ಬಟ್ಟೆ ಬಿಚ್ಚಿ, ಎಣ್ಣೆ ಕುಡಿಸಿ, ಹಿಂಸೆ ನೀಡಿ ಅಟ್ಟಹಾಸ! ಧನ್ವೀರ್ ಗೌಡದು ಎನ್ನಲಾದ ವಿಡಿಯೋ ವೈರಲ್
ನಟ ಧನ್ವೀರ್ ಗೌಡ ಅವರದ್ದು ಎನ್ನಲಾದ ಕೆಲ ಆಘಾತಕಾರಿ ವಿಡಿಯೋಗಳು ಮತ್ತು ಆಡಿಯೋಗಳು ಸದ್ಯ ಸಿನಿರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಪ್ರಸ್ತುತ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಈ ಕ್ಲಿಪ್‌ಗಳಲ್ಲಿನ ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿವೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..
Dhanveer Gowda viral videos : ನಟ ಧನ್ವೀರ್ ಗೌಡ ಅವರದ್ದು ಎನ್ನಲಾದ ವೈರಲ್ ಆಗಿರುವ ಕೆಲವು ವಿಡಿಯೋಗಳು ಮತ್ತು ಆಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಮೈಸೂರಿನ ಫಾರ್ಮ್‌ಹೌಸ್ ಒಂದರಲ್ಲಿ ನಡೆದಿದೆ ಎನ್ನಲಾದ ಈ ಘಟನೆಗಳ ವಿಡಿಯೋಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಧನ್ವೀರ್ ಮೇಲೆ ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ತೋಟದ ಕೆಲಸಗಾರರು ಹಾಗೂ ಇತರೆ ಕೆಲವರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮಾಯಕ ಹುಡುಗರನ್ನು ಟಾರ್ಗೆಟ್ ಮಾಡಿ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ, ಕೆಲಸಗಾರರಿಗೆ ಬಲವಂತವಾಗಿ ಮದ್ಯ ಕುಡಿಸಲಾಗುತ್ತಿದೆ ಮತ್ತು ಅವರೊಂದಿಗೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ ಎನ್ನಲಾದ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ ಎಂದು ಹೇಳಲಾಗುತ್ತಿದೆ.
ನಟ ಧನ್ವೀರ್ ಅವರದ್ದೇ ಎನ್ನಲಾದ ಈ ವಿಡಿಯೋಗಳಲ್ಲಿ, ಕೆಲವರಿಗೆ ಬಲವಂತವಾಗಿ ಮದ್ಯಪಾನ ಮಾಡಿಸುತ್ತಿರುವುದು ಮತ್ತು ಹಲ್ಲೆ ನಡೆಸುತ್ತಿರುವಂತಹ ದೃಶ್ಯಗಳಿವೆ ಎಂಬ ಗಂಭೀರ ಮಾತುಗಳು ಕೇಳಿಬರುತ್ತಿವೆ. ಇದರೊಂದಿಗೆ, ಕೆಲಸಗಾರರನ್ನು ಬೆ*ತ್ತಲು ಮಾಡಿ ಹಿಂಸೆ ನೀಡಲಾಗಿದೆ ಎಂಬ ಅತ್ಯಂತ ಗಂಭೀರ ಆರೋಪವೂ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿರುವ ಈ ವಿಡಿಯೋಗಳು ಮತ್ತು ಆಡಿಯೋ ತುಣುಕುಗಳು ಚರ್ಚೆಗೆ ಕಾರಣವಾಗಿವೆ.
ಆದರೂ, ಈ ವೈರಲ್ ವಿಡಿಯೋಗಳ ಅಸಲಿಯತ್ತು ಏನೆಂಬುದು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ನಿಜಕ್ಕೂ ನಟ ಧನ್ವೀರ್ ಹೌದಾ ಅಥವಾ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯಾ ಎಂಬ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ. ಇದರ ಜೊತೆಗೆ, ವೈರಲ್ ಆಗಿರುವ ವಿಡಿಯೋಗಳು ಎಡಿಟೆಡ್ ಹೌದಾ ಅಥವಾ ಹಳೆಯ ದೃಶ್ಯಗಳನ್ನು ತಿರುಚಿ ವೈರಲ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗಳೂ ಎದ್ದಿವೆ.
ಸದ್ಯ ಉಂಟಾಗಿರುವ ಈ ವಿವಾದಗಳ ಸುಳಿಯಲ್ಲಿ ಸಿಲುಕಿರುವ ನಟ ಧನ್ವೀರ್ ಗೌಡ ಅವರು ಈ ಎಲ್ಲಾ ಗಂಭೀರ ಆರೋಪಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಮತ್ತು ತಮ್ಮ ಮೇಲಿನ ಅಪಪ್ರಚಾರಕ್ಕೆ ಸ್ಪಷ್ಟನೆ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಪೊಲೀಸ್ ಅಥವಾ ಅಧಿಕೃತ ಮೂಲಗಳಿಂದ ಈ ಕುರಿತು ಯಾವುದೇ ದೂರುಗಳು ದಾಖಲಾಗಿವೆಯಾ ಅಥವಾ ತನಿಖೆ ನಡೆಯುತ್ತಿದೆಯಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿಗೆ ತಿರುಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ವಿಜಯಲಕ್ಷ್ಮಿ-ಧನ್ವೀರ್ ಗೌಡ ವಾರ್
ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿ ದರ್ಶನ್ ಮತ್ತು ಧನ್ವೀರ್ ಗೌಡ ಮನಸ್ತಾಪ ಮುನ್ನೆಲೆಗೆ ಬಂದಿದ್ದು, ಪರಸ್ಪರ ದೂರು ದಾಖಲಿಸಿದ್ದಾರೆ. ಇದರ ನಡುವೆ ಧನ್ವೀರ್‌ಗೆ ಸಂಬಂಧಿಸಿದ ವಿಡಿಯೋಗಳು ಸಂಚಲನ ಸೃಷ್ಟಿಸುತ್ತಿವೆ. ಇನ್ನು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ ಅಂತ ಹೇಳಲಾಗುತ್ತಿದೆ. ಇಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳ ಮೂಲಕ ಒಬ್ಬರಿಗೊಬ್ಬರು ಟಾಂಗ್ ನೀಡುತ್ತಿದ್ದು, ಇದೀಗ ನೇರಾನೇರ ದೂರು ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ..
ಒಟ್ಟಾರೆಯಾಗಿ ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ, ಇಬ್ಬರ ನಡುವಿನ ಮನಸ್ತಾಪ ಇದೀಗ ಸ್ಪೋಟಗೊಂಡಿದ್ದು ಅಭಿಮಾನಿಗಳು ಮತ್ತು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..