• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಆಡುಗೋಡಿ ಟೆಕ್ಕಿ ಪೂಜಾ ದತ್ತಾ ಸಾವಿನ ರಹಸ್ಯ ಬಯಲು.. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಏನಿದೆ?

ಆಡುಗೋಡಿ ಟೆಕ್ಕಿ ಪೂಜಾ ದತ್ತಾ ಸಾವಿನ ರಹಸ್ಯ ಬಯಲು.. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಏನಿದೆ?

ಜಾರ್ಖಂಡ್‌ ಮೂಲದ ಟೆಕ್ಕಿ ಪೂಜಾ ದತ್ತಾ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಎಫ್‌ಎಸ್‌ಎಲ್ ರಿಪೋರ್ಟ್ ನಲ್ಲಿ ಕೊಟ್ಟ ಕಾರಣ ಏನ್‌ ಗೊತ್ತಾ?

Written ByYashaswini V
Published: Oct 16, 2026, 03:56 PM IST|Updated: Oct 16, 2026, 03:58 PM IST
joinshare
ಆಡುಗೋಡಿ ಟೆಕ್ಕಿ ಪೂಜಾ ದತ್ತಾ ಸಾವಿನ ರಹಸ್ಯ ಬಯಲು.. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಏನಿದೆ?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಸಿದ್ದರಾಮಯ್ಯರಿಂದ ಅಧಿಕಾರಿ ಕಿತ್ತುಕೊಳ್ಳೊಕ್ಕೆ ಸ್ಟಿಂಗ್‌ ಪ್ಲಾನ್ ಮಾಡಿದ್ದೇ ಡಿಕೆಶಿ : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕಿಡಿ

ಸಿದ್ದರಾಮಯ್ಯರಿಂದ ಅಧಿಕಾರಿ ಕಿತ್ತುಕೊಳ್ಳೊಕ್ಕೆ ಸ್ಟಿಂಗ್‌ ಪ್ಲಾನ್ ಮಾಡಿದ್ದೇ ಡಿಕೆಶಿ : ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕಿಡಿ

2

Bank Holiday: ನಾಳೆ 3ನೇ ಶನಿವಾರವಾದರೂ ಬ್ಯಾಂಕ್‌ಗಳಿಗೆ ರಜೆ.. ಎಲ್ಲಿ? ಏಕೆ? ಇಲ್ಲಿದೆ ಮಹತ್ವದ ಮಾಹಿತಿ

3

‘ಸ್ಟಿಂಗ್ ಸೃಷ್ಟಿಸಿದವರನ್ನ ಬಂಧಿಸಿ, ಫಾರ್ವರ್ಡ್ ಮಾಡಿದವರನ್ನಲ್ಲ!’: ಬಸವರಾಜ ಬೊಮ್ಮಾಯಿ

4

ಆಡುಗೋಡಿ ಟೆಕ್ಕಿ ಪೂಜಾ ದತ್ತಾ ಸಾವಿನ ರಹಸ್ಯ ಬಯಲು.. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಏನಿದೆ?

5

ಅರ್ಷದೀಪ್‌ಗೆ ಗಾಯ, ಭುವಿಗೆ ಬುಲಾವ್‌! ಬೆಂಗಳೂರು ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಆಕೆ ಆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಟೆಕ್ಕಿ. ಮನೆಯಲ್ಲೇ ಬೆತ್ತಲೆಯಾಗಿ ಶವವಾಗಿ ಪತ್ತೆಯಾಗಿದ್ಲು. ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಕೊ**ಲೆ ಆರೋಪವು ಕೇಳಿ ಬಂದಿತ್ತು. ಆದರೆ 6 ತಿಂಗಳ ಬಳಿಕ ಟೆಕ್ಕಿ ಪೂಜಾ ದತ್ತಾ  ಸಾವಿಗೆ ಅಸಲಿ ಕಾರಣ ಗೊತ್ತಾಗಿದೆ. ಹಾಗಾದ್ರೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದ ಅಂಶವೇನೂ? ಎಫ್ ಎಸ್ ಎಲ್ ರಿಪೋರ್ಟ್‌ನಲ್ಲಿ ಏನಿತ್ತು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ..

ಶ್ವಾಸಕೋಶದ ಸಮಸ್ಯೆಯೇ ಸಾವಿಗೆ ಕಾರಣ ಎಂದ ವರದಿ‌‌..
ಹೌದು, ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಟೆಕ್ಕಿ ಪೂಜಾ ದತ್ತಾ ಸಾವಿನ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಏಪ್ರಿಲ್ 27, 2026ರಂದು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಪೂಜಾ ದತ್ತಾ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಆಡುಗೋಡಿ ಪೊಲೀಸರು ಎಫ್‌ಎಸ್‌ಎಲ್ ವರದಿಯ ಆಧಾರದಲ್ಲಿ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಪೂಜಾ ದತ್ತಾ ಸಾವಿಗೆ ಶ್ವಾಸಕೋಶದ ವೈಫಲ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಪೂಜಾ ದತ್ತಾ ವಾಸವಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಸ್ಥಿತಿ ಮತ್ತು ಮನೆಯೊಳಗಿನ ಪರಿಸ್ಥಿತಿ ಅಂದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಮನೆಯ ಗೋಡೆಗಳು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಕಾಗದಗಳ ಮೇಲೆ ಬರೆದ ಬರಹಗಳನ್ನು ಅಂಟಿಸಲಾಗಿತ್ತು. ಮನೆಗೆ ಯುವಕನೊಬ್ಬ ಬಂದು ಹೋಗುತ್ತಿದ್ದ ಎಂಬ ಮಾಹಿತಿ ಸಹ ಇತ್ತು. ಈ ಹಿನ್ನೆಲೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಎಫ್‌ಎಸ್‌ಎಲ್ ವರದಿಯಲ್ಲಿ ಸಾವಿಗೆ ಶ್ವಾಸಕೋಶದ ವೈಫಲ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ. ದೇಹದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದ ಅಂಶವನ್ನೂ ವರದಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಪೂಜಾ ದತ್ತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿಯೂ ಹೊರಬಂದಿದೆ. ಅಂತಿಮವಾಗಿ, ಅನಾರೋಗ್ಯದಿಂದ ಸಾವು ಸಂಭವಿಸಿದೆ ಎಂಬ ಅಭಿಪ್ರಾಯದೊಂದಿಗೆ ಆಡುಗೋಡಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಅದೆನೇ ಹೇಳಿ. ಕುಟುಂಬದಿಂದ ದೂರವಿದ್ದ ಟೆಕ್ಕಿ ಜೀವನ ಈ ರೀತಿ ಅಂತ್ಯವಾಗಿದ್ದು, ನಿಜವಾಗಿಯೂ ದುರಂತವೇ ಸರಿ.

Add Zee News as a Preferred Source
TAGS:
Crime
Kannada News