• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /Bigg Boss Kannada 13 Elimination: ಬಿಗ್‌ ಬಾಸ್‌ ನಲ್ಲಿ ಒಂದೇ ದಿನ 4 ಜನ ಔಟ್! ಕಾಮನ್‌ ಮ್ಯಾನ್‌ಗಳ ವರ್ತನೆಗೆ ಕಿಚ್ಚ ಸುದೀಪ್‌ ಗರಂ!!

Bigg Boss Kannada 13 Elimination: ಬಿಗ್‌ ಬಾಸ್‌ ನಲ್ಲಿ ಒಂದೇ ದಿನ 4 ಜನ ಔಟ್! ಕಾಮನ್‌ ಮ್ಯಾನ್‌ಗಳ ವರ್ತನೆಗೆ ಕಿಚ್ಚ ಸುದೀಪ್‌ ಗರಂ!!

Bigg Boss Kannada 13 Elimination:“ನಾಲ್ಕು ಜನಕ್ಕಾಗಿ ಕೋಟ್ಯಾಂತರ ವೀಕ್ಷಕರನ್ನು ಕಳೆದುಕೊಳ್ಳಲು ಆಗಲ್ಲ” ಎಂದುಲಿ ಸುದೀಪ್‌ ಅವರು ಮಾತನಾಡಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.

Reported ByChetana DevarmaniEdited ByChetana Devarmani
Published: Sep 19, 2026, 05:53 PM IST|Updated: Sep 19, 2026, 05:56 PM IST
joinshare
Bigg Boss Kannada 13 Elimination: ಬಿಗ್‌ ಬಾಸ್‌ ನಲ್ಲಿ ಒಂದೇ ದಿನ 4 ಜನ ಔಟ್! ಕಾಮನ್‌ ಮ್ಯಾನ್‌ಗಳ ವರ್ತನೆಗೆ ಕಿಚ್ಚ ಸುದೀಪ್‌ ಗರಂ!!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಮನೆಯೊಳಗಿನ ಜಗಳ, ಗಲಾಟೆ ಮತ್ತು ವಾಗ್ವಾದಗಳು ಹೆಚ್ಚಾಗಿವೆ. ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದೀಗ ಮನೆಯಲ್ಲಿರುವ ನಾಲ್ವರು ಕಾಮನ್‌ ಸ್ಪರ್ಧಿಗಳ ವರ್ತನೆಯೇ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ನಡುವೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ನೀಡಿರುವ ಹೇಳಿಕೆಯ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಮಾಡ್ರನ್‌ ಮಹಾಕವಿ ಮಂಜ ಅವರ ಮಾತಿನ ಶೈಲಿ ಹಾಗೂ ಟಾಂಟ್‌ಗಳು ಕೆಲ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿವೆ. ಅದರಲ್ಲೂ ಸ್ಪರ್ಧಿ ಅವಿನಾಶ್‌ ಅವರು ಮಂಜ ಅವರ ನಿರಂತರ ಟಾಂಟ್‌ಗಳಿಂದ ಬೇಸರಗೊಂಡು ತಾಳ್ಮೆ ಕಳೆದುಕೊಂಡಿರುವುದು ಪ್ರೋಮೋ ಹಾಗೂ ಸಂಚಿಕೆಗಳಲ್ಲಿ ಗಮನ ಸೆಳೆದಿದೆ.

ಮಂಜ ಅವರ ಮಾತುಗಳಿಂದ ಅಸಮಾಧಾನಗೊಂಡ ಅವಿನಾಶ್‌, ತೀವ್ರ ಆಕ್ರೋಶ ವ್ಯಕ್ತಪಡಿಸಿ ಮನೆಯಿಂದ ಹೊರಹೋಗುವ ಮಾತನ್ನೂ ಆಡಿದ್ದಾರೆ. “ಇಂಥ ದರಿದ್ರದವರ ಜೊತೆಗೆ ನಾನು ಇರಲ್ಲ” ಎಂದು ಹೇಳಿರುವ ಅವರು, ತಮ್ಮ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರಹೋಗುವುದಾಗಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಮನೆಯೊಳಗಿನ ವಾತಾವರಣ ಮತ್ತಷ್ಟು ಬಿಸಿಯಾಗಲು ಕಾರಣವಾಗಿದೆ.

ಇನ್ನು ಮಂಜ ಅವರ ಪದಬಳಕೆ ಮತ್ತು ವೈಯಕ್ತಿಕ ಟೀಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆಟದಲ್ಲಿ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ, ವಾದ-ವಿವಾದ ಸಹಜವಾದರೂ ವೈಯಕ್ತಿಕವಾಗಿ ಟೀಕಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಕೆಲ ವೀಕ್ಷಕರು ಎತ್ತಿದ್ದಾರೆ.

ಮತ್ತೊಂದೆಡೆ, ಬಿಗ್‌ ಬಾಸ್‌ ಮನೆಯಲ್ಲಿರುವ ಕಾಮನ್‌ ಸ್ಪರ್ಧಿಗಳ ವರ್ತನೆಯ ಬಗ್ಗೆ ಕೆಲವು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಟದ ಭಾಗವಾಗಿ ನಡೆಯುವ ಗಲಾಟೆ ಒಂದು ಹಂತದವರೆಗೆ ಸರಿ. ಆದರೆ ಸಹ ಸ್ಪರ್ಧಿಗಳಿಗೆ ಗೌರವ ನೀಡದೆ ಮಾತನಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ನಡುವೆ ವಾರಾಂತ್ಯದ ಪಂಚಾಯ್ತಿಯ ಪ್ರೋಮೋ ಮತ್ತಷ್ಟು ಕುತೂಹಲ ಮೂಡಿಸಿದೆ. ನಾಲ್ವರು ಕಾಮನ್‌ ಮ್ಯಾನ್‌ ಸ್ಪರ್ಧಿಗಳ ವರ್ತನೆ ಕುರಿತು ಕಿಚ್ಚ ಸುದೀಪ್‌ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ಪ್ರೋಮೋದಲ್ಲಿ ಕಾಣಿಸಿಕೊಂಡಿದೆ. “ನಾಲ್ಕು ಜನಕ್ಕಾಗಿ ಕೋಟ್ಯಾಂತರ ವೀಕ್ಷಕರನ್ನು ಕಳೆದುಕೊಳ್ಳಲು ಆಗಲ್ಲ” ಎಂದುಲಿ ಸುದೀಪ್‌ ಅವರು ಮಾತನಾಡಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.

ಈ ಹೇಳಿಕೆಯ ಮೂಲಕ ಮನೆಯೊಳಗಿನ ಕೆಲ ಸ್ಪರ್ಧಿಗಳ ವರ್ತನೆಗೆ ಸುದೀಪ್‌ ಅವರು ತರಾಟೆ ತೆಗೆದುಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಇದೀಗ ಮೂಡಿದೆ. ವಿಶೇಷವಾಗಿ ಅವಿನಾಶ್‌ ಮತ್ತು ಮಂಜ ನಡುವಿನ ಮಾತಿನ ಸಂಘರ್ಷ, ಕಾಮನ್‌ ಸ್ಪರ್ಧಿಗಳ ನಡುವಿನ ಗಲಾಟೆ ಸೇರಿದಂತೆ ಈ ವಾರದ ಪ್ರಮುಖ ಘಟನೆಗಳ ಬಗ್ಗೆ ವಾರಾಂತ್ಯದ ಪಂಚಾಯ್ತಿಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಬಿಗ್‌ ಬಾಸ್‌ ಮನೆಯೊಳಗಿನ ಘಟನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರ ಪ್ರತಿಕ್ರಿಯೆ ಕೂಡ ಹೆಚ್ಚಾಗುತ್ತಿದೆ. ಕೆಲವರು ಅವಿನಾಶ್‌ ಅವರ ಅಸಮಾಧಾನವನ್ನು ಬೆಂಬಲಿಸಿದರೆ, ಇನ್ನು ಕೆಲವರು ಆಟದ ಭಾಗವಾಗಿ ಇಂತಹ ಸಂಘರ್ಷಗಳು ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಎರಡನೇ ವಾರದಲ್ಲೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದೀಗ ಕಿಚ್ಚ ಸುದೀಪ್‌ ಅವರ ಪಂಚಾಯ್ತಿಯತ್ತ ಎಲ್ಲರ ಗಮನ ನೆಟ್ಟಿದೆ. ಪ್ರೋಮೋದಲ್ಲಿ ಕೇಳಿಬಂದಿರುವ “ಕೋಟ್ಯಾಂತರ ವೀಕ್ಷಕರನ್ನು ಕಳೆದುಕೊಳ್ಳಲು ಆಗಲ್ಲ” ಎಂಬ ಮಾತಿನ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಗಳಿಗೆ ಯಾವ ರೀತಿಯ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ವಾರ ನಾಲಿಗೆ ಹರಿಬಿಟ್ಟ ಸ್ಪರ್ಧಿಗಳಿಗೆ ಪ್ರ್ಯಾಂಕ್‌ ಎಲಿಮಿನೇಷನ್‌ ಶಾಖ್‌ ಕೂಡ ಎದುರಾಗುವ ಸಾಧ್ಯತೆಯಿದೆ. 

 

 

 

 

 

 

View this post on Instagram

 

 

 

 

 

 

 

 

 

 

 

A post shared by Colors Kannada Official (@colorskannadaofficial)

 

Add Zee News as a Preferred Source
TAGS:
Bigg Boss Kannada
Bigg Boss Kannada Season 13