ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಟ್ರೇಲರ್ ಅನಾವರಣ
Karthik Sharma directed by Bhavantara film Trailer lunch: ಗಮನ ಸೆಳೆಯುತ್ತಿದೆ ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಟ್ರೇಲರ್ ಲಾಂಚ್ ಆಗಿದೆ. ಟ್ರೈಯಾಂಗಲ್ ಲವ್ ಸ್ಟೋರಿ ಜೊತೆ ಮಂಗಳಮುಖಿಯರ ಬದುಕಿನ ಅನಾವರಣ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ನೈಜ ಕಥಾಹಂದರ ಹೊಂದಿರುವ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಭಾವಾಂತರ’ ಸಿನಿಮಾ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ನೀಡಿ, ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಅಕ್ಟೋಬರ್ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್) ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.
ಚಿತ್ರದ ಬಗ್ಗೆ ಸ್ವತಃ ವಿವರ ಹಂಚಿಕೊಂಡಿರುವ ಕಾರ್ತಿಕ್ ಶರ್ಮಾ, ಈ ಕಥೆಯ ಮೂಲ ಮತ್ತು ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ. ಹಲವು ವರ್ಷಗಳ ಹಿಂದೆ ಕೇಳಿದ್ದ ಹಳ್ಳಿಯೊಂದರ ವಿಶಿಷ್ಟ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಎಳೆಯನ್ನಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಈವರೆಗೆ ಬಂದಿರುವ ಮಂಗಳಮುಖಿಯರ ಕಥೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಸುಮಾರು 80% ಜನರಿಗೆ ತಿಳಿಯದ ಅಚ್ಚರಿಯ ಆಚರಣೆ ಹಾಗೂ ವಾಸ್ತವ ಸಂಗತಿಗಳು ಸಿನಿಮಾದಲ್ಲಿರಲಿವೆ. ಬರವಣಿಗೆ, ನಟನೆ ಮತ್ತು ಸಂಗೀತ ಎಲ್ಲವನ್ನೂ ತಾವೇ ನಿಭಾಯಿಸಿರುವ ಕಾರ್ತಿಕ್, ಈ ಕಥೆ ಒಬ್ಬ ನಿರ್ದೇಶಕನಾಗಿ ತಮಗೆ ದೊಡ್ಡ ಮಟ್ಟದ ಸೃಜನಶೀಲ ಸವಾಲನ್ನು ಒಡ್ಡಿದೆ ಎಂದಿದ್ದಾರೆ.
ಚಿತ್ರದ ತಾರಾಗಣದಲ್ಲಿ ಪ್ರತಿಭಾವಂತರ ದಂಡೇ ಇದೆ. ಖ್ಯಾತ ನೃತ್ಯಪಟು ಹಾಗೂ ನಟಿ ತನ್ವಿ ರಾವ್ ‘ರಾಧೆ’ ಎಂಬ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರಕ್ಕೆ ಅವರೇ ಸೂಕ್ತ ಆಯ್ಕೆಯಾಗಿದ್ದು, ರಂಗಭೂಮಿ ಅನುಭವದ ಅವರ ಅಭಿನಯ ಚಿತ್ರಕ್ಕೆ ದೊಡ್ಡ ಬಲ ತಂದಿದೆ. ಇನ್ನು ‘ಶನಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ನಟ ಪ್ರಣವ್ ಶ್ರೀಧರ್ ‘ಅಭಿಮನ್ಯು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಶರ್ಮಾ ಅವರು ‘ಮಾಧವ’ ಹಾಗೂ ‘ಮಾಧವಿ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಮತ್ತು ತನ್ವಿ ರಾವ್ ಅವರೊಂದಿಗಿನ ದೃಶ್ಯಗಳು ಟ್ರೈಆಂಗಲ್ ಲವ್ ಸ್ಟೋರಿಯ ಆಳವನ್ನು ತೆರೆದಿಡಲಿವೆ. ಇವರೊಂದಿಗೆ ಶ್ರೀ ವೈಷ್ಣವ್ ‘ಬ್ಯಾಟರಿ’ ಪಾತ್ರದಲ್ಲಿ ಹಾಗೂ ವೇದಾ ರಾವ್ ‘ತ್ರಿವೇಣಿ’ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆನಡಾದಲ್ಲಿ ಸಿನಿಮಾಟೋಗ್ರಫಿ ಕಲಿತು, ಮರಾಠಿ ಚಿತ್ರಗಳು ಹಾಗೂ ಜಾಹೀರಾತುಗಳಲ್ಲಿ ಅನುಭವ ಹೊಂದಿರುವ ಕಾರ್ತಿಕ್ ಅವರ ಶಾಲಾ ಗೆಳೆಯ ಸಾಗರ್ ಆಥಡ್ಕರ್ ಅವರ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ.
ಈ ಪಾತ್ರಕ್ಕೆ ಅವರೇ ಸೂಕ್ತ ಆಯ್ಕೆಯಾಗಿದ್ದು, ರಂಗಭೂಮಿ ಅನುಭವದ ಅವರ ಅಭಿನಯ ಚಿತ್ರಕ್ಕೆ ದೊಡ್ಡ ಬಲ ತಂದಿದೆ. ಇನ್ನು ‘ಶನಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ನಟ ಪ್ರಣವ್ ಶ್ರೀಧರ್ ‘ಅಭಿಮನ್ಯು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಶರ್ಮಾ ಅವರು ‘ಮಾಧವ’ ಹಾಗೂ ‘ಮಾಧವಿ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಣವ್ ಮತ್ತು ತನ್ವಿ ರಾವ್ ಅವರೊಂದಿಗಿನ ದೃಶ್ಯಗಳು ಟ್ರೈಆಂಗಲ್ ಲವ್ ಸ್ಟೋರಿಯ ಆಳವನ್ನು ತೆರೆದಿಡಲಿವೆ. ಇವರೊಂದಿಗೆ ಶ್ರೀ ವೈಷ್ಣವ್ ‘ಬ್ಯಾಟರಿ’ ಪಾತ್ರದಲ್ಲಿ ಹಾಗೂ ವೇದಾ ರಾವ್ ‘ತ್ರಿವೇಣಿ’ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳಿಗೆ ಆಡಿಯೋ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಿರುವ ಸಂದರ್ಭದಲ್ಲಿ, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ‘ಹೊಂಬಾಳೆ ಮ್ಯೂಸಿಕ್’ ಭಾವಾಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡು ಇಂಡಿಪೆಂಡೆಂಟ್ ಆಲ್ಬಂಗೆ ಅಭೂತಪೂರ್ವ ಪ್ರೋತ್ಸಾಹ ನೀಡಿರುವುದು ಚಿತ್ರತಂಡದ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ. ಅಪರೂಪದ ಕಥಾವಸ್ತು, ಭಾವನಾತ್ಮಕ ಸನ್ನಿವೇಶಗಳು ಮತ್ತು ಹೊಸ ತಲೆಮಾರಿನ ತಂತ್ರಜ್ಞರ ಶ್ರಮದಿಂದ ಮೂಡಿಬಂದಿರುವ ‘ಭಾವಾಂತರ’ ಸದ್ಯದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ
ಸದ್ಯ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ‘ಹೊಂಬಾಳೆ ಮ್ಯೂಸಿಕ್’ ಭಾವಾಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡು ಇಂಡಿಪೆಂಡೆಂಟ್ ಆಲ್ಬಂಗೆ ಅಭೂತಪೂರ್ವ ಪ್ರೋತ್ಸಾಹ ನೀಡಿರುವುದು ಚಿತ್ರತಂಡದ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ.