• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /56ನೇ ವಯಸ್ಸಿನಲ್ಲಿ ಸಿಎಂ ಮದುವೆ.. ಕೈ ಹಿಡಿದ ಪತ್ರಕರ್ತೆ ಯಾರು? ವಯಸ್ಸಿನ ಅಂತರ ಎಷ್ಟು?

56ನೇ ವಯಸ್ಸಿನಲ್ಲಿ ಸಿಎಂ ಮದುವೆ.. ಕೈ ಹಿಡಿದ ಪತ್ರಕರ್ತೆ ಯಾರು? ವಯಸ್ಸಿನ ಅಂತರ ಎಷ್ಟು?

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈಗ ರಾಜಕೀಯ ವಿಚಾರಕ್ಕಿಂತ ವೈಯಕ್ತಿಕ ಜೀವನದ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. 56ನೇ ವಯಸ್ಸಿನಲ್ಲಿ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ.

Written ByRamya. R. Gowda
Published: Nov 01, 2026, 12:58 PM IST|Updated: Nov 01, 2026, 01:05 PM IST
joinshare
56ನೇ ವಯಸ್ಸಿನಲ್ಲಿ ಸಿಎಂ ಮದುವೆ.. ಕೈ ಹಿಡಿದ ಪತ್ರಕರ್ತೆ ಯಾರು? ವಯಸ್ಸಿನ ಅಂತರ ಎಷ್ಟು?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಹಾವೇರಿ VAO ಪರೀಕ್ಷೆಯಲ್ಲಿ ಅಕ್ರಮ ಆರೋಪ: ಗೂಗಲ್ ಲೆನ್ಸ್ ಬಳಸಿ ಉತ್ತರ ಹುಡುಕಿದ ಅಭ್ಯರ್ಥಿ ಅರೆಸ್ಟ್!

ಹಾವೇರಿ VAO ಪರೀಕ್ಷೆಯಲ್ಲಿ ಅಕ್ರಮ ಆರೋಪ: ಗೂಗಲ್ ಲೆನ್ಸ್ ಬಳಸಿ ಉತ್ತರ ಹುಡುಕಿದ ಅಭ್ಯರ್ಥಿ ಅರೆಸ್ಟ್!

2

56ನೇ ವಯಸ್ಸಿನಲ್ಲಿ ಸಿಎಂ ಮದುವೆ.. ಕೈ ಹಿಡಿದ ಪತ್ರಕರ್ತೆ ಯಾರು? ವಯಸ್ಸಿನ ಅಂತರ ಎಷ್ಟು?

3

ಸಲ್ಮಾನ್ ಖಾನ್‌ ಫುಲ್ ಗರಂ! ನಿನ್ನಷ್ಟು ನೀಚ ಯಾರೂ ಇಲ್ಲ ಎಂದು ಕಿಡಿಕಾರಿದ್ದೇಕೆ? ಯಾರ ವಿರುದ್ಧ ಭಾಯ್‌ಜಾನ್ ಆಕ್ರೋಶ?

4

9ನೇ ತಿಂಗಳ ಗರ್ಭಾವಸ್ಥೆಯಲ್ಲೂ ವರ್ಕೌಟ್! ಸಮಂತಾ ರುತ್ ಪ್ರಭು ವಿಡಿಯೋಗೆ ಅಭಿಮಾನಿಗಳು ಫಿದಾ

5

ಕರ್ನಾಟಕ ಗಡಿಯಲ್ಲಿ ಶಿವಸೇನೆ ಪುಂಡಾಟ; ಬೆಳಗಾವಿ ಎಂಇಎಸ್ ಕರಾಳ ದಿನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈಗ ರಾಜಕೀಯ ವಿಚಾರಕ್ಕಿಂತ ವೈಯಕ್ತಿಕ ಜೀವನದ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. 56ನೇ ವಯಸ್ಸಿನಲ್ಲಿ ಒಮರ್ ಅಬ್ದುಲ್ಲಾ ಎರಡನೇ ಮದುವೆಯಾಗಿದ್ದಾರೆ. ಖ್ಯಾತ ಪತ್ರಕರ್ತೆ, ಸುದ್ದಿ ನಿರೂಪಕಿ ನಿಧಿ ರಜ್ದಾನ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಕ್ಟೋಬರ್ 30ರಂದು ದೆಹಲಿಯಲ್ಲಿ ಈ ಜೋಡಿಯ ವಿವಾಹ ನೆರವೇರಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳು ವೈರಲ್ ಆಗಿವೆ. ಹಾಗಾದ್ರೆ ಯಾರು ಈ ನಿಧಿ ರಜ್ದಾನ್? ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು? ಒಮರ್ ಅವರ ಮೊದಲ ದಾಂಪತ್ಯದ ಕಥೆಯೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.


ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ದೀರ್ಘಕಾಲದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಇದೀಗ ಪತ್ರಕರ್ತೆ ನಿಧಿ ರಜ್ದಾನ್ ಅವರ ಜೊತೆ ಎರಡನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.


ಅಂದಹಾಗೆ, ಅಕ್ಟೋಬರ್ 31ರಂದು ಒಮರ್ ಅಬ್ದುಲ್ಲಾ ಅವರು ನಿಧಿ ರಜ್ದಾನ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಿನ್ನೆಯಿಂದ ಹೊಸ ಪ್ರಯಾಣ ಆರಂಭವಾಗಿದೆ' ಎಂಬ ಅರ್ಥದ ಶೀರ್ಷಿಕೆಯೊಂದಿಗೆ ತಮ್ಮ ಸಂತಸದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇತ್ತ ನಿಧಿ ರಜ್ದಾನ್ ಕೂಡ ಫೋಟೋ ಹಂಚಿಕೊಂಡು ತಮಾಷೆಯ ಶೀರ್ಷಿಕೆ ನೀಡಿದ್ದಾರೆ ಎನ್ನಲಾಗಿದೆ.ಇನ್ನು ನಿಧಿ ರಜ್ದಾನ್ ಯಾರು ಅನ್ನೋದಾದ್ರೆ, ಇವರು ದೇಶದ ಪ್ರಸಿದ್ಧ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿ. ಎರಡು ದಶಕಗಳಿಗೂ ಹೆಚ್ಚು ಕಾಲ ಎನ್‌ಡಿಟಿವಿಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಇವರಿಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಇನ್ನು ಈ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆಯಾಗುತ್ತಿದೆ. ಒಮರ್ ಅಬ್ದುಲ್ಲಾ ಅವರು ಮಾರ್ಚ್ 10, 1970ರಲ್ಲಿ ಜನಿಸಿದ್ದು, ಅವರಿಗೆ 56 ವರ್ಷ. ನಿಧಿ ರಜ್ದಾನ್ ಅವರು ಏಪ್ರಿಲ್ 11, 1977ರಲ್ಲಿ ಜನಿಸಿದ್ದು, ಅವರಿಗೆ 49 ವರ್ಷ. ಇಬ್ಬರ ನಡುವೆ ಏಳು ವರ್ಷಗಳ ವಯಸ್ಸಿನ ಅಂತರವಿದೆ. ಅಂದಹಾಗೆ, ಒಮರ್ ಅಬ್ದುಲ್ಲಾ ಅವರಿಗೆ ಇದು ಎರಡನೇ ಮದುವೆ. 1994ರಲ್ಲಿ ಪಾಯಲ್ ನಾಥ್ ಅವರನ್ನು ವಿವಾಹವಾಗಿದ್ದರು. ಈ ದಾಂಪತ್ಯಕ್ಕೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬಳಿಕ ಇವರ ವೈವಾಹಿಕ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
 

ಇನ್ನು ಜುಲೈ 31, 2026ರಂದು ಸುಪ್ರೀಂ ಕೋರ್ಟ್ ಇಬ್ಬರ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಇದೀಗ ಒಮರ್ ಅಬ್ದುಲ್ಲಾ ತಮ್ಮ ಬದುಕಿನ ಹೊಸ ಪಯಣ ಆರಂಭಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಮತ್ತು ಸಿನಿಮಾ ವಲಯದಾಚೆಗೂ ಭಾರೀ ಚರ್ಚೆಯಾಗುತ್ತಿದೆ.ಈ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆಯಾಗುತ್ತಿದೆ. ಒಮರ್ ಅಬ್ದುಲ್ಲಾ ಅವರು ಮಾರ್ಚ್ 10, 1970ರಲ್ಲಿ ಜನಿಸಿದ್ದು, ಅವರಿಗೆ 56 ವರ್ಷ. ನಿಧಿ ರಜ್ದಾನ್ ಅವರು ಏಪ್ರಿಲ್ 11, 1977ರಲ್ಲಿ ಜನಿಸಿದ್ದು, ಅವರಿಗೆ 49 ವರ್ಷ. ಇಬ್ಬರ ನಡುವೆ ಏಳು ವರ್ಷಗಳ ವಯಸ್ಸಿನ ಅಂತರವಿದೆ. ಅಂದಹಾಗೆ, ಒಮರ್ ಅಬ್ದುಲ್ಲಾ ಅವರಿಗೆ ಇದು ಎರಡನೇ ಮದುವೆ. 1994ರಲ್ಲಿ ಪಾಯಲ್ ನಾಥ್ ಅವರನ್ನು ವಿವಾಹವಾಗಿದ್ದರು. ಈ ದಾಂಪತ್ಯಕ್ಕೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 2009ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬಳಿಕ ಇವರ ವೈವಾಹಿಕ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಇನ್ನು ಜುಲೈ 31, 2026ರಂದು ಸುಪ್ರೀಂ ಕೋರ್ಟ್ ಇಬ್ಬರ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಇದೀಗ ಒಮರ್ ಅಬ್ದುಲ್ಲಾ ತಮ್ಮ ಬದುಕಿನ ಹೊಸ ಪಯಣ ಆರಂಭಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಮತ್ತು ಸಿನಿಮಾ ವಲಯದಾಚೆಗೂ ಭಾರೀ ಚರ್ಚೆಯಾಗುತ್ತಿದೆ.
 

ಒಟ್ಟಿನಲ್ಲಿ, ರಾಜಕೀಯ ಬದುಕಿನ ಜೊತೆಗೆ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುವ ಒಮರ್ ಅಬ್ದುಲ್ಲಾ ಅವರ ಹೊಸ ಪಯಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

 

Add Zee News as a Preferred Source
TAGS:
India