SOCIAL MEDIA

Newsletter

PARTNER SITES
Select Language Select State

ಚೆಲುವೆಯ ಬಣ್ಣಬಣ್ಣದ ಮಾತಿಗೆ ಮರುಳಾದವರ ಗತಿ ಗೋವಿಂದ..! ಡೇಂಜರ್‌ ಸುಂದರಿ ಮಾಡಿದ್ದೇನು ಗೊತ್ತೆ?

ಡಿಸ್ಕೌಂಟ್ ಆಫರ್‌ಗಳ ಹೆಸರಿನಲ್ಲಿ ಉದ್ಯಮಿಗಳು, ಟೆಕ್ಕಿಗಳು ಹಾಗೂ ನಿವೃತ್ತ ಯೋಧರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಕುಖ್ಯಾತ ವಂಚಕಿ ಪೂಜಾ ಭಗವತಿ ಕೊನೆಗೂ ಆವಲಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ. ಬಣ್ಣಬಣ್ಣದ ಮಾತುಗಳಿಂದ ಜನರಿಗೆ ಮಂಕಬೂದಿ ಎರಚಿ, ನವರಂಗಿ ನಾಟಕವಾಡುತ್ತಿದ್ದ ಈ ಖತರ್ನಾಕ್ ಲೇಡಿಯ ಕರಾಳ ಮುಖದ ರೋಚಕ ಅನಾವರಣ ಸ್ಟೋರಿ.. ಇಲ್ಲಿದೆ..

Written By Krishna NK
Published: Nov 04, 2026, 07:14 PM IST | Updated: Nov 04, 2026, 07:19 PM IST
Image Credit: Crime News
Join

ಬೆಂಗಳೂರು : ಬಣ್ಣಬಣ್ಣದ ಮಾತನಾಡಿ ಆಕೆ ಜನರಿಗೆ ಮಂಕಬೂದಿ ಎರಚುತ್ತಿದ್ದಳು. ಹಲವರಿಗೆ ಕೋಟಿ-ಕೋಟಿ ಉಂಡೇನಾಮ ಹಾಕಿದ್ಲು. ಪೊಲೀಸರಿಗೂ ಸಿಗದೇ ನವರಂಗಿ ನಾಟಕವಾಡಿದ್ಲು. ಈಗ ಅವಳ ಟೈಮ್ ಕೆಟ್ಟು ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾಳೆ. ಹಾಗಾದ್ರೆ ಯಾರು ಆ ಐನಾತಿ ಲೇಡಿ. ಯಾವ ಘನಾಂದರಿ ಕೆಲಸ ಮಾಡಿದ್ದಾಳೆ ಅಂತೀರಾ‌.‌ ತೋರಿಸ್ತಿವಿ ನೋಡಿ.

ಈ ಫೋಟೋದಲ್ಲಿ ಕಾಣ್ತಿರುವ ಈಕೆಯ ಹೆಸರು ಪೂಜಾ ಭಗವತಿ ಅಂತಾ. ಡಿಸ್ಕೌಂಟ್‌ನಲ್ಲಿ ಚಿನ್ನದ ಒಡವೆ, ಕಾರು, ಬೈಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಳು ಸದ್ಯ ಈ ಖತರ್ನಾಕ್ ಮಹಿಳೆಯ ಬಂಧನವಾಗಿದೆ. ಉದ್ಯಮಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಕೀಲರು ಹಾಗೂ ನಿವೃತ್ತ ಯೋಧರನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ ಪೂಜಾ ಭಗವತಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಈಕೆಯ ಮೇಲಿದೆ.

ನೋಡೋಕೆ ಆಕರ್ಷಕ ಆಫರ್.. ಮಾತಿನಲ್ಲಿ ಬಣ್ಣದ ಭರವಸೆ.. ಡಿಸ್ಕೌಂಟ್ ಆಸೆಗೆ ಬಿದ್ದವರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದಳು. ನಮ್ಮ ಅಪಾರ್ಟ್‌ಮೆಂಟ್ ಅಡ್ಡ ಎಂಬ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಚಿನ್ನದ ಒಡವೆ, ಕಾರು, ಬೈಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಡಿಸುವುದಾಗಿ ಪೂಜಾ ಭಗವತಿ ನಂಬಿಸುತ್ತಿದ್ದಳು. ಹೀಗೆ ಮಂಜುನಾಥ್ ಎಂಬ ಟೆಕ್ಕಿಗೂ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಉದ್ಯಮಿಗಳು, ಟೆಕ್ಕಿಗಳು, ಲಾಯರ್‌ಗಳು ಹಾಗೂ ನಿವೃತ್ತ ಯೋಧರನ್ನು ಗುರಿಯಾಗಿಸಿಕೊಂಡು ಗ್ಯಾಂಗ್ ಕಟ್ಟಿಕೊಂಡು ವಂಚನೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.

ಇದು ಈಕೆಯ ಮೊದಲ ವಂಚನೆ ಪ್ರಕರಣವಲ್ಲ. ಆವಲಹಳ್ಳಿ, ಕೋಣನಕುಂಟೆ, ಪುಟ್ಟೇನಹಳ್ಳಿ ಹಾಗೂ ತಲಘಟ್ಟಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೂಜಾ ಭಾಗವತಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಐದರಿಂದ ಆರುಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಸಿನಿಮಾ ನಿರ್ಮಾಪಕರೊಬ್ಬರಿಗೂ ಇದೇ ರೀತಿ ವಂಚಿಸಿದ್ದಾಳೆ ಎನ್ನಲಾಗಿದೆ.

ಈ ಹಿಂದೆ ಹಲವು ಬಾರಿ ಬಂಧನವಾಗಿ ಜೈಲಿಗೂ ಹೋಗಿ ಬಂದಿದ್ದ ಪೂಜಾ ಭಗವತಿ, ಜೈಲಿನಿಂದ ಹೊರಬಂದ ಬಳಿಕ ಮತ್ತೆ ವಂಚನೆಗೆ ಇಳಿದಿದ್ದಾಳೆ ಎನ್ನಲಾಗಿದೆ. ಸದ್ಯ ಆವಲಹಳ್ಳಿ ಪೊಲೀಸರಿಂದ ಬಂಧನವಾಗಿದ್ದು, ಆರೋಪಿತೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ವಂಚನೆ ಜಾಲದ ಮತ್ತಷ್ಟು ಮಾಹಿತಿ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಒಟ್ಟಾರೆಯಾಗಿ.. ಆಕರ್ಷಕ ಆಫರ್‌ಗಳು ಮತ್ತು ನಯವಂಚನೆಯ ಮಾತುಗಳಿಗೆ ಮರುಳಾಗಿ ಸಾರ್ವಜನಿಕರು ಅಪರಿಚಿತರ ಅಥವಾ ಆನ್‌ಲೈನ್ ಆ್ಯಪ್‌ಗಳ ಸುಲಭದ ಬಲೆಗೆ ಬೀಳದಂತೆ ಈ ಘಟನೆಯು ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಸದ್ಯ ಪೊಲೀಸರು ಈಕೆಯ ಬಂಧನದಿಂದ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಈ ವಂಚನೆ ಜಾಲದ ಮತ್ತಷ್ಟು ಗುಟ್ಟು ರಟ್ಟಾಗಬೇಕಿದೆ.

ಇಂತಹ ಆನ್‌ಲೈನ್ ಮತ್ತು ಡಿಸ್ಕೌಂಟ್ ವಂಚನೆಗಳಿಂದ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ

1. ಅತಿ ಕಡಿಮೆ ಬೆಲೆಯ ಆಮಿಷಗಳಿಗೆ ಬಲಿಯಾಗದಿರಿ 
ಮಾರುಕಟ್ಟೆ ಬೆಲೆಗಿಂತ ಅರ್ಧ ಅಥವಾ ಅತಿ ಕಡಿಮೆ ಬೆಲೆಗೆ ಚಿನ್ನ, ಕಾರು, ಬೈಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಡುವುದಾಗಿ ಯಾರಾದರೂ ಆಫರ್ ನೀಡಿದರೆ, ತಕ್ಷಣ ನಂಬಬೇಡಿ. ಯಾವುದಾದರೂ ವಸ್ತು ಅತಿ ಅಗ್ಗವಾಗಿ ಸಿಗುತ್ತಿದೆ ಎಂದರೆ, ಅಲ್ಲಿ ಮೋಸವಿರುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.

2. ಪರಿಚಯವಿಲ್ಲದ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಿರಲಿ
ಹಣ ಪಾವತಿಸುವ ಮೊದಲು ಅಥವಾ ಆ್ಯಪ್ ಡೌನ್‌ಲೋಡ್ ಮಾಡುವ ಮೊದಲು ಆ ಕಂಪನಿ ಅಥವಾ ಆ್ಯಪ್‌ನ ಅಧಿಕೃತತೆ (Authenticity)ಯನ್ನು ಪರಿಶೀಲಿಸಿ. ಸೋಶಿಯಲ್ ಮೀಡಿಯಾ ಲಿಂಕ್‌ಗಳು ಅಥವಾ ಅಪರಿಚಿತರು ಕಳುಹಿಸುವ ಲಿಂಕ್‌ಗಳ ಮೂಲಕ ಹಣ ವರ್ಗಾಯಿಸಬೇಡಿ.

3. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ
ವೈಯಕ್ತಿಕ ಪರಿಚಯವಿಲ್ಲದ ವ್ಯಕ್ತಿಗಳು, ನಂಬಿಕಸ್ಥರಂತೆ ನಟಿಸುವ ಮಧ್ಯವರ್ತಿಗಳು ಅಥವಾ ಆನ್‌ಲೈನ್ ಪರಿಚಯಸ್ಥರಿಗೆ ಮುಂಗಡ ಹಣ (Advance Money) ಅಥವಾ ಡಿಪಾಸಿಟ್ ನೀಡಬೇಡಿ.

4. ವ್ಯಕ್ತಿಗಳ ಹಿನ್ನೆಲೆಯನ್ನು ಪರಿಶೀಲಿಸಿ
ಉದ್ಯಮಿಗಳು, ನೌಕರರು ಅಥವಾ ಉನ್ನತ ಹುದ್ದೆಯಲ್ಲಿರುವವರನ್ನು ಟಾರ್ಗೆಟ್ ಮಾಡಿ ಬರುವ ಇಂತಹ ಸ್ಕೀಮ್‌ಗಳ ಬಗ್ಗೆ ಹಿರಿಯರೊಂದಿಗೆ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಚರ್ಚಿಸಿ. ಯಾರಾದರೂ ದೊಡ್ಡ ಮೊತ್ತದ ಹೂಡಿಕೆ ಅಥವಾ ಡಿಸ್ಕೌಂಟ್ ಆಫರ್ ನೀಡಿದರೆ, ಅವರ ಹಿಂದಿನ ವ್ಯವಹಾರಗಳು ಮತ್ತು ವಿಳಾಸವನ್ನು ಖಚಿತಪಡಿಸಿಕೊಳ್ಳಿ.

5. ಮೋಸ ಹೋದರೆ ತಕ್ಷಣ ದೂರು ನೀಡಿ
ಒಂದು ವೇಳೆ ನೀವು ಅಥವಾ ನಿಮ್ಮ ಪರಿಚಯದವರು ಇಂತಹ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಮ್ (Cyber Crime Helpline - 1930) ಗೆ ದೂರು ನೀಡಿ. ಎಷ್ಟು ಬೇಗ ಪೊಲೀಸರಿಗೆ ಮಾಹಿತಿ ನೀಡುತ್ತೀರೋ, ಅಷ್ಟು ಬೇಗ ಹಣ ವಾಪಸ್ ಪಡೆಯಲು ಅಥವಾ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES