SOCIAL MEDIA

Newsletter

PARTNER SITES
Select Language Select State

ಬೆಡ್‌ ರೂಮ್‌ನಲ್ಲಿ ನಡೆದ ಆ ಘಟನೆ ಬಗ್ಗೆ ಬಿಚ್ಚಿಟ್ಟ ನಟ ಸಲ್ಮಾನ್‌ ಖಾನ್‌

ಸಲ್ಮಾನ್ ಖಾನ್ ಅವರ ಹಳೆಯ ಮಲಗುವ ಕೋಣೆಯಲ್ಲಿ ನಡೆದಿತ್ತೆನ್ನಲಾದ ವಿಚಿತ್ರ ಅನುಭವವೊಂದು ಗಮನ ಸೆಳೆದಿದೆ.

Written By Chetana Devarmani
Published: Oct 17, 2026, 04:36 PM IST | Updated: Oct 17, 2026, 04:37 PM IST
Join

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಸಿನಿಮಾ, ವೈಯಕ್ತಿಕ ಜೀವನ ಹಾಗೂ ಕುಟುಂಬದ ವಿಚಾರಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಇದೀಗ ಸಲ್ಮಾನ್ ಖಾನ್ ಅವರ ಹಳೆಯ ಮಲಗುವ ಕೋಣೆಯಲ್ಲಿ ನಡೆದಿತ್ತೆನ್ನಲಾದ ವಿಚಿತ್ರ ಅನುಭವವೊಂದು ಗಮನ ಸೆಳೆದಿದೆ. ತಮ್ಮ ಕೋಣೆಯಲ್ಲಿ ಯಾರೂ ಕಾಣಿಸದಿದ್ದರೂ ಮತ್ತೊಂದು ಅಸ್ತಿತ್ವ ಇರುವಂತೆ ಭಾಸವಾಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದರೆನ್ನಲಾದ ವಿಚಾರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನಲ್ಲಿ ಸಲ್ಮಾನ್ ಖಾನ್ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ದೊಡ್ಡ ನಟನಾಗಿದ್ದರೂ ಕುಟುಂಬದೊಂದಿಗೆ ಸರಳ ಜೀವನ ನಡೆಸುವ ಸಲ್ಮಾನ್ ಅವರ ಮನೆಯ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ ಇದೆ. ಈ ನಡುವೆ ಅವರ ಬೆಡ್‌ ರೂಮ್‌ ಗೆ ಸಂಬಂಧಿಸಿದ ಅನುಭವದ ಕುರಿತು ಹಕಲವು ವಿಚಾರ ಚರ್ಚೆಯಾಗುತ್ತಿದೆ.

ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ತಮ್ಮ ಬೆಡ್‌ ರೂಮ್‌ನಲ್ಲಿನ ಘಟನೆಗಳ ಕುರಿತು ಸಲ್ಮಾನ್ ಖಾನ್‌ ಮಾತನಾಡಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್ ಅವರು ಸಲ್ಮಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಾಗ, ಅವರ ಕೋಣೆಯ ಸರಳತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆ ಕೋಣೆಯಲ್ಲಿ ಒಂದು ಹಾಸಿಗೆ ಮತ್ತು ಕಪಾಟು ಮಾತ್ರ ಇದ್ದವು ಎಂದು ಹೇಳಲಾಗಿದ್ದು, ಅಷ್ಟು ದೊಡ್ಡ ತಾರೆಯ ಕೋಣೆ ಇಷ್ಟು ಸರಳವಾಗಿರುವುದು ಕರಣ್ ಅವರಿಗೆ ಅಚ್ಚರಿ ಮೂಡಿಸಿತ್ತಂತೆ. ಆ ಸಮಯದಲ್ಲಿ ಸಲ್ಮಾನ್ ತಮ್ಮ ಪೋಷಕರು ಹಾಗೂ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಅವರೊಂದಿಗೆ ವಾಸಿಸುತ್ತಿದ್ದರು. ಇದೇ ವೇಳೆ ತಮ್ಮ ಕೋಣೆಯಲ್ಲಿ ಎದುರಿಸಿದ ವಿಚಿತ್ರ ಅನುಭವಗಳ ಕುರಿತು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಅವರ ಅನುಭವದ ಪ್ರಕಾರ, ಕೋಣೆಯಲ್ಲಿ ಒಬ್ಬರೇ ಇದ್ದಾಗಲೂ ತಮ್ಮೊಂದಿಗೆ ಮತ್ತೊಂದು ಅಗೋಚರ ಅಸ್ತಿತ್ವ ಇರುವಂತೆ ಅನಿಸುತ್ತಿತ್ತಂತೆ. ಅದನ್ನು ಕಣ್ಣಾರೆ ನೋಡದಿದ್ದರೂ ಅದರ ಇರುವಿಕೆಯನ್ನು ಅನುಭವಿಸುತ್ತಿದ್ದೆ. ಕೆಲವೊಮ್ಮೆ ವಿಚಿತ್ರ ಶಬ್ದಗಳೂ ಕೇಳಿಸುತ್ತಿದ್ದವು ಎಂದು ನಟ ಸಲ್ಮಾನ್‌ ಖಾನ್‌ ಆ ಘಟನೆ ಕುರಿತು ವಿವರಿಸಿದ್ದಾರೆ ಎನ್ನಲಾಗಿದೆ.

ತಾವು ಬೆಡ್‌ ರೂಮ್‌ ನಿಂದ ಹೊರಗೆ ಹೋದಾಗ ದೀಪಗಳು ತಾವಾಗಿಯೇ ಉರಿಯುತ್ತಿದ್ದವು. ಮತ್ ಕಪಾಟುಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತಿದ್ದವು ಹಾಗೂ ಮ್ಯೂಸಿಕ್ ಸಿಸ್ಟಮ್ ಕೂಡ ತನ್ನಷ್ಟಕ್ಕೆ ತಾನೇ ಚಾಲನೆಯಾಗುತ್ತಿತ್ತು ಎಂಬುದು ಈ ಅನುಭವಕ್ಕೆ ಸಂಬಂಧಿಸಿದಂತೆ ಹೇಳಲಾಗುತ್ತಿರುವ ಪ್ರಮುಖ ಸಂಗತಿ. ತಾವು ಬಾತ್‌ರೂಮ್‌ನಲ್ಲಿದ್ದಾಗ ಹೊರಗಡೆ ಯಾರೋ ಕಪಾಟುಗಳನ್ನು ತೆರೆಯುತ್ತಿರುವಂತೆ ಶಬ್ದ ಕೇಳಿಸುತ್ತಿತ್ತು ಎಂದು ಸಲ್ಮಾನ್ ಹೇಳಿಕೊಂಡಿದ್ದರೆ ಎನ್ನಲಾಗಿದೆ.  
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES