SOCIAL MEDIA

Newsletter

PARTNER SITES
Select Language Select State

ಸಿನಿಮಾ ರಂಗಕ್ಕೆ ಕಿಯಾರಾ ಅಡ್ವಾಣಿ ಗುಡ್‌ಬೈ? ಟಾಕ್ಸಿಕ್ ಬೆಡಗಿ ಕೊಟ್ಟ ಸ್ಪಷ್ಟನೆ ಏನು?

ಬಾಲಿವುಡ್‌ನ ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ಸಿನಿಮಾ ರಂಗ ತೊರೆಯಲಿದ್ದಾರಾ? ಮದುವೆ, ತಾಯ್ತನದ ಬಳಿಕ ಸಂಪೂರ್ಣವಾಗಿ ಕುಟುಂಬ ಜೀವನಕ್ಕೆ ಸೀಮಿತವಾಗಲು ನಿರ್ಧರಿಸಿದ್ದಾರಾ? ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಲು ಸಿನಿಮಾಗಳಿಂದ ದೂರ ಉಳಿಯಲಿದ್ದಾರಾ? ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಭಾರೀ ಸದ್ದು ಮಾಡುತ್ತಿದೆ.

Written By Ramya. R. Gowda
Published: Nov 24, 2026, 12:22 IST | Updated: Nov 24, 2026, 12:29 IST
Join

ಬಾಲಿವುಡ್‌ನ ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ಸಿನಿಮಾ ರಂಗ ತೊರೆಯಲಿದ್ದಾರಾ? ಮದುವೆ, ತಾಯ್ತನದ ಬಳಿಕ ಸಂಪೂರ್ಣವಾಗಿ ಕುಟುಂಬ ಜೀವನಕ್ಕೆ ಸೀಮಿತವಾಗಲು ನಿರ್ಧರಿಸಿದ್ದಾರಾ? ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಲು ಸಿನಿಮಾಗಳಿಂದ ದೂರ ಉಳಿಯಲಿದ್ದಾರಾ? ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಇದೀಗ ಸ್ವತಃ ಕಿಯಾರಾ ಅಡ್ವಾಣಿ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಬಿಡುವ ಪ್ರಶ್ನೆಯೇ ಇಲ್ಲ!
ಮದುವೆಯಾದ ಬಳಿಕವೂ ಸಿನಿಮಾ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಿಂದ ನಿಭಾಯಿಸುತ್ತಿರುವ ಕಿಯಾರಾ, ನಟನೆಯಿಂದ ದೂರವಾಗುವ ನಿರ್ಧಾರ ಕೈಗೊಂಡಿಲ್ಲ. ತನಗೆ ಇಷ್ಟವಾಗುವ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಸಿನಿಮಾ ರಂಗ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಾಯ್ತನವಾಗಲಿ, ಕುಟುಂಬದ ಜವಾಬ್ದಾರಿಯಾಗಲಿ ತಮ್ಮ ನಟನಾ ವೃತ್ತಿಗೆ ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.

ಇತ್ತೀಚೆಗೆ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಕಾಫಿ ವಿತ್ ಕರಣ್ ಸೀಸನ್ 9' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಯಾರಾ, ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ 'ಟಾಕ್ಸಿಕ್' ಸಿನಿಮಾದ ವಿಚಾರವಾಗಿ ಎದುರಿಸಿದ ಆನ್‌ಲೈನ್ ಟ್ರೋಲಿಂಗ್ ತಮ್ಮನ್ನು ಮಾನಸಿಕವಾಗಿ ಸಾಕಷ್ಟು ನೋಯಿಸಿತ್ತು ಎಂದು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿನ ಪ್ರಣಯ ಮತ್ತು ಇಂಟಿಮೇಟ್ ದೃಶ್ಯಗಳ ವಿಚಾರವಾಗಿ ನಡೆದ ಟೀಕೆಗಳು ಭಾವನಾತ್ಮಕವಾಗಿ ಕುಗ್ಗುವಂತೆ ಮಾಡಿದ್ದವು. ಆ ಸಮಯದಲ್ಲಿ ಪತಿ ಸಿದ್ಧಾರ್ಥ್ ದೊಡ್ಡ ಬೆಂಬಲವಾಗಿ ನಿಂತಿದ್ದರು. ತಮ್ಮ ಪ್ರತಿಯೊಂದು ನಿರ್ಧಾರದಲ್ಲೂ ಸಿದ್ಧಾರ್ಥ್ ಬೆನ್ನಿಗೆ ನಿಂತಿದ್ದರಿಂದ ಕಷ್ಟದ ಸಮಯದಿಂದ ಹೊರಬರಲು ಸಾಧ್ಯವಾಯಿತು ಎಂದು ಕಿಯಾರಾ ತಿಳಿಸಿದ್ದಾರೆ.

ಸಿದ್ಧಾರ್ಥ್‌ಗೆ ಕಿಯಾರಾ ಮೇಲೆ ಪ್ರೀತಿ ಶುರುವಾಗಿದ್ದು ಹೇಗೆ?
ಇದೇ ಕಾರ್ಯಕ್ರಮದಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆಯೂ ಕಿಯಾರಾ ಆಸಕ್ತಿದಾಯಕ ವಿಚಾರ ಬಿಚ್ಚಿಟ್ಟಿದ್ದಾರೆ. 'ಲಸ್ಟ್ ಸ್ಟೋರೀಸ್' ಸಿನಿಮಾ ನೋಡಿದ ಬಳಿಕ ಸಿದ್ಧಾರ್ಥ್‌ಗೆ ತಮ್ಮ ಮೇಲೆ ಆಸಕ್ತಿ ಮೂಡಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬಳಿಕ ನೈಟ್‌ಕ್ಲಬ್‌ಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುವ ಪ್ರಯತ್ನಗಳು ನಡೆದವು. ಹೀಗೆ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನು ಕಿಯಾರಾ ಅವರ ದಕ್ಷಿಣ ಭಾರತದ ಸಿನಿಮಾ ಜರ್ನಿ ಗಮನಿಸಿದರೆ 'ಭರತ್ ಅನು ನೇನು' ಚಿತ್ರ ಹೊರತುಪಡಿಸಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಎಂಬ ಚರ್ಚೆಯಿದೆ. 'ವಿನಯ ವಿಧೇಯ ರಾಮ', 'ಗೇಮ್ ಚೇಂಜರ್' ಹಾಗೂ 'ವಾರ್ 2' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಯಶ್ ಅಭಿನಯದ 'ಟಾಕ್ಸಿಕ್' ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ.

ಒಟ್ಟಿನಲ್ಲಿ ಸಿನಿಮಾ ರಂಗಕ್ಕೆ ವಿದಾಯ ಹೇಳುವ ಬದಲು, ಕುಟುಂಬ ಮತ್ತು ವೃತ್ತಿಜೀವನ ಎರಡಕ್ಕೂ ಸಮಾನ ಆದ್ಯತೆ ನೀಡುವ ನಿರ್ಧಾರದಲ್ಲಿ ಕಿಯಾರಾ ಇದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಕಿಯಾರಾ ಯಾವ ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES