• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /“ನೀನು ಹೆದರಬೇಡ ಪುಟ್ಟ, ನಾನು ಬರೋವರೆಗೂ ಮೌನವಾಗಿರು” – ವಿಜಯಲಕ್ಷ್ಮಿಗೆ ದರ್ಶನ್ ಧೈರ್ಯದ ಮಾತು?

“ನೀನು ಹೆದರಬೇಡ ಪುಟ್ಟ, ನಾನು ಬರೋವರೆಗೂ ಮೌನವಾಗಿರು” – ವಿಜಯಲಕ್ಷ್ಮಿಗೆ ದರ್ಶನ್ ಧೈರ್ಯದ ಮಾತು?

Darshan Vijayalakshmi Conversation: ದರ್ಶನ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಕುಟುಂಬವನ್ನು ನೋಡಿಕೊಳ್ಳುತ್ತಾ ಹೋರಾಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಅವರ ಆಪ್ತರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Written ByChetana Devarmani
Published: Oct 24, 2026, 01:29 PM IST|Updated: Oct 24, 2026, 01:37 PM IST
joinshare
“ನೀನು ಹೆದರಬೇಡ ಪುಟ್ಟ, ನಾನು ಬರೋವರೆಗೂ ಮೌನವಾಗಿರು” – ವಿಜಯಲಕ್ಷ್ಮಿಗೆ ದರ್ಶನ್ ಧೈರ್ಯದ ಮಾತು?

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಕೇವಲ ಐದು ಸಾವಿರ ರೂಪಾಯಿ ಆಸೆಗೆ ಕೊಲೆ; ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!

ಕೇವಲ ಐದು ಸಾವಿರ ರೂಪಾಯಿ ಆಸೆಗೆ ಕೊಲೆ; ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!

2

ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

3

ಸ್ಟಿಂಗ್ ಕಹಾನಿಯ ತನಿಖೆ ತೀವ್ರ.. ಆರೋಪಿ ಸೈಬರ್ ಪೊಲೀಸ್ ವಶಕ್ಕೆ

4

ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ

5

Lenovo ಲ್ಯಾಪ್‌ಟಾಪ್‌ ಮೇಲೆ 54% ಡಿಸ್ಕೌಂಟ್! ₹1.21 ಲಕ್ಷದ IdeaPad Slim 3 ಈಗ ₹55,990ಕ್ಕೆ ಖರೀದಿಸಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Darshan Thoogudeep talk with wife Vijayalakshmi : ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಕುರಿತ ಚರ್ಚೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ದೂರು ಪ್ರತಿದೂರುಗಳ ನಡುವೆಯೇ, ಪತ್ನಿಗೆ ಜೈಲಿನಿಂದಲೇ ನಟ ದರ್ಶನ್ ಧೈರ್ಯ ತುಂಬಿದ್ದಾರೆ ಎನ್ನಲಾದ ಸಂಭಾಷಣೆ ಗಮನ ಸೆಳೆದಿದೆ. “ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ, ನೀನು ಯಾರೆಂಬುದು ನನಗೆ ಗೊತ್ತು. ನೀನು ಹೆದರಬೇಡ ಪುಟ್ಟ. ಸಾವಿರ ಜನ ಸಾವಿರ ಮಾತುಗಳನ್ನು ಆಡಲಿ, ನೀನು ನಿನ್ನ ಕೆಲಸ ಮಾಡು. ನಾನು ಬರುವವರೆಗೂ ಮೌನವಾಗಿರು, ಎಲ್ಲಿಯೂ ಮಾತನಾಡಬೇಡ” ಎಂದು ದರ್ಶನ್ ವಿಜಯಲಕ್ಷ್ಮಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಅವರ ಆಪ್ತ ಮೂಲಗಳ ಹೇಳಿಕೆಯೆಂದು ಈ ಮಾಹಿತಿ ಪ್ರಸಾರವಾಗುತ್ತಿದೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದರ್ಶನ್‌ಗೆ ತಿಳಿದಿದೆ ಎಂದೂ ಆಪ್ತ ಮೂಲಗಳು ಹೇಳಿವೆ ಎನ್ನಲಾಗಿದೆ. ಆದರೆ ಈ ಸಂಭಾಷಣೆಯು ಅಧಿಕೃತವಾಗಿ ದೃಢಪಟ್ಟಿಲ್ಲ. ದರ್ಶನ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಕುಟುಂಬವನ್ನು ನೋಡಿಕೊಳ್ಳುತ್ತಾ ಹೋರಾಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಅವರ ಆಪ್ತರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪತಿ ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಪತ್ನಿ ಕುಗ್ಗಿ ಹೋಗಬೇಕೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇದರ ನಡುವೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆ ತಲುಪಿದೆ. ಅಕ್ಟೋಬರ್ 21 ರಂದು ಧನ್ವೀರ್ ಮನೆಗೆ ವಿಜಯಲಕ್ಷ್ಮಿ ಮತ್ತು ಅವರ ಮ್ಯಾನೇಜರ್ ನಾಗರಾಜ್ ತೆರಳಿದ್ದ ವೇಳೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಆರೋಪಗಳು ಕೇಳಿಬಂದಿವೆ.

ಆರ್‌ಆರ್ ನಗರ ಮತ್ತು ರಾಜಾಜಿನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ದೂರುಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳು ಮತ್ತು ಸಂದೇಶಗಳ ಪರಿಶೀಲನೆಯೂ ತನಿಖೆಯ ಭಾಗವಾಗುವ ಸಾಧ್ಯತೆಯಿದೆ. ದರ್ಶನ್ ನಿಜವಾಗಿಯೂ ವಿಜಯಲಕ್ಷ್ಮಿಗೆ ಈ ಮಾತುಗಳನ್ನು ಹೇಳಿದ್ದಾರೆಯೇ? ಸದ್ಯಕ್ಕೆ ಇದು ಆಪ್ತ ಮೂಲಗಳಿಗೆ ಸಂಬಂಧಿಸಿದ ವರದಿಯಷ್ಟೇ ಆಗಿದ್ದು, ದರ್ಶನ್ ಅಥವಾ ವಿಜಯಲಕ್ಷ್ಮಿ ಕಡೆಯಿಂದ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಪೊಲೀಸರ ತನಿಖೆ ಮತ್ತು ಸಂಬಂಧಪಟ್ಟವರ ಅಧಿಕೃತ ಪ್ರತಿಕ್ರಿಯೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

ಈ ಪ್ರಕರಣದ ಹಿನ್ನೆಲೆ ಏನು?

ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಅವರು ನಟ ಧನ್ವೀರ್ ಗೌಡ ಅವರ ಮನೆಗೆ ಕೆಲ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ತೆರಳಿದ್ದರಂತೆ. ಈ ಸಂದರ್ಭದಲ್ಲಿ ನಟ ಧನ್ವೀರ್ ಗೌಡ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ವಿಜಯಲಕ್ಷ್ಮಿ ಹಾಗೂ ನಾಗರಾಜ್ ಅವರು ಅಲ್ಲಿಂದ ವಾಪಸ್ ಬಂದಿದ್ದರಂತೆ.

ಮನೆಗೆ ಬಂದ ಬಳಿಕ ನಟ ಧನ್ವೀರ್ ಅವರು ನಾಗರಾಜ್ ಅವರಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ ಫೋನ್ ಸಂಭಾಷಣೆಯಲ್ಲಿ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಫೋನ್‌ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಬೇಸರಗೊಂಡಿರುವ ವಿಜಯಲಕ್ಷ್ಮಿ ದರ್ಶನ್ ಅವರ ಮ್ಯಾನೇಜರ್‌ ನಾಗರಾಜ್ ಅವರು ಆರ್. ಆರ್. ನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಆರ್.ಆರ್. ನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಧನ್ವೀರ್‌ ತಂದೆ ಕೂಡ ದೂರು ನೀಡಿದ್ದಾರೆ.  

Add Zee News as a Preferred Source
TAGS:
Sandalwood