• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /"ನಿನೇನ್ ಕಿ... ಬಂದಿದಿಯಾ..." : ಗಂಡಸ್ತನದ ಬಗ್ಗೆ ಮಾತಾಡಿದ್ದ ಮಂಜನಿಗೆ ಸುದೀಪ್ ಖಡಕ್ ಕೌಂಟರ್‌

"ನಿನೇನ್ ಕಿ... ಬಂದಿದಿಯಾ..." : ಗಂಡಸ್ತನದ ಬಗ್ಗೆ ಮಾತಾಡಿದ್ದ ಮಂಜನಿಗೆ ಸುದೀಪ್ ಖಡಕ್ ಕೌಂಟರ್‌

ಬಿಗ್ ಬಾಸ್ ಕನ್ನಡ 'ವಾರದ ಕಥೆ ಕಿಚ್ಚನ ಜೊತೆ' ಪ್ರೋಮೋ ಬಿಡುಗಡೆಯಾಗಿದ್ದು, ಕಿಚ್ಚನ ಆರ್ಭಟಕ್ಕೆ ಸಾಕ್ಷಿಯಾಗಿದೆ. ಸ್ಪರ್ಧಿ ಜಗದೀಶ್ ಅವರ ವಿರುದ್ಧ ಕೀಳು ಮತ್ತು ಅವಹೇಳನಕಾರಿ ಮಾತುಗಳನ್ನಾಡಿದ 'ಮಹಾಕವಿ' ಮಂಜನಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.. ಇದರ ಬೆನ್ನಲ್ಲೇ ಮಂಜನಿಗೆ ಯಾವ ಶಿಕ್ಷೆ ಸಿಗಲಿದೆ ಹಾಗೂ ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು..? ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಿದೆ.

Written ByKrishna NK
Published: Nov 21, 2026, 15:37 IST|Updated: Nov 21, 2026, 15:38 IST
joinshare
"ನಿನೇನ್ ಕಿ... ಬಂದಿದಿಯಾ..." : ಗಂಡಸ್ತನದ ಬಗ್ಗೆ ಮಾತಾಡಿದ್ದ ಮಂಜನಿಗೆ ಸುದೀಪ್ ಖಡಕ್ ಕೌಂಟರ್‌
Image Credit: Bigg Boss Kannada 13

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: 'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada 13) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. ವಾರಾಂತ್ಯದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಸ್ಪರ್ಧಿ ಜಗದೀಶ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಮಹಾಕವಿ ಮಂಜಗೆ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ..

ಹೌದು.. ವಾರದ ಅವಧಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳು ಮತ್ತು ಸ್ಪರ್ಧಿಗಳ ತಪ್ಪು ಒಪ್ಪುಗಳನ್ನು ಈ ಪಂಚಾಯಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಈ ವಾರ ಅದರಲ್ಲೂ ಜಗದೀಶ್ ಅವರ ಬಗ್ಗೆ ಮಂಜ ಬಳಸಿದ ಅವಹೇಳನಕಾರಿ ಹೇಳಿಕೆಗಳನ್ನು ಕಿಚ್ಚ ಸುದೀಪ್ ಅವರ ಪಿತ್ತ ನೆತ್ತಿಗೇರಿಸಿವೆ. ಮನೆಯೊಳಗೆ ಸ್ಪರ್ಧಿಗಳ ನಡುವೆ ನಡೆಯುವ ವೈಯಕ್ತಿಕ ನಿಂದನೆ ಮತ್ತು ವ್ಯಕ್ತಿತ್ವದ ಮೇಲಿನ ಹೇಳಿಕೆಗಳ ಬಗಗೆ ಸುದೀಪ್ ಖಾರವಾಗಿಯೇ ಪ್ರಶ್ನಿಸಿದ್ದಾರೆ.  

"ಗಂಡಸರ ತರ ಮಾತಾಡೋದು ಅಂದ್ರೆ ಹೇಗೆ ಸರ್?" ಮಂಜನಿಗೆ ಕಿಚ್ಚನ ಪ್ರಶ್ನೆ
ಇನ್ನು ಇದೇ ವೇಳೆ ಸ್ಪರ್ಧಿ ಮಮ್ಮಿ ಜಗ್ಗು ಮಂಜ ತಮಗೆ "ಗಂಡಸ್ತದ ಬಗ್ಗೆ ಮಾತಾಡ್ತಾರೆ ಸರ್" ಎಂದು ಪ್ರಸ್ತಾಪಿಸಿದ್ದಾರೆ. ಇದಕ್ಕೆ ತಕ್ಷಣ ಖಾರವಾಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, "ಗಂಡಸರ ತರ ಮಾತಾಡೋದು ಅಂದ್ರೆ ಹೇಗೆ ಸರ್? ನೀವು ಹೊರಗಡೆ ಬರೋಕು ಮುಂಚೆ ಮಾತಾಡ್ರಿ ಅಲ್ವಾ ಹಾಗಾ?" ಎಂದು ನೇರವಾಗಿ ಮಂಜನನ್ನು ತಿವಿದಿದ್ದಾರೆ. ಜಗದೀಶ್ ಅವರು ನಿಮ್ಮ ಬಗ್ಗೆ ಮಾತನಾಡದಿದ್ದರೂ, ನೀವು ಹೋಗಿ ಧ್ವನಿ ಎತ್ತಿದ್ದೀರಾ ಎಂಬ ಅಂಶವನ್ನೂ ಸುದೀಪ್ ಎತ್ತಿ ತೋರಿದರು.

ಮುಸುರೆ ತಿಕ್ಕೊಂಡಿದ್ದೆ.. ಮಂಜನ ಮಾತಿಗೆ ಕಿಚ್ಚ ಗರಂ
ಇದೇ ವೇಳೆ ಮಂಜ ಆಡಿದ ಮತ್ತೊಂದು ಮಾತು ಕಿಚ್ಚ ಸುದೀಪ್ ಅವರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ. "ಒಂದು ಸಿನಿಮಾ ಮಾಡಿ ಒಳಗೆ ಬಂದಿರೋದು ನೀನು... ಮುಸುರೆ ತಿಕ್ಕಿಕ್ಕೊಂಡಿದ್ದೆ" ಎಂಬ ಮಂಜನ ಅವಹೇಳನಕಾರಿ ಮಾತಿಗೆ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಗದೀಶ್ ಅವರ ಸಾಧನೆ ಮತ್ತು ಹಿನ್ನೆಲೆಯ ಬಗ್ಗೆ ಕೀಳಾಗಿ ಮಾತನಾಡಿದ ಮಂಜನ ಧೋರಣೆಯನ್ನು ವಿರೋಧಿಸಿದ ಸುದೀಪ್, ಸ್ಪರ್ಧಿಗಳ ಗೌರವ ಮತ್ತು ಘನತೆಯನ್ನು ಕಾಪಾಡುವ ಕುರಿತು ಎಚ್ಚರಿಕೆ ನೀಡಿದ್ದಾರೆ.

"ನಿನೇನ್ ಕಿತ್ಕೊಂಡು ಬಂದಿದಿಯಾ ಒಳಗೆ ಅಂದ್ರೆ..." – ಸುದೀಪ್ ಟಾಂಗ್
ಮಂಜನ ಮಾತುಗಳನ್ನೇ ತಿರುಗಿಸಿ ಪ್ರಶ್ನಿಸಿದ ಕಿಚ್ಚ ಸುದೀಪ್, "ಅದೇ ಪ್ರಶ್ನೆನಾ ನಿಮ್ಮಲ್ಲಿ ಯಾರಾದ್ರೂ ನಿಮ್ಮನ್ನ ಕೇಳಿದ್ರೆ... ನಿನೇನ್ ಕಿತ್ಕೊಂಡು ಬಂದಿದಿಯಾ ಒಳಗೆ ಅಂದ್ರೆ ಹೇಗಿರುತ್ತೆ?" ಎಂದು ಖಡಕ್ ಟಾಂಗ್ ನೀಡಿದ್ದಾರೆ. ಇತರರ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ತಮ್ಮ ನಡೆ ಮತ್ತು ಮಾತುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸುದೀಪ್ ಚಾಟಿ ಬೀಸಿದ್ದಾರೆ.

ಇಂದಿನ ಸಂಚಿಕೆಯತ್ತ ಎಲ್ಲರ ಚಿತ್ತ
ಒಟ್ಟಾರೆಯಾಗಿ ಬಿಡುಗಡೆಯಾಗಿರುವ ಪ್ರೋಮೋ ಬಿಗ್ ಬಾಸ್ ಮನೆಯ ಕಾವು ಹೆಚ್ಚಿಸಿದೆ. ಕಿಚ್ಚ ಸುದೀಪ್ ಅವರ ಖಡಕ್ ಕ್ಲಾಸ್ ನಂತರ ಮಂಜನಿಗೆ ಸಿಗುವ ಶಿಕ್ಷೆ ಏನು? ಈ ವಾರ ಮನೆಯಿಂದ ಹೊರಗೆ ಬರುವ ಸ್ಪರ್ಧಿ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಲು ವೀಕ್ಷಕರು ಇಂದಿನ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯನ್ನು ಎದುರು ನೋಡುತ್ತಿದ್ದಾರೆ.

Add Zee News as a Preferred Source
TAGS:
Bigg Boss Kannada Season 13