ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿಕೆ; ಕ್ವಿಂಟಾಲ್‌ಗೆ ₹79 ಸಾವಿರ!
ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಭಾರೀ ಏರಿಕೆಯಾಗಿದ್ದು, ಡಬ್ಬಿ ತಳಿಯ ಕ್ವಿಂಟಾಲ್‌ಗೆ ಗರಿಷ್ಠ ₹79 ಸಾವಿರ ದಾಖಲಾಗಿದೆ. ಕಡ್ಡಿ ತಳಿಗೆ ₹71 ಸಾವಿರದವರೆಗೆ ಬೆಲೆ ಸಿಕ್ಕಿದೆ. ದಾಖಲೆ ದರದಿಂದ ರೈತರಲ್ಲಿ ಸಂತಸ ಮೂಡಿದ್ದು, ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ನಿರೀಕ್ಷೆಯೂ ಹೆಚ್ಚಾಗಿದೆ.
Byadgi Chilli Price: ರಾಜ್ಯದ ಪ್ರಮುಖ ಮೆಣಸಿನಕಾಯಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಭಾರೀ ಏರಿಕೆ ಕಂಡಿದೆ. ಡಬ್ಬಿ ತಳಿಯ ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ ಗರಿಷ್ಠ ₹79 ಸಾವಿರ ದರ ದಾಖಲಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ ಸುಮಾರು ₹40 ಸಾವಿರದಿಂದ ₹50 ಸಾವಿರದ ಆಸುಪಾಸಿನಲ್ಲಿ ಇದ್ದ ಹಿನ್ನೆಲೆಯಲ್ಲಿ, ಈ ಬಾರಿ ದಾಖಲಾಗಿರುವ ಬೆಲೆ ಏರಿಕೆ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ.
ಶನಿವಾರ ನಡೆದ ಟೆಂಡರ್‌ನಲ್ಲಿ ವಿವಿಧ ತಳಿಯ ಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆತಿದೆ. ಡಬ್ಬಿ ತಳಿಯ ಮೆಣಸಿನಕಾಯಿಗೆ ಕನಿಷ್ಠ ₹6,629, ಗರಿಷ್ಠ ₹79,000 ಹಾಗೂ ಸರಾಸರಿ ₹62,509 ದರ ದಾಖಲಾಗಿದೆ. ಇದೇ ವೇಳೆ ಕಡ್ಡಿ ತಳಿಯ ಮೆಣಸಿನಕಾಯಿಗೂ ಉತ್ತಮ ಬೆಲೆ ದೊರೆತಿದ್ದು, ಕ್ವಿಂಟಾಲ್‌ಗೆ ಕನಿಷ್ಠ ₹5,889, ಗರಿಷ್ಠ ₹71,000 ಹಾಗೂ ಸರಾಸರಿ ₹59,009 ದರದಲ್ಲಿ ವಹಿವಾಟು ನಡೆದಿದೆ.
9,402 ಚೀಲ ಮೆಣಸಿನಕಾಯಿ ನೋಂದಣಿ
ಶನಿವಾರದ ಟೆಂಡರ್‌ನಲ್ಲಿ ಒಟ್ಟು 9,402 ಚೀಲ ಮೆಣಸಿನಕಾಯಿಯನ್ನ ಮಾರಾಟಕ್ಕಾಗಿ ನೋಂದಣಿ ಮಾಡಲಾಗಿತ್ತು. ಬ್ಯಾಡಗಿ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ಮೆಣಸಿನಕಾಯಿ ಆವಕವಾಗುತ್ತಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತಿರುವುದು ರೈತರ ಗಮನ ಸೆಳೆದಿದೆ. ಡಬ್ಬಿ ಹಾಗೂ ಕಡ್ಡಿ ತಳಿಗಳ ಜೊತೆಗೆ ಗುಂಟೂರು ತಳಿಯ ಮೆಣಸಿನಕಾಯಿಯೂ ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿದೆ. ಗುಣಮಟ್ಟ, ಬಣ್ಣ, ತೇವಾಂಶ ಹಾಗೂ ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ವಿವಿಧ ಲಾಟ್‌ಗಳಿಗೆ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಾಲ್‌ಗೆ ₹40 ಸಾವಿರದಿಂದ ₹50 ಸಾವಿರದ ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದ ಮೆಣಸಿನಕಾಯಿ, ಇದೀಗ ಗರಿಷ್ಠ ₹79 ಸಾವಿರದವರೆಗೆ ತಲುಪಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಉತ್ತಮ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮುಂದಿನ ಬೆಳೆಗಾಗಿ ರೈತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಅಲ್ಪ ಪ್ರಮಾಣದ ನೀರಿನ ಲಭ್ಯತೆಯಲ್ಲಿಯೂ ಮೆಣಸಿನಕಾಯಿ ಬಿತ್ತನೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇದೇ ರೀತಿಯ ಉತ್ತಮ ದರ ಮುಂದುವರಿದರೆ ಬೆಳೆಗಾರರಿಗೆ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆಯಿದೆ.
ಮುಂದಿನ ದಿನಗಳಲ್ಲಿ ದರ ಹೇಗಿರಲಿದೆ?
ಮೆಣಸಿನಕಾಯಿ ದರದಲ್ಲಿ ಕಂಡುಬಂದಿರುವ ಈ ಏರಿಕೆ ರೈತರಲ್ಲಿ ಸಂತಸ ಮೂಡಿಸಿರುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆ ಬೆಲೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲವನ್ನೂ ಹೆಚ್ಚಿಸಿದೆ. ಸದ್ಯದ ಉತ್ತಮ ದರ ಮುಂದುವರಿದರೆ ಮುಂದಿನ ಹಂಗಾಮಿನಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಮತ್ತು ಆವಕ ಪ್ರಮಾಣದಲ್ಲಿ ಬದಲಾವಣೆ ಕಾಣುವ ಸಾಧ್ಯತೆಯಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಬೇಡಿಕೆ, ಪೂರೈಕೆ, ಗುಣಮಟ್ಟ, ಹವಾಮಾನ ಹಾಗೂ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಸಾಧ್ಯತೆ ಇರುವುದರಿಂದ, ಪ್ರಸ್ತುತ ದಾಖಲಾಗಿರುವ ಗರಿಷ್ಠ ದರ ಮುಂದೆಯೂ ಇದೇ ರೀತಿ ಮುಂದುವರಿಯುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಒಟ್ನಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ ₹79 ಸಾವಿರದವರೆಗೆ ದರ ಸಿಕ್ಕಿರುವುದು ಈ ಹಂಗಾಮಿನ ಪ್ರಮುಖ ಬೆಳವಣಿಗೆಯಾಗಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿರುವ ರೈತರು ಮುಂದಿನ ಬೆಳೆ ಹಾಗೂ ಮಾರುಕಟ್ಟೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.