ಸೌಂದರ್ಯಾ ಕಾಲು ಹಿಡಿದ ಯಶಸ್.. ಇದ್ಯಾವ ಆಟ ಗುರು?! ಅಸಹ್ಯ ಎಂದ ಜಗದೀಶ್, ಪ್ರಶಾಂತ್!
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಸ್ಪರ್ಧಿ ಯಶಸ್ ಅವರ ವರ್ತನೆ ಇದೀಗ ದೊಡ್ಮನೆಯಲ್ಲಿ ಚರ್ಚೆಯ ವಿಷಯವಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಸ್ಪರ್ಧಿ ಯಶಸ್ ಅವರ ವರ್ತನೆ ಇದೀಗ ದೊಡ್ಮನೆಯಲ್ಲಿ ಚರ್ಚೆಯ ವಿಷಯವಾಗಿದೆ.
ಸೌಂದರ್ಯಾ ಶೆಟ್ಟಿ ಜೊತೆಗಿನ ಆಪ್ತತೆ ಬಗ್ಗೆ ಜಗದೀಶ್ ಮತ್ತು ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಕ್ಯಾಪ್ಟನ್ ಧನುಷ್ ಕೂಡ ಯಶಸ್ ಅವರ ಆಟದ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಹಾಗಾದ್ರೆ, ಬಿಗ್ಬಾಸ್ ಮನೆಯಲ್ಲಿ ಯಶಸ್ ವಿರುದ್ಧ ಅಸಮಾಧಾನಕ್ಕೆ ಕಾರಣವೇನು? ನೋಡೋಣ ಈ ವರದಿ.
ಬಿಗ್ಬಾಸ್ ಕನ್ನಡ ಸೀಸನ್ 13.. ದಿನಕ್ಕೊಂದು ಟ್ವಿಸ್ಟ್, ಕ್ಷಣಕ್ಕೊಂದು ಚರ್ಚೆ! ಇದೀಗ ದೊಡ್ಮನೆಯಲ್ಲಿ ಯಶಸ್ ಅವರ ವರ್ತನೆಯೇ ಹಾಟ್ ಟಾಪಿಕ್ ಆಗಿದೆ. ಸೌಂದರ್ಯಾ ಶೆಟ್ಟಿ ಹಾಗೂ ಆಸಿಯಾ ಜೊತೆ ಯಶಸ್ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಮಾತುಗಳು ಈ ಹಿಂದೆಯೂ ಕೇಳಿಬಂದಿದ್ದವು. ಇದೀಗ ಜಗದೀಶ್ ಮತ್ತು ಪ್ರಶಾಂತ್ ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಅಕ್ಟೋಬರ್ 13ರ ಸಂಚಿಕೆಯಲ್ಲಿ ಕಾವ್ಯಾ, ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಕಾಲು ಇಟ್ಟುಕೊಳ್ಳಲು ಜಾಗವಿಲ್ಲ ಎಂದು ಸೌಂದರ್ಯಾ ಹೇಳಿದ್ದಾರೆ. ಆಗ ಯಶಸ್ ಅವರ ಕಾಲನ್ನು ತಮ್ಮ ಅಂಗೈಯಲ್ಲಿ ಹಿಡಿದುಕೊಂಡಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಜಗದೀಶ್ ಮತ್ತು ಪ್ರಶಾಂತ್, ಯಶಸ್ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಶಸ್ ವರ್ತನೆ ಕಂಡು ಜಗದೀಶ್ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಪ್ರಶಾಂತ್ ಕೂಡ ಯಶಸ್ ಆಟದ ಬಗ್ಗೆ ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಯಶಸ್ ಅವರಿಗೆ ಆಸಿಯಾ ಇಷ್ಟಾನಾ ಅಥವಾ ಸೌಂದರ್ಯಾ ಇಷ್ಟಾನಾ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಜಗದೀಶ್ ಹೆಚ್ಚು ಮಾತನಾಡಲು ಆಸಕ್ತಿ ತೋರಿಸಿಲ್ಲ.
ಇನ್ನೊಂದೆಡೆ, ಈ ವಾರದ ಟಾಸ್ಕ್ಗಳಿಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸುವ ವಿಚಾರವೂ ಚರ್ಚೆಯಾಗಿದೆ. ಯಾರು ಸ್ವತಂತ್ರವಾಗಿ ಆಟವಾಡಬಲ್ಲರು, ಯಾರು ಇತರರ ಬೆಂಬಲವನ್ನು ಅವಲಂಬಿಸಿದ್ದಾರೆ ಎಂಬುದರ ಬಗ್ಗೆ ಕ್ಯಾಪ್ಟನ್ ಧನುಷ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸೌಂದರ್ಯಾ ಶೆಟ್ಟಿ ಅವರಿಗೆ ಒಬ್ಬಂಟಿಯಾಗಿ ಆಟವಾಡುವ ಸಾಮರ್ಥ್ಯವಿಲ್ಲ ಎಂದು ಧನುಷ್ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಯಶಸ್ ಅವರಿಗೆ ಹಲವು ಬಾರಿ ಅವಕಾಶ ಸಿಕ್ಕಿದ್ದರೂ, ಸ್ವತಂತ್ರವಾಗಿ ಆಟವಾಡುವ ಬದಲು ಇತರರ ಬೆಂಬಲ ಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ, ಯಶಸ್ ಅವರ ವೈಯಕ್ತಿಕ ನಡವಳಿಕೆ, ಸೌಂದರ್ಯಾ ಜೊತೆಗಿನ ಆಪ್ತತೆ ಮತ್ತು ಆಟದ ಸಾಮರ್ಥ್ಯದ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಚರ್ಚೆ ಜೋರಾಗಿದೆ. ಈ ಟೀಕೆಗಳ ನಡುವೆ ಯಶಸ್ ತಮ್ಮ ಆಟದ ಮೂಲಕ ಉತ್ತರ ನೀಡುತ್ತಾರಾ? ಅಥವಾ ದೊಡ್ಮನೆಯಲ್ಲಿ ಹೊಸ ಸಂಘರ್ಷಕ್ಕೆ ಇದು ನಾಂದಿಯಾಗುತ್ತಾ? ಮುಂದಿನ ಸಂಚಿಕೆಗಳಲ್ಲಿ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಸೌಂದರ್ಯಾ ಜೊತೆಗಿನ ಆಪ್ತತೆ ವಿಚಾರಕ್ಕೆ ಯಶಸ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು, ಧನುಷ್ ಎತ್ತಿರುವ ಆಟದ ಸಾಮರ್ಥ್ಯದ ಪ್ರಶ್ನೆಗಳು.. ಇವೆಲ್ಲದಕ್ಕೂ ಯಶಸ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.