ಸ್ನೇಹ ಅಂದ್ರೆ ಇದಪ್ಪಾ.. ಎಲಿಮಿನೆಟ್ ಆಗಿ ಹೊರಬಂದ ಮಂಜು ಹುಟ್ಟುಹಬ್ಬ ಮಾಡಿದ ಲಿಖಿತ್.!
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮಂಜುಗೆ ಲಿಖಿತ್ ನೀಡಿದ ಅಚ್ಚರಿಯ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.. ಈ ಕುರಿತ ಒಂದು ವರದಿ ಇಲ್ಲಿದೆ..
Bigg Boss Mahakavi Manja : ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಇತ್ತೀಚೆಗೆ ಹೊರಬಂದಿರುವ ಸ್ಪರ್ಧಿ ಮಂಜುನಾಥ್ (ಮಾಡ್ರನ್ ಮಹಾಕವಿ ಮಂಜು) ಅವರು ತಮ್ಮ ಹುಟ್ಟುಹಬ್ಬವನ್ನು ತೀರಾ ಸರಳವಾಗಿ ಆದರೆ ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಶೋನಿಂದ ಹೊರಬರುತ್ತಿದ್ದಂತೆ ಅವರಿಗೆ ಸ್ನೇಹಿತರಿಂದ ಮರೆಯಲಾಗದ ಸರ್ಪ್ರೈಸ್ ಸಿಕ್ಕಿದೆ. ಕೆಲ ವಾರಗಳ ಹಿಂದೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದ ಲಿಖಿತ್ ಅವರು ಮಂಜು ಹುಟ್ಟುಹಬ್ಬಕ್ಕೆ ಸಖತ್ ಪ್ಲಾನ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಳ್ಳುವ ಯೋಚನೆಯೇ ಮಂಜುಗೆ ಇರಲಿಲ್ಲ, ಆದರೆ ಲಿಖಿತ್ ರಸ್ತೆಯ ಬದಿಯಲ್ಲೇ ಕೇಕ್ ತರಿಸಿ, ಮಂಜುಗೆ ಟೋಪಿ ಹಾಕಿ ಫುಲ್ ಜೋಶ್‌ನಲ್ಲಿ ಸೆಲೆಬ್ರೇಷನ್ ಮಾಡಿಸಿದ್ದಾರೆ. ಇಬ್ಬರೂ ಖುಷಿಯಿಂದ ಕೇಕ್ ತಿನಿಸಿಕೊಂಡು ತಮ್ಮ ಸಂತೋಷ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರೂ ತುಂಬಾನೇ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಕಷ್ಟ ಬಂದಾಗ ಒಬ್ಬರಿಗೊಬ್ಬರು ಸರಿಯಾಗಿ ಸಪೋರ್ಟ್ ಮಾಡಿಕೊಳ್ಳುತ್ತಿದ್ದರು. ಈಗ ಶೋನಿಂದ ಹೊರಬಂದ ಮೇಲೂ ಅದೇ ಸ್ನೇಹವನ್ನು ಮುಂದುವರಿಸಿರುವುದು ನೋಡುವುದಕ್ಕೆ ತುಂಬಾ ಖುಷಿ ಕೊಡುತ್ತದೆ. ಅಭಿಮಾನಿಗಳು ಕೂಡ ಇವರ ಫ್ರೆಂಡ್‌ಶಿಪ್ ನೋಡಿ ಸಖತ್ ಇಷ್ಟಪಟ್ಟಿದ್ದಾರೆ, ಇಂಟರ್ನೆಟ್‌ನಲ್ಲಿ ಬರ್ತ್‌ಡೇ ವಿಷಸ್ ಹರಿದುಬರುತ್ತಿದೆ.
ಒಟ್ಟಾರೆಯಾಗಿ, ಅವಾಚ್ಯ ಪದ ಬಳಕೆ ಮತ್ತು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಂಜು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದಾಗಲೂ ಲಿಖಿತ್ ಮಂಜು ಅವರನ್ನು ಬೆಂಬಲಿಸಿದ್ದರು. ಈಗಲೂ ಕೇಕ್ ಕಟ್ ಮಾಡಿಸಿ ಗೆಳೆಯನ ಹುಟ್ಟು ಹಬ್ಬ ಆಚರಿಸಿದ್ದು, ಇಬ್ಬರ ಗೆಳೆತನಕ್ಕೆ ಸಾಕ್ಷಿಯಾಗಿದೆ.. ಮುಂದೆಯೂ ಈ ಸಂಬಂಧ ಹೀಗೆ ಇರಲಿ ಅಂತೀದಾರೆ ನೆಟ್ಟಿಗರು..