SOCIAL MEDIA

Newsletter

PARTNER SITES
Select Language Select State

ತಿರುಪತಿ ತಿಮ್ಮಪ್ಪ ಅವನೇ ಬಿಗ್‌ ಬಾಸ್‌ ವಿನ್ನರ್‌ ಆಗ್ಲಪ್ಪಾ..!! ಮೊಣಕಾಲಲ್ಲಿ ಮೆಟ್ಟಿಲೇರಿದ ನಟಿ

ಕಿರುತೆರೆ ನಟಿ ಪ್ರಿಯಾಂಕಾ ಅವರು ತಮ್ಮ ಭಾವಿ ಪತ್ನಿ, ಬಿಗ್‌ ಬಾಸ್‌ ಸ್ಪರ್ಧಿಯೊಬ್ಬರ ಗೆಲುವಿಗಾಗಿ ತಿರುಮಲದಲ್ಲಿ ವಿಶೇಷ ಹರಕೆ ಸಲ್ಲಿಸಿ ಸುದ್ದಿಯಾಗಿದ್ದಾರೆ. ಅಲಿಪಿರಿ ಮೆಟ್ಟಿಲುಗಳನ್ನು ಮೊಣಕಾಲಿನ ಮೇಲೆ ಹತ್ತಿ ಭಕ್ತಿ ಮೆರೆದಿದ್ದಾರೆ. ಈ ಭಾವನಾತ್ಮಕ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಹಾಗಿದ್ರೆ ಪ್ರಿಯಾಂಕ್‌ ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿದ್ದು ಯಾರಿಗಾಗಿ..? ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ..

Written By Krishna NK
Published: Nov 26, 2026, 21:31 IST | Updated: Nov 26, 2026, 21:37 IST
Image Credit: Priyanka Jain
Join

Priyanka Jain Tirupati video : ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ ಅಂತಿಮ ಘಟ್ಟದತ್ತ ಸಾಗುತ್ತಿರುವ ನಡುವೆಯೇ, ಕಿರುತೆರೆ ನಟಿ ಪ್ರಿಯಾಂಕಾ ಜೈನ್ ಅವರು ತಮ್ಮ ಭಾವಿ ಪತಿ ಹಾಗೂ ಸ್ಪರ್ಧಿ ಶಿವಕುಮಾರ್ ಅವರ ಗೆಲುವಿಗಾಗಿ ವಿಶೇಷ ಹರಕೆ ಸಲ್ಲಿಸಿ ಸುದ್ದಿಯಾಗಿದ್ದಾರೆ. ಮೊಣಕಾಲಿನ ಮೇಲೆ ತಿರುಮಲ ಮೆಟ್ಟಿಲುಗಳನ್ನು ಹತ್ತಿರುವ ಭಾವನಾತ್ಮಕ ವಿಡಿಯೋ ನೆಟ್ಟಿಗರ ಗಮನ ಸೆಳೆದರು.

ʻಬಿಗ್ ಬಾಸ್ ತೆಲುಗು ಸೀಸನ್ 10ʼರ ಗ್ರ್ಯಾಂಡ್ ಫಿನಾಲೆ ಕೆಲವೇ ದಿನಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ದಿನೇದಿನೇ ಹೆಚ್ಚುತ್ತಿದೆ. ಮನೆಯೊಳಗಿರುವ ಸ್ಪರ್ಧಿಗಳ ಪರವಾಗಿ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಪಿಆರ್ ತಂಡಗಳು ಸಾಮಾಜಿಕ ಜಾಲತಾಣಗಳಲ್ಲಿ ಮತಯಾಚನೆ ಮತ್ತು ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿವೆ. ಈ ರಂಗೇರಿದ ವಾತಾವರಣದ ಮಧ್ಯೆಯೇ ಪ್ರಿಯಾಂಕಾ ಜೈನ್ ಅವರ ಭಕ್ತಿಪೂರ್ವಕ ನಡೆಯು ವಿಶೇಷ ಚರ್ಚೆಗೆ ಗ್ರಾಸವಾಗಿದೆ.

ಅಲಿಪಿರಿ ಮೆಟ್ಟಿಲುಗಳಲ್ಲಿ ಭಕ್ತಿ ಸಮರ್ಪಣೆ
ಶಿವಕುಮಾರ್ ಅವರು ʻಬಿಗ್ ಬಾಸ್ʼ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಬೇಕು ಮತ್ತು ದೈವಾನುಗ್ರಹ ಸದಾ ಅವರ ಮೇಲಿರಬೇಕು ಎಂದು ಬೇಡಿಕೊಂಡು ಪ್ರಿಯಾಂಕಾ ಜೈನ್ ತಿರುಮಲಕ್ಕೆ ತೆರಳಿದ್ದರು. ಅಲಿಪಿರಿ ಮಾರ್ಗದ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ ಅವರು, ಮಾರ್ಗಮಧ್ಯೆ ಮೊಣಕಾಲಿನ ಮೇಲೆ ಮೆಟ್ಟಿಲುಗಳನ್ನು ಏರುವ ಮೂಲಕ ತಮ್ಮ ಪ್ರೀತಿ, ಕಾಳಜಿ ಮತ್ತು ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕ್ಷಣದ ವಿಡಿಯೋವನ್ನು ಪ್ರಿಯಾಂಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಷಣಾರ್ಧದಲ್ಲೇ ವೈರಲ್ ಆಗಿದೆ.

ಹಿಂದಿನ ಸೀಸನ್ ನೆನಪಿಸಿದ ನೆಟ್ಟಿಗರು
ಕಷ್ಟದ ಸಂದರ್ಭಗಳಲ್ಲಿ ಪರಸ್ಪರ ಬೆನ್ನೆಲುಬಾಗಿ ನಿಲ್ಲುವ ಈ ಜೋಡಿಯ ಬಾಂಧವ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಪ್ರಿಯಾಂಕಾ ಜೈನ್ ಅವರು ʻಬಿಗ್ ಬಾಸ್ʼ ಸ್ಪರ್ಧಿಯಾಗಿ ಮನೆಯೊಳಗೆ ಇದ್ದಾಗ, ಶಿವಕುಮಾರ್ ಕೂಡ ಇದೇ ರೀತಿ ತಿರುಮಲಕ್ಕೆ ಭೇಟಿ ನೀಡಿ ಅವರ ಗೆಲುವಿಗಾಗಿ ಪ್ರಾರ್ಥಿಸಿದ್ದರು ಎಂಬ ಹಳೆಯ ವಿಚಾರವನ್ನು ನೆಟ್ಟಿಗರು ಈಗ ಸಾಮಾಜಿಕ ಜಾಲತಾಣಗಳಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಪರಸ್ಪರ ಹರಕೆ ಸಲ್ಲಿಸುವ ಈ ಜೋಡಿಯ ನಡೆಯನ್ನು ಹಲವರು ಶ್ಲಾಘಿಸಿದ್ದಾರೆ.

ʻಮೌನರಾಗಂʼನಿಂದ ʻಬಿಗ್ ಬಾಸ್ʼವರೆಗೆ
ʻಮೌನರಾಗಂʼ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ವೀಕ್ಷಕರಿಗೆ ಹತ್ತಿರವಾದ ಪ್ರಿಯಾಂಕಾ ಜೈನ್ ಮತ್ತು ಶಿವಕುಮಾರ್, ಚಿತ್ರೀಕರಣದ ಸೆಟ್‌ನಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ವಿವಾಹಕ್ಕೂ ಮುನ್ನವೇ ಹಬ್ಬಹರಿದಿನಗಳು, ವಿಶೇಷ ಪೂಜೆಗಳು ಹಾಗೂ ಸಂಭ್ರಮಗಳನ್ನು ಒಟ್ಟಿಗೆ ಆಚರಿಸುತ್ತಾ ಸದಾ ಸುದ್ದಿಯಲ್ಲಿರುವ ಈ ಜೋಡಿ, ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಕಳೆದ ಸೀಸನ್‌ನಲ್ಲಿ ಫೈನಲ್ ಹಂತದವರೆಗೆ ತಲುಪಿ ಗಮನ ಸೆಳೆದಿದ್ದ ಪ್ರಿಯಾಂಕಾ, ಈ ಬಾರಿ ಹೊರಗಿನಿಂದ ಶಿವಕುಮಾರ್ ಅವರಿಗೆ ಶಕ್ತಿ ತುಂಬುತ್ತಿದ್ದಾರೆ. ʻಸೀಸನ್ 10ʼರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಕಾಲಿಟ್ಟ ಶಿವಕುಮಾರ್ ಪ್ರಸ್ತುತ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

ʻಬಿಗ್ ಬಾಸ್ʼ ಇತಿಹಾಸದಲ್ಲಿ ಮೊದಲ ನಿಶ್ಚಿತಾರ್ಥ
ಇತ್ತೀಚೆಗೆ ನಡೆದ ಫ್ಯಾಮಿಲಿ ವೀಕ್ ವೇಳೆ ʻಬಿಗ್ ಬಾಸ್ʼ ಮನೆಯೊಳಗೆ ಪ್ರವೇಶಿಸಿದ್ದ ಪ್ರಿಯಾಂಕಾ ಜೈನ್, ಸಹ ಸ್ಪರ್ಧಿಗಳ ಸಮ್ಮುಖದಲ್ಲೇ ಶಿವಕುಮಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತೆಲುಗು ʻಬಿಗ್ ಬಾಸ್ʼ ಇತಿಹಾಸದಲ್ಲೇ ರಿಯಾಲಿಟಿ ಶೋ ಮನೆಯೊಳಗೆ ನಿಶ್ಚಿತಾರ್ಥ ಮಾಡಿಕೊಂಡ ಮೊದಲ ಜೋಡಿ ಎಂಬ ವಿಶೇಷ ದಾಖಲೆಯನ್ನೂ ಇಬ್ಬರೂ ಬರೆದಿದ್ದಾರೆ. ಇದೀಗ ಪ್ರಿಯಾಂಕಾ ಸಲ್ಲಿಸಿರುವ ತಿರುಮಲದ ಹರಕೆ ಶಿವಕುಮಾರ್ ಅವರ ಕೈಗೆ ʻಬಿಗ್ ಬಾಸ್ʼ ಟ್ರೋಫಿಯನ್ನು ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES