಂಗ್ರಹಣೆ, ಮಾರಾಟ ದಾಖಲೆ ಮತ್ತು ಪರವಾನಗಿ ಸೇರಿದಂತೆ ಹಲವು ಅಂಶಗಳ ಪರಿಶೀಲನೆ ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಮುಂದಾಗಿದೆ ಎಂದು ತಿಳಿದು ಬಂದಿದೆ.