• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರೂಪ ನೋಡಿ ಪ್ರೀತಿ ಮಾಡೋದಲ್ಲ.. ಟ್ರೋಲ್ ಮಾಡುವವರಿಗೆ ಮಹಾಲಕ್ಷ್ಮಿ-ರವೀಂದರ್ ಜೋಡಿ ಕೊಟ್ಟ ಉತ್ತರವೇನು? ಈಗ ಹೇಗಿದೆ ಇವರ ಬಂಧ

ರೂಪ ನೋಡಿ ಪ್ರೀತಿ ಮಾಡೋದಲ್ಲ.. ಟ್ರೋಲ್ ಮಾಡುವವರಿಗೆ ಮಹಾಲಕ್ಷ್ಮಿ-ರವೀಂದರ್ ಜೋಡಿ ಕೊಟ್ಟ ಉತ್ತರವೇನು? ಈಗ ಹೇಗಿದೆ ಇವರ ಬಂಧ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಜೋಡಿ ಅಂದ್ರೆ ಅದು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ನಿರೂಪಕಿ ಮಹಾಲಕ್ಷ್ಮಿ. 2022ರ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಮದುವೆಯಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ.

Written ByRamya. R. Gowda
Published: Nov 02, 2026, 02:48 PM IST|Updated: Nov 02, 2026, 03:02 PM IST
joinshare
ರೂಪ ನೋಡಿ ಪ್ರೀತಿ ಮಾಡೋದಲ್ಲ.. ಟ್ರೋಲ್ ಮಾಡುವವರಿಗೆ ಮಹಾಲಕ್ಷ್ಮಿ-ರವೀಂದರ್ ಜೋಡಿ ಕೊಟ್ಟ ಉತ್ತರವೇನು? ಈಗ ಹೇಗಿದೆ ಇವರ ಬಂಧ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

2

ಇಂದು ನೂರಾರು ಕೋಟಿ ಸಂಭಾವನೆ ಪಡೆವ ಐಶ್ವರ್ಯಾ ರೈ ಬಚ್ಚನ್ 1992ರಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತೇ!

3

ಕೇವಲ ₹1.38 ಲಕ್ಷಕ್ಕೆ 350 ಸಿಸಿ ಬೈಕ್! ಸ್ಟೈಲಿಶ್ ಲುಕ್, ಡೈಲಿ ರೈಡ್‌ಗೂ ಸೂಕ್ತವಾದ ಬೈಕ್‌ಗಳಿವು...

4

ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ 56 ವರ್ಷದ ವ್ಯಕ್ತಿ ಬಲಿ? ಆಸ್ಪತ್ರೆ ಮುಂಭಾಗದಲ್ಲೇ ಸಾವು

5

ಮೊಬೈಲ್ ಬಳಸಿ VAO ಪರೀಕ್ಷೆ ಬರೆದ ಅಭ್ಯರ್ಥಿ ಅರೆಸ್ಟ್..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸಿನಿಮಾ ಸೆಲೆಬ್ರಿಟಿಗಳ ಮದುವೆ ಅಂದ್ರೆ ಅಲ್ಲಿ ಸಂಭ್ರಮಕ್ಕಿಂತ ಚರ್ಚೆಗಳೇ ಹೆಚ್ಚು. ಅದರಲ್ಲೂ ಈ ಜೋಡಿಯ ಮದುವೆ ವಿಚಾರ ಮಾತ್ರ ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್. ಒಬ್ಬರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ, ಮತ್ತೊಬ್ಬರು ಕಿರುತೆರೆಯ ಸುಂದರಿ ನಿರೂಪಕಿ. ಇವರಿಬ್ಬರ ಜೋಡಿ ನೋಡಿದ ಜನರು ಮೆಚ್ಚಿದ್ದಕ್ಕಿಂತ ಟ್ರೋಲ್ ಮಾಡಿದ್ದೇ ಹೆಚ್ಚು. ಆದ್ರೆ ಇಷ್ಟೆಲ್ಲಾ ಟೀಕೆ, ಟ್ರೋಲ್‌ಗಳ ನಡುವೆಯೂ ಈ ಜೋಡಿ ಮಾತ್ರ ತಮ್ಮ ಜೀವನವನ್ನು ಖುಷಿಯಾಗಿ ನಡೆಸುತ್ತಿದೆ. ಅಷ್ಟಕ್ಕೂ ಯಾರು ಈ ಜೋಡಿ? ಯಾಕಿಷ್ಟು ಟ್ರೋಲ್ ಆಗ್ತಿದ್ದಾರೆ? ನೋಡೋಣ ಈ ಸ್ಟೋರಿ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಜೋಡಿ ಅಂದ್ರೆ ಅದು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ನಿರೂಪಕಿ ಮಹಾಲಕ್ಷ್ಮಿ. 2022ರ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಮದುವೆಯಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ.ಇವರ ಮದುವೆ ವಿಚಾರದಲ್ಲಿ ಚರ್ಚೆಗಿಂತ ಟ್ರೋಲ್‌ಗಳೇ ಹೆಚ್ಚಾಗಿದ್ದವು. ಅದಕ್ಕೆ ಮುಖ್ಯ ಕಾರಣ ಇವರಿಬ್ಬರ ಬಾಹ್ಯ ರೂಪ. ಸುಂದರಿಯಾಗಿರುವ ಮಹಾಲಕ್ಷ್ಮಿ, ದಪ್ಪಗಿರುವ ರವೀಂದರ್ ಅವರನ್ನು ಮದುವೆಯಾಗಿದ್ದೇಕೆ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಹಲವರು ಟೀಕಿಸಿದ್ದರು.

ಇನ್ನು ಕೆಲವರಂತೂ ಮಹಾಲಕ್ಷ್ಮಿ ಅವರು ರವೀಂದರ್ ಅವರ ಆಸ್ತಿಯನ್ನು ನೋಡಿ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಮದುವೆ ಹೆಚ್ಚು ದಿನ ಉಳಿಯಲ್ಲ, ಇಬ್ಬರೂ ಬೇಗ ದೂರವಾಗುತ್ತಾರೆ ಎಂಬ ಭವಿಷ್ಯವನ್ನೂ ನುಡಿದಿದ್ದರು. ಆದರೆ ಇಂತಹ ಟೀಕೆಗಳಿಗೆಲ್ಲಾ ಈ ಜೋಡಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿರುವ ಈ ಜೋಡಿ, ಟ್ರೋಲ್ ಮಾಡುವವರಿಗೆ ತಮ್ಮ ಬದುಕಿನ ಮೂಲಕವೇ ಉತ್ತರ ನೀಡುತ್ತಿದೆ. ಬಾಹ್ಯ ಸೌಂದರ್ಯಕ್ಕಿಂತ ಪ್ರೀತಿ, ನಂಬಿಕೆ ಮತ್ತು ಹೊಂದಾಣಿಕೆ ಮುಖ್ಯ ಎಂಬ ಸಂದೇಶವನ್ನು ಇವರ ಮದುವೆ ಸಾರುತ್ತಿದೆ.

ಒಟ್ಟಿನಲ್ಲಿ, ಯಾರೇ ಏನೇ ಹೇಳಲಿ ನಮ್ಮ ಜೀವನ ನಮ್ಮಿಷ್ಟ ಎನ್ನುವಂತೆ ರವೀಂದರ್ ಮತ್ತು ಮಹಾಲಕ್ಷ್ಮಿ ತಮ್ಮ ವೈವಾಹಿಕ ಜೀವನವನ್ನು ಮುಂದುವರಿಸಿದ್ದಾರೆ. ಇವರ ಜೋಡಿ ಮೇಲಿನ ಟ್ರೋಲ್‌ಗಳು ಯಾವಾಗ ನಿಲ್ಲುತ್ತವೋ ಗೊತ್ತಿಲ್ಲ. ಆದರೆ ಇವರಿಬ್ಬರ ನಡುವಿನ ಬಾಂಧವ್ಯ ಮಾತ್ರ ಚರ್ಚೆಯ ವಿಷಯವಾಗಿಯೇ ಉಳಿದಿದೆ.

 

ತಮಿಳು ನಿರ್ಮಾಪಕ ರವೀಂದರ್‌ಗೆ ನಿರೂಪಕಿ ಮಹಾಲಕ್ಷ್ಮಿ ಮೇಲೆ ಲವ್‌.. ಇವರ ಪ್ರೇಮಕಥೆ ಶುರುವಾಗಿದ್ದು ಹೇಗೆ ಗೊತ್ತಾ?


ರವೀಂದರ್ ಚಂದ್ರಶೇಖರ್ –ಮಹಾಲಕ್ಷ್ಮಿ ಪ್ರೇಮಕಥೆ! ಎರಡನೇ ಮದುವೆಯಾದರೂ ಕಡಿಮೆಯಾಗದ ಪ್ರೀತಿ, ಈ ಜೋಡಿಯ ಲವ್ ಸ್ಟೋರಿ ಇಂಟರೆಸ್ಟಿಂಗ್! ಸಿನಿಮಾ ಲೋಕದಲ್ಲಿ ಪ್ರೀತಿ, ಪ್ರೇಮ, ಮದುವೆ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಅದರಲ್ಲೂ ತಮಿಳು ಚಿತ್ರರಂಗದ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ಕಿರುತೆರೆ ನಿರೂಪಕಿ, ನಟಿ ಮಹಾಲಕ್ಷ್ಮಿ ಜೋಡಿ ಸಖತ್ ಸುದ್ದಿಯಾಗಿತ್ತು. ಇಬ್ಬರ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೂ ಕಾರಣವಾಗಿತ್ತು. ಅಷ್ಟಕ್ಕೂ ಇವರಿಬ್ಬರ ಪರಿಚಯವಾಗಿದ್ದು ಹೇಗೆ? ಪ್ರೀತಿಯಾಗಿ ಬದಲಾದದ್ದು ಯಾವಾಗ?

ತಮಿಳು ಚಿತ್ರರಂಗದ ನಿರ್ಮಾಪಕ ರವೀಂದರ್ ಚಂದ್ರಶೇಖರ್. ಮತ್ತೊಂದೆಡೆ ಕಿರುತೆರೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮಿ. ಇಬ್ಬರ ಜೋಡಿ ಆರಂಭದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಜೋಡಿ ಮಾತ್ರ ಎಲ್ಲ ಟೀಕೆಗಳನ್ನೂ ಮೀರಿ ತಮ್ಮ ಪ್ರೀತಿಯ ಬದುಕನ್ನು ಆರಂಭಿಸಿತ್ತು.

ಅಂದಹಾಗೆ ರವೀಂದರ್ ಅವರು ಲಿಬ್ರಾ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಮಾಲೀಕರು. ಸುಟ್ಟ ಕಥೈ, ನಳನುಂ ನಂದಿನಿಯುಂ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇನ್ನು ಮಹಾಲಕ್ಷ್ಮಿ ಅವರು ತಮಿಳು ಕಿರುತೆರೆಯ ಜನಪ್ರಿಯ ನಟಿ. ವಾಣಿ ರಾಣಿ, ಚೆಲ್ಲಮೇ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರ ಪರಿಚಯಕ್ಕೆ ಕಾರಣವಾಗಿದ್ದು ಸಿನಿಮಾ. ರವೀಂದರ್ ನಿರ್ಮಾಣದ 'ವಿಡಿಯುಂ ವರೈ ಕಾತಿರು' ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ಕ್ರಮೇಣ ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗಿತ್ತು. ಕೊನೆಗೆ 2022ರ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನೊಂದು ವಿಶೇಷ ಅಂದ್ರೆ, ರವೀಂದರ್ ಹಾಗೂ ಮಹಾಲಕ್ಷ್ಮಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದ ಮಹಾಲಕ್ಷ್ಮಿ, ತಮ್ಮ ಜೀವನದಲ್ಲಿ ರವೀಂದರ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಈ ಜೋಡಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದವು. ಆರಂಭದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡುತ್ತಿದ್ದರು. ಪ್ರೀತಿ ಎನ್ನುವುದು ರೂಪ, ಹಣ, ಸ್ಥಾನಮಾನಗಳನ್ನು ಮೀರಿದ್ದು ಎಂಬ ಚರ್ಚೆಯೂ ಇವರ ಮದುವೆಯ ಸಂದರ್ಭದಲ್ಲಿ ಜೋರಾಗಿತ್ತು.

ಒಟ್ಟಿನಲ್ಲಿ ಸಿನಿಮಾ ಸೆಟ್‌ನಲ್ಲಿ ಆರಂಭವಾದ ಪರಿಚಯ ಪ್ರೀತಿಯಾಗಿ ಬದಲಾಗಿ, ಮದುವೆಯ ಬಂಧನದಲ್ಲಿ ಒಂದಾದ ಈ ಜೋಡಿಯ ಕಥೆ ನಿಜಕ್ಕೂ ಇಂಟರೆಸ್ಟಿಂಗ್. ರವೀಂದರ್ ಚಂದ್ರಶೇಖರ್ ಹಾಗೂ ಮಹಾಲಕ್ಷ್ಮಿ ಜೋಡಿ ಸದಾ ಸುದ್ದಿಯಲ್ಲಿರುವ ತಾರಾ ಜೋಡಿಗಳಲ್ಲಿ ಒಂದಾಗಿದೆ.

 

 

 

Add Zee News as a Preferred Source
TAGS:
Cinema