SOCIAL MEDIA

Newsletter

PARTNER SITES
Select Language Select State

ಬಿಗ್‌ ಬಾಸ್‌ ಮನೆಗೆ ಗುಳ್ಳೆ ನರಿ ಎಂಟ್ರಿ! ಆಟಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್‌

ಬಿಗ್‌ ಬಾಸ್ ಈ ಗುಳ್ಳೆನರಿಗೆ ವಿಶೇಷ ಜವಾಬ್ದಾರಿಯನ್ನು ನೀಡಿದ್ದು, ತನ್ನದೇ ತಂಡವನ್ನು ಸೋಲಿಸುವುದು ಅದರ ಉದ್ದೇಶ ಎನ್ನಲಾಗುತ್ತಿದೆ. ಈ ಸವಾಲಿನಲ್ಲಿ ಗುಳ್ಳೆನರಿ ಯಶಸ್ವಿಯಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಕುತೂಹಲ ಹೆಚ್ಚಿಸಿದೆ.

Written By Chetana Devarmani
Published: Nov 24, 2026, 14:58 IST | Updated: Nov 24, 2026, 15:02 IST
Join

ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಫಿನಾಲೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮನೆಯೊಳಗಿನ ಸ್ಪರ್ಧೆ ಮತ್ತಷ್ಟು ತೀವ್ರಗೊಂಡಿದೆ. ಪ್ರತಿದಿನವೂ ವಿಭಿನ್ನ ಟಾಸ್ಕ್‌ಗಳು ಹಾಗೂ ಹೊಸ ತಂತ್ರಗಳ ಮೂಲಕ ಸ್ಪರ್ಧಿಗಳ ಆಟಕ್ಕೆ ಬಿಗ್‌ಬಾಸ್ ಹೊಸ ಆಯಾಮ ನೀಡುತ್ತಿದ್ದಾರೆ. ಇದೀಗ ದೊಡ್ಮನೆಯಲ್ಲಿ ಗುಳ್ಳೆನರಿಯ ಪ್ರವೇಶದ ಸುಳಿವು ಸಿಕ್ಕಿದ್ದು, ಸ್ಪರ್ಧಿಗಳಲ್ಲಿ ಮಾತ್ರವಲ್ಲದೆ ವೀಕ್ಷಕರಲ್ಲಿಯೂ ಸಾಕಷ್ಟು ಕುತೂಹಲ ಮೂಡಿಸಿದೆ.

ಮನೆಯೊಳಗೆ ಗುಳ್ಳೆನರಿಗಳು ಎಂಟ್ರಿ ಕೊಟ್ಟಿವೆ ಎಂಬ ವಿಚಾರವನ್ನು ಕ್ಯಾಪ್ಟನ್ ಗಗನ್ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಆ ಗುಳ್ಳೆನರಿ ಈಗಾಗಲೇ ತನ್ನ ಆಟವನ್ನು ಆರಂಭಿಸಿದೆ ಎಂಬ ಸುಳಿವನ್ನೂ ನೀಡಿದ್ದಾರೆ. ಬಿಗ್‌ ಬಾಸ್ ಈ ಗುಳ್ಳೆನರಿಗೆ ವಿಶೇಷ ಜವಾಬ್ದಾರಿಯನ್ನು ನೀಡಿದ್ದು, ತನ್ನದೇ ತಂಡವನ್ನು ಸೋಲಿಸುವುದು ಅದರ ಉದ್ದೇಶ ಎನ್ನಲಾಗುತ್ತಿದೆ. ಈ ಸವಾಲಿನಲ್ಲಿ ಗುಳ್ಳೆನರಿ ಯಶಸ್ವಿಯಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಕುತೂಹಲ ಹೆಚ್ಚಿಸಿದೆ.

ದೊಡ್ಮನೆಯಲ್ಲಿರುವ ಗುಳ್ಳೆನರಿ ಯಾರು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಈ ಹಿಂದೆ ಕ್ಯಾಪ್ಟನ್ ಆಗುವ ಸ್ಪರ್ಧೆಯಲ್ಲಿ ಗಗನ್ ಮತ್ತು ಗಾನವಿ ಅವರು ಯಶಸ್ ಹೆಸರನ್ನು ಸೂಚಿಸಿದ್ದರು. ಹೀಗಾಗಿ ಮನೆಯೊಳಗಿನ ಈ ಹೊಸ ಆಟದ ಹಿಂದೆ ಯಶಸ್ ಇರಬಹುದೇ ಎಂಬ ಅನುಮಾನ ಕೆಲವರಲ್ಲಿ ಮೂಡಿದೆ. ಆದರೆ, ಯಶಸ್ ಅವರ ವರ್ತನೆಯಲ್ಲಿ ಅಂತಹ ಯಾವುದೇ ಸುಳಿವು ಕಾಣಿಸಿಲ್ಲ. ಹಾಗಾದರೆ ನಿಜವಾದ ಗುಳ್ಳೆನರಿ ಯಾರು ಎಂಬುದನ್ನು ತಿಳಿಯಲು ಮುಂದಿನ ಸಂಚಿಕೆಯವರೆಗೆ ಕಾಯಬೇಕಿದೆ.

ಬಿಗ್‌ ಬಾಸ್ ಕನ್ನಡ ಸೀಸನ್‌ನ ಫಿನಾಲೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಹೀಗಾಗಿ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಿಸುವ ಉದ್ದೇಶದಿಂದ ಬಿಗ್‌ಬಾಸ್ ಹೊಸ ಹೊಸ ತಂತ್ರಗಳನ್ನು ಪರಿಚಯಿಸುತ್ತಿದ್ದಾರೆ. ಒಬ್ಬ ಸ್ಪರ್ಧಿಯನ್ನು ಶಾಶ್ವತವಾಗಿ ನಾಮಿನೇಟ್ ಮಾಡುವಂತಹ ಸವಾಲುಗಳ ಬೆನ್ನಲ್ಲೇ ಇದೀಗ ಗುಳ್ಳೆನರಿಯ ಆಟವೂ ಆರಂಭವಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಸ್ಪರ್ಧಿಗಳ ಲೆಕ್ಕಾಚಾರವನ್ನು ಈ ಹೊಸ ಆಟ ಹೇಗೆ ಬದಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಕಳೆದ ವಾರದ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಇಬ್ಬರು ಸ್ಪರ್ಧಿಗಳ ಆಟವನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದರು. ಗಗನ್ ಮತ್ತು ಕಿರಣ್ ಶಾಸ್ತ್ರಿ ಅವರ ಆಟಕ್ಕೆ ಸುದೀಪ್ ಚಪ್ಪಾಳೆ ತಟ್ಟಿದ್ದರು. ಅದರಲ್ಲೂ ಕಿರಣ್ ಶಾಸ್ತ್ರಿಗೆ ಕಿಚ್ಚ ಸುದೀಪ್ ತಮ್ಮ ಜಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಈ ಉಡುಗೊರೆ ಪಡೆದ ಕಿರಣ್ ಶಾಸ್ತ್ರಿ ಸಂತಸಕ್ಕೆ ಪಾರವೇ ಇರಲಿಲ್ಲ.

ಮತ್ತೊಂದೆಡೆ, ಗಗನ್ ಕೂಡ ಕಿಚ್ಚನ ಮೆಚ್ಚುಗೆಗೆ ಖುಷಿಪಟ್ಟಿದ್ದರು. ಇದೀಗ ಅವರು ಮನೆಯ ಕ್ಯಾಪ್ಟನ್ ಆಗಿದ್ದು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ, ಫಿನಾಲೆ ಹತ್ತಿರವಾಗುತ್ತಿದ್ದಂತೆ ದೊಡ್ಮನೆಯ ಆಟದಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಿದ್ದು, ಗುಳ್ಳೆನರಿಯ ಅಸಲಿ ಮುಖವಾಡ ಯಾವಾಗ ಬಯಲಾಗಲಿದೆ ಎಂಬುದೇ ಸದ್ಯದ ದೊಡ್ಡ ಕುತೂಹಲ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES