SOCIAL MEDIA

Newsletter

PARTNER SITES
Select Language Select State

ಸೌಂದರ್ಯ ಶೆಟ್ಟಿ ಅಸಭ್ಯ ಪದ ಬಳಕೆ..! ಮಂಜನಿಗೆ ಆದ ಶಿಕ್ಷೆ ಇವರಿಗ್ಯಾಕಿಲ್ಲ..? ಪ್ರೇಕ್ಷಕರ ಅಸಮಾಧಾನ

ಇತ್ತೀಚೆಗಷ್ಟೇ ‘ಮಾಡ್ರನ್ ಮಹಾಕವಿ’ ಮಂಜು ಅವರನ್ನು ಅಶ್ಲೀಲ ಪದ ಬಳಕೆ ಕಾರಣಕ್ಕೆ ನೇರವಾಗಿ ‘ರೆಡ್ ಕಾರ್ಡ್’ ನೀಡಿ ಹೊರಹಾಕಿದ್ದ ಬಿಗ್ ಬಾಸ್, ಈಗ ಸ್ಪರ್ಧಿ ಸೌಂದರ್ಯ ಶೆಟ್ಟಿ ವಿಚಾರದಲ್ಲಿ ಮೌನ ವಹಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತಾರತಮ್ಯದ ಆರೋಪಕ್ಕೆ ಕಾರಣವಾಗಿದೆ. ಅಸಲಿಗೆ ಸೌಂದರ್ಯ ಬಾಯಿಂದ ಬಂದ ಆ ಕೆಟ್ಟ ಮಾತು ಯಾವುದು..? ಬೀಪ್‌ ಹಾಕಿದ್ದೇಕೆ.. ಇಲ್ಲಿದೆ ವರದಿ..

Written By Krishna NK
Published: Oct 20, 2026, 11:01 AM IST | Updated: Oct 20, 2026, 11:02 AM IST
Image Credit: bigg Boss soundarya shetty
Join

BBK 13 Soundarya Shetty : ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ನಲ್ಲಿ ಅಸಭ್ಯ ಪದಗಳ ಬಳಕೆ ಮತ್ತು ಬೀಪ್ ಶಬ್ದಗಳೇ ದಿನನಿತ್ಯದ ಕಥೆಯಾಗಿಬಿಟ್ಟಿವೆ. ಸ್ಪರ್ಧಿಗಳ ಮಾತಿಗೆ ಪದೇ ಪದೇ ಬೀಪ್ ಸೌಂಡ್‌ ಹಾಕಬೇಕಾದ ಪರಿಸ್ಥಿತಿ ಬಿಗ್ ಬಾಸ್ ತಂಡಕ್ಕೆ ಎದುರಾಗಿದೆ. ಇದರ ಬೆನ್ನಲ್ಲೇ ಶೋನಲ್ಲಿ ನಿಯಮ ಉಲ್ಲಂಘನೆ ಮತ್ತು ತಾರತಮ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು.. ಇತ್ತೀಚೆಗಷ್ಟೇ ‘ಮಾಡ್ರನ್ ಮಹಾಕವಿ’ ಮಂಜು ಅವರು ಸಹ ಸ್ಪರ್ಧಿ ಯಶಸ್ ಅವರಿಗೆ ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿದ್ದಾರೆಂಬ ಕಾರಣಕ್ಕಾಗಿ ನೇರವಾಗಿ 'ರೆಡ್ ಕಾರ್ಡ್' ನೀಡಿ ಮನೆಯಿಂದ ಹೊರಕಳುಹಿಸಲಾಗಿತ್ತು. ಶೋನಲ್ಲಿ ಸಭ್ಯ ಭಾಷೆ ಬಳಕೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಬಿಗ್ ಬಾಸ್ ತೆಗೆದುಕೊಂಡ ಈ ಕಠಿಣ ನಿರ್ಧಾರಕ್ಕೆ ಆರಂಭದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ, ಇದೀಗ ಅದೇ ರೀತಿಯ ಅಥವಾ ಅದಕ್ಕಿಂತ ಗಂಭೀರವಾದ ಪದ ಬಳಕೆಗಳನ್ನು ಮಾಡುತ್ತಿರುವ ಇತರ ಸ್ಪರ್ಧಿಗಳ ವಿಚಾರದಲ್ಲಿ ಬಿಗ್ ಬಾಸ್ ಮೌನ ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. "ಮಂಜನಿಗೆ ಮಾತ್ರ ಒಂದು ನ್ಯಾಯ, ಉಳಿದವರಿಗೆ ಮತ್ತೊಂದು ನ್ಯಾಯವೇ?" ಎಂಬ ಪ್ರಶ್ನೆಯನ್ನು ವೀಕ್ಷಕರು ಗಟ್ಟಿಯಾಗಿ ಮುಂದಿಡುತ್ತಿದ್ದಾರೆ.

ಸೌಂದರ್ಯ ಶೆಟ್ಟಿ ವಿರುದ್ಧ ಕೇಳಿಬಂದ ಗಂಭೀರ ಆರೋಪ
ಈ ವಾರದ ಸಂಚಿಕೆಯಲ್ಲಿ ಸ್ಪರ್ಧಿ ಸೌಂದರ್ಯ ಶೆಟ್ಟಿ ಅವರು ಗಗನ್ ಅವರೊಂದಿಗೆ ಮಾತನಾಡುವ ವೇಳೆ ಅಸಭ್ಯ ಪದವೊಂದನ್ನು ಬಳಸಿದ್ದಾರೆ ಎನ್ನಲಾಗಿದ್ದು, ಈ ದೃಶ್ಯಕ್ಕೆ ಬಿಗ್ ಬಾಸ್ ತಂಡವು ಬೀಪ್ (Beep) ಶಬ್ದ ಹಾಕಿ ಪ್ರಸಾರ ಮಾಡಿದೆ. ಈ ಹಿಂದೆ ಗಾನವಿ ಮತ್ತು ಗಗನ್ ಕೂಡ ಇಂತಹದ್ದೇ ಕಟು ಪದಗಳನ್ನು ಬಳಸಿದ್ದಾಗ ವಾರಾಂತ್ಯದ ಪಂಚಾಯಿತಿಯಲ್ಲಿ ಸ್ವತಃ ಕಿಚ್ಚ ಸುದೀಪ್ ಅವರೇ ಗಗನ್ ತಾಯಿಯ ಬಳಿ ಕ್ಷಮೆ ಕೋರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈಗ ಸೌಂದರ್ಯ ಶೆಟ್ಟಿ ಕೂಡ ಅದೇ ರೀತಿಯ ಪದ ಬಳಸಿದ್ದರೂ ಅವರಿಗೆ ಯಾವುದೇ ಗಂಭೀರ ಶಿಕ್ಷೆಯಾಗಲಿ ಅಥವಾ ರೆಡ್ ಕಾರ್ಡ್ ರೂಪದ ಕಠಿಣ ಕ್ರಮವಾಗಲಿ ಜರುಗಿಲ್ಲ ಎಂಬುದು ವೀಕ್ಷಕರ ಪ್ರಮುಖ ಆಕ್ಷೇಪವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶ
ಬಿಗ್ ಬಾಸ್‌ನ ಈ ನಡೆಗೆ ನೆಟ್ಟಿಗರು ಮತ್ತು ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. "ರೂಲ್ಸ್‌ಗಳು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿರಬೇಕು. ಮಂಜ ಒಬ್ಬ ಕಾಮನ್ ಮ್ಯಾನ್ ಎನ್ನುವ ಕಾರಣಕ್ಕೆ ಸುಲಭವಾಗಿ ರೆಡ್ ಕಾರ್ಡ್ ಕೊಟ್ಟು ಹೊರದಬ್ಬಿದ್ರಿ. ಆದರೆ ಸೆಲೆಬ್ರಿಟಿಗಳು ಅಥವಾ ಪ್ರಭಾವಿ ಸ್ಪರ್ಧಿಗಳು ಅಂತಹದ್ದೇ ಅಥವಾ ಅದಕ್ಕಿಂತ ಕೆಟ್ಟ ಪದಗಳನ್ನು ಬಳಸಿದರೂ ಅವರಿಗೆ ಯಾಕೆ ಕಠಿಣ ಶಿಕ್ಷೆ ಇಲ್ಲ?" ಎಂದು ಸಾಲು ಸಾಲು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ.. ಬಿಗ್ ಬಾಸ್ ಮನೆಯಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಭಾಷೆಯ ಮಿತಿ ಮೀರುತ್ತಿರುವ ಈ ಸಂದರ್ಭದಲ್ಲಿ, ಮುಂದಿನ ವಾರದ ಸಂಚಿಕೆಯಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ನಿರೂಪಕ ಸುದೀಪ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೌಂದರ್ಯ ಶೆಟ್ಟಿ ಅಥವಾ ಇತರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES