• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ನಾನಾ ಪಾಟೇಕರ್‌ ಹೆಂಡತಿ ಯಾರು.. ಛಾವಾ ಸಿನಿಮಾದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ

ನಾನಾ ಪಾಟೇಕರ್‌ ಹೆಂಡತಿ ಯಾರು.. ಛಾವಾ ಸಿನಿಮಾದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ

ನಾನಾ ಪಾಟೇಕರ್ ಅವರು ಮಾಜಿ ಬ್ಯಾಂಕ್ ಅಧಿಕಾರಿ, ನಟಿ ಮತ್ತು ರಂಗಭೂಮಿ ವೃತ್ತಿಪರರಾದ ನೀಲಕಾಂತಿ ಪಾಟೇಕರ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ 1978 ರಲ್ಲಿ..

Written ByBhimappa
Published: Oct 08, 2026, 03:42 PM IST|Updated: Oct 08, 2026, 03:58 PM IST
joinshare
ನಾನಾ ಪಾಟೇಕರ್‌ ಹೆಂಡತಿ ಯಾರು.. ಛಾವಾ ಸಿನಿಮಾದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ
Image Credit: Nana Patekar wife

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

2

ಹಣ್ಣು ಮಾತ್ರವಲ್ಲ, ಎಲೆಗಳೂ ಸೂಪರ್! ಸೀತಾಫಲದ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳೇನು?

3

ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

4

ಈ 5 ಪ್ಲೇಯರ್ಸ್‌ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್..‌ ರಜತ್‌ ಪಾಟೀದಾರ್‌ ಸೇರಿ ಈ ನಾಲ್ವರು..

5

ವಿಬಿಜಿ-ರಾಮ್-ಜಿ ಯೋಜನೆಯಡಿ ಅಳತೆಗೆ ತಕ್ಕಂತೆ ಕೂಲಿ ಪಡೆಯಿರಿ! ಡಿಐಇಸಿ ವೀರಭದ್ರಪ್ಪ ಸಜ್ಜನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Nana Patekar wife Neelakanti Patekar: ಭಾರತ ಚಿತ್ರರಂಗದ ಬಹುಮುಖ ಪ್ರತಿಭೆ, ಹಿರಿಯ ನಟ ನಾನಾ ಪಾಟೇಕರ್‌ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನರಾಗಿದ್ದಾರೆ. ನಾನಾ ಪಾಟೇಕರ್‌ ಅವರು ಗೋವಾದ ಡೊನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಮಾಡಲು ಪ್ರಯತ್ನಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ. ಅಕ್ಟೋಬರ್‌ 8 ರಂದು ಬೆಳಗಿನ ಜಾವ 5 ಗಂಟೆ 10 ನಿಮಿಷಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ನಾನಾ ಪಾಟೇಕರ್ ಅವರು 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಾನಾ ಪಾಟೇಕರ್ ಅವರ ಹೆಂಡತಿ ನೀಲಕಾಂತಿ ಪಾಟೇಕರ್ ಅವರನ್ನು ಎಷ್ಟೋ ಜನರು ನೋಡಿದ್ದರೂ, ಇವರೇ ನಾನೇ ಪಾಟೇಕರ್‌ ಅವರ ಪತ್ನಿ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ.

ನಾನಾ ಪಾಟೇಕರ್ ಅವರು 1 ಜನವರಿ 1951 ರಂದು ಜನಿಸಿದರು. ಅವರ ನಿಜವಾದ ಹೆಸರು ವಿಶ್ವನಾಥ್ ಪಾಟೇಕರ್ ಆಗಿದೆ. ನಾನಾ ಪಾಟೇಕರ್ ಅವರು ಮರಾಠಿ ಕುಟುಂಬದಿಂದ ಬಂದವರು. ನಾನಾ ಪಾಟೇಕರ್ ಅವರು ಮಾಜಿ ಬ್ಯಾಂಕ್ ಅಧಿಕಾರಿ, ನಟಿ ಮತ್ತು ರಂಗಭೂಮಿ ವೃತ್ತಿಪರರಾದ ನೀಲಕಾಂತಿ ಪಾಟೇಕರ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ 1978 ರಲ್ಲಿ ವಿವಾಹವಾದರು. ಕೆಲ ಕಾರಣಗಳಿಂದ ಇಬ್ಬರು ನಂತರ ಬೇರ್ಪಟ್ಟರು, ಆದರೆ ಅಧಿಕೃತವಾಗಿ ವಿಚ್ಛೇದನ ಪಡೆಯಲಿಲ್ಲ. ಅವರಿಗೆ ಚಲನಚಿತ್ರ ನಿರ್ಮಾಪಕ ಮತ್ತು ನಾನಾ ಸಾಹೇಬ್ ಪ್ರೊಡಕ್ಷನ್ ಹೌಸ್ ಅನ್ನು ನಡೆಸುತ್ತಿರುವ ಮಲ್ಹರ್ ಪಾಟೇಕರ್ ಎಂಬ ಮಗನಿದ್ದಾನೆ. ಮತ್ತೊಬ್ಬ ಮಗ ದೂರ್ವಾಸ ಪಾಟೇಕರ್ ಎರಡು ವರ್ಷದವನಿದ್ದಾಗ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ನಾನಾ ಪಾಟೇಕರ್ ಅವರ ಪತ್ನಿ ಯಾರು? 
ನಾನಾ ಪಾಟೇಕರ್ ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾನಾ ಪಾಟೇಕರ್ ಅವರು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ ನಾನಾ ಪಾಟೇಕರ್ ಅವರ ಪತ್ನಿ ನೀಲಕಾಂತಿ ಪಾಟೇಕರ್ ಅವರ ಬಗ್ಗೆ ಬಹಳ ಜನರಿಗೆ ಕಡಿಮೆ ತಿಳಿದಿದೆ. ನಾನಾ ಪಾಟೇಕರ್ ಅವರ ಪತ್ನಿ ನೀಲಕಾಂತಿ ಪಾಟೇಕರ್ ಒಬ್ಬ ಅನುಭವಿ ಮರಾಠಿ ನಟಿ. ನೀಲಕಾಂತಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆಯೂ ಆಗಿದ್ದಾರೆ. ನೀಲಕಾಂತಿ ಪಾಟೇಕರ್ ಅವರು ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರ ಛಾವಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮರಾಠಿ ಚಲನಚಿತ್ರ ನಟಿ ನೀಲಕಾಂತಿ ಪಾಟೇಕರ್ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ್ದಾರೆ. ನೀಲಕಾಂತಿ ಅವರ ಬಾಲ್ಯವು ದೇಶದ ವಿವಿಧ ನಗರಗಳಲ್ಲಿ ಕಳೆದಿತು ಎಂದು ಹೇಳಬಹುದು. ಏಕೆಂದರೆ ಸರ್ಕಾರಿ ಅಧಿಕಾರಿ ತಂದೆ ಆಗಿದ್ದಾರೆ ಅವರ ಮಕ್ಕಳು ಬೇರೆ ಬೇರೆ ನಗರಗಳಲ್ಲಿ ಬೆಳೆಯುವುದು ಸಾಮಾನ್ಯ. ಅದರಂತೆ ನೀಲಕಾಂತಿ ಅವರು ಬೇರೆ ಬೇರೆ ನಗರದಲ್ಲಿ ಬೆಳದರು. ನೀಲಕಾಂತಿ ಅವರ ತಂದೆ ಕೇಂದ್ರ ಅಬಕಾರಿ ಅಧಿಕಾರಿಯಾಗಿದ್ದರು. ಹೀಗಾಗಿ ನೀಲಕಾಂತಿ ಅವರ ತಂದೆ ಅವರನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಲಾಗುತ್ತಿತ್ತು.

ಭೌತಶಾಸ್ತ್ರದಲ್ಲಿ ಪದವಿ ಪಡೆದ ನೀಲಕಾಂತಿ, ತನ್ನ ತಂದೆಯ ಸಲಹೆಯ ಮೇರೆಗೆ ಐಐಟಿ ಪ್ರವೇಶ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ವಿಯಾಗಿದ್ದರು. ಆದರೆ ನೀಲಕಾಂತಿ ಅವರ ಮನಸ್ಸು ಮಾತ್ರ ನಟನೆ ಮತ್ತು ರಂಗಭೂಮಿಯ ಮೇಲೆ ಬಲವಾಗಿ ಕೇಂದ್ರೀಕೃತವಾಗಿತ್ತು. ನೀಲಕಾಂತಿ ಅವರು ಮರಾಠಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು ಮತ್ತು ಅನೇಕ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದರು. 1973 ರಲ್ಲಿ ನೀಲಕಾಂತಿ ಮಹಾರಾಷ್ಟ್ರ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿಗಾಗಿ ಚಿನ್ನದ ಪದಕವನ್ನು ಗೆದ್ದರು. ನೀಲಕಾಂತಿ ಬ್ಯಾಂಕಿನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಮರಾಠಿ ನಾಟಕವೊಂದರ ಸಮಯದಲ್ಲಿ ನಾನಾ ಪಾಟೇಕರ್ ಅವರನ್ನು ನೀಲಕಾಂತಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯೇ ಮುಂದೆ ಪ್ರೀತಿಯಾಗಿ ಅರಳಿತ್ತು. ಪ್ರೀತಿಯ ಎರಡು ಮನಸುಗಳು ಒಂದುಗೂಡುವ ಸಮಯ ಕೂಡ ಬಂತು. ಅದರಂತೆ ಇಬ್ಬರು 1978 ರಲ್ಲಿ ವಿವಾಹವಾದರು.  

ನೀಲಕಾಂತಿ ಮತ್ತು ನಾನಾ ಪಾಟೇಕರ್ ಅವರ ವೈವಾಹಿಕ ಜೀವನವು ಹೆಚ್ಚು ಚರ್ಚಿತವಾಗಿತ್ತು ಎನ್ನಬಹುದು. ಅವರ ಮೊದಲ ಮಗನ ಅಕಾಲಿಕ ಮರಣವು ಕುಟುಂಬವನ್ನು ತೀವ್ರವಾಗಿ ಆಘಾತಗೊಳಿಸಿತು. ನಂತರದ ವರ್ಷಗಳಲ್ಲಿ, ನಾನಾ ಪಾಟೇಕರ್ ಮತ್ತು ಮನೀಷಾ ಕೊಯಿರಾಲ ನಡುವಿನ ನಿಕಟ ಸಂಬಂಧದ ವರದಿಗಳ ನಡುವೆ, ದಂಪತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಇಬ್ಬರು ಎಂದಿಗೂ ಅಧಿಕೃತವಾಗಿ ವಿಚ್ಛೇದನ ಅಥವಾ ಡಿವೋರ್ಸ್‌ ಪಡೆಯಲಿಲ್ಲ. ಈಗಿನವರೆಗೂ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು. 

Add Zee News as a Preferred Source
TAGS:
Cinema