• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಲವ್‌ ಅಫೇರ್‌ಗೆ ಅಜ್ಜಿ ಅಡ್ಡಿ : ಪ್ರಿಯಕರನ ಜೊತೆ ಸೇರಿ ವೃದ್ಧೆಯನ್ನೇ ಮುಗಿಸಿದ ಮೊಮ್ಮಗಳು

ಲವ್‌ ಅಫೇರ್‌ಗೆ ಅಜ್ಜಿ ಅಡ್ಡಿ : ಪ್ರಿಯಕರನ ಜೊತೆ ಸೇರಿ ವೃದ್ಧೆಯನ್ನೇ ಮುಗಿಸಿದ ಮೊಮ್ಮಗಳು

ಪ್ರೀತಿಯ ಅಮಲಿಗೆ ಬಿದ್ದ ಸ್ವಂತ ಮೊಮ್ಮಗಳೇ ಅಜ್ಜಿಯ ಪ್ರಾಣ ತೆಗೆದಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ವಿಚಾರದಲ್ಲಿ ಅಜ್ಜಿ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ, ಪ್ರಿಯಕರನ ಜೊತೆ ಸೇರಿ ಅಜ್ಜಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಪ್ರಕರಣ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಡೆದಿದೆ.. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ..

Written ByKrishna NK
Published: Oct 12, 2026, 06:14 PM IST|Updated: Oct 12, 2026, 06:16 PM IST
joinshare
ಲವ್‌ ಅಫೇರ್‌ಗೆ ಅಜ್ಜಿ ಅಡ್ಡಿ : ಪ್ರಿಯಕರನ ಜೊತೆ ಸೇರಿ ವೃದ್ಧೆಯನ್ನೇ ಮುಗಿಸಿದ ಮೊಮ್ಮಗಳು
Image Credit: News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಈ 5 ಪ್ರಮುಖ ನಿಲ್ದಾಣಗಳಿಗೆ ವಿಶೇಷ BMTC ಫೀಡರ್ ಬಸ್ ಸೇವೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ : ಈ 5 ಪ್ರಮುಖ ನಿಲ್ದಾಣಗಳಿಗೆ ವಿಶೇಷ BMTC ಫೀಡರ್ ಬಸ್ ಸೇವೆ

2

ತಿರುಪತಿ ಭಕ್ತರಿಗೆ ಸಿಹಿ ಸುದ್ದಿ: 'ವೆಂಕಟಾದ್ರಿ' ಸೂಪರ್ ಆಪ್ ಬಿಡುಗಡೆ, ಇಂಟರ್ನೆಟ್ ಸಹ ಬೇಕಿಲ್ಲ..

3

ಲವ್‌ ಅಫೇರ್‌ಗೆ ಅಜ್ಜಿ ಅಡ್ಡಿ : ಪ್ರಿಯಕರನ ಜೊತೆ ಸೇರಿ ವೃದ್ಧೆಯನ್ನೇ ಮುಗಿಸಿದ ಮೊಮ್ಮಗಳು

4

ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲು ಶಿಫ್ಟ್‌ಗೆ ಕೊನೆ ಕ್ಷಣದ ಬ್ರೇಕ್‌ ಬಿದ್ದಿದ್ದೇಕೆ?

5

ಸ್ಟಿಂಗ್ ಆಪರೇಷನ್: ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ- ಮುಖ್ಯಮಂತ್ರಿ ಡಿಕೆಶಿಗೆ HDK ತಿರುಗೇಟು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಪ್ರೀತಿಗಾಗಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಗೆ ಅಜ್ಜಿ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ, ಪ್ರಿಯಕರನ ಜೊತೆ ಸೇರಿ ಸ್ವಂತ ಮೊಮ್ಮಗಳೇ ಅಜ್ಜಿಯನ್ನು ಕೊಲೆ ಮಾಡಿರುವ ಭೀಕರ ಕೃತ್ಯ ನಡೆದಿದೆ.

ಮೃತಪಟ್ಟ ವೃದ್ಧೆಯನ್ನು ಮಹದೇವಮ್ಮ (52) ಎಂದು ಗುರುತಿಸಲಾಗಿದೆ. ಕೊಲೆಗೈದ ಅಪ್ರಾಪ್ತೆ ಕೀರ್ತನಾ (16) ಹಾಗೂ ಆಕೆಯ ಪ್ರಿಯಕರ ಆಕಾಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೀರ್ತನಾಳ ಪ್ರೀತಿಯನ್ನು ಅಜ್ಜಿ ಮಹದೇವಮ್ಮ ಬಲವಾಗಿ ವಿರೋಧಿಸಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದೆ.

ಲವ್‌ ವಿಚಾರದಲ್ಲಿ ಅಜ್ಜಿ ತಮಗೆ ಅಡ್ಡ ಬರುತ್ತಿದ್ದಾಳೆ ಎಂದು ಕೋಪಗೊಂಡ ಕೀರ್ತನಾ, ಪ್ರಿಯಕರ ಆಕಾಶ್ ಜೊತೆ ಸೇರಿ ವೃದ್ಧೆಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಪ್ಲಾನ್ ಪ್ರಕಾರ ಆಕಾಶ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ರಾತ್ರಿ ವೇಳೆ ಮಲಗಿದ್ದ ಅಜ್ಜಿ ಮಹದೇವಮ್ಮನ ಮೇಲೆ ದಾಳಿ ನಡೆಸಿ, ಆಕಾಶ್ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಘಟನೆ ಬಳಿಕ ಆರೋಪಿ ಆಕಾಶ್ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಎಸ್ಪಿ ಶೋಭಾರಾಣಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Add Zee News as a Preferred Source
TAGS:
Kannada News