• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ನಾಳೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್‌ 23 ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ

ನಾಳೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್‌ 23 ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ

ವಿಧಾನ ಪರಿಷತ್‌ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಅಕ್ಟೋಬರ್‌ 21ರಿಂದ ಅಕ್ಟೋಬರ್‌ 23ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.

Written ByYashaswini V
Published: Oct 20, 2026, 12:26 PM IST|Updated: Oct 20, 2026, 12:29 PM IST
joinshare
ನಾಳೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್‌ 23 ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಟೈಗರ್ ಶ್ರಾಫ್ ಮನೆ ಮೇಲೆ ಗುಂಡಿನ ದಾಳಿ.. ರ್ಯಾಪಿಡೊ ರೈಡರ್ ಆಗಿದ್ದ ಆರೋಪಿ ಮಾಡಿದ್ದೇನು?

ಟೈಗರ್ ಶ್ರಾಫ್ ಮನೆ ಮೇಲೆ ಗುಂಡಿನ ದಾಳಿ.. ರ್ಯಾಪಿಡೊ ರೈಡರ್ ಆಗಿದ್ದ ಆರೋಪಿ ಮಾಡಿದ್ದೇನು?

2

ನಾಳೆ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್‌ 23 ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ

3

ಮಗಳಿಗೆ 18 ವರ್ಷ ತುಂಬಿದ ಬಳಿಕ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಫುಲ್‌ ಹಣ ಹಿಂಪಡೆಯಬಹುದೇ?

4

ಸೌಂದರ್ಯ ಶೆಟ್ಟಿ ಅಸಭ್ಯ ಪದ ಬಳಕೆ..! ಮಂಜನಿಗೆ ಆದ ಶಿಕ್ಷೆ ಇವರಿಗ್ಯಾಕಿಲ್ಲ..? ಪ್ರೇಕ್ಷಕರ ಅಸಮಾಧಾನ

5

ಬೆಂಗಳೂರಿನಲ್ಲಿ ಇಂದು ತುಂತುರು ಮಳೆ.. ಕೆಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯದಲ್ಲಿ ಮುಂಬರುವ ಕರ್ನಾಟಕ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್‌ 21ರಿಂದ ಅಕ್ಟೋಬರ್‌ 23ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಎಂಎಲ್‌ಸಿ ಚುನಾವಣೆಗೆ ಮತದಾನ ಹಿನ್ನಲೆಯಲ್ಲಿ ಮದ್ಯ ನಿಷೇಧ;
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಹಾಗೂ ಕರ್ನಾಟಕ ದಕ್ಷಿಣ ಪೂರ್ವ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಮತದಾನದ ಹಿನ್ನಲೆಯಲ್ಲಿ 21-10-26 ಬೆಳಿಗ್ಗೆ 6 ಗಂಟೆಯಿಂದ 23-10-26 ಸಂಜೆ 4 ಗಂಟೆಯವರೆಗೆ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಎಂಎಲ್‌ಸಿ ಚುನಾವಣೆ: ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?
ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಕೇಂದ್ರ ವಿಭಾಗ, ಪೂರ್ವ ವಿಭಾಗ, ಪಶ್ಚಿಮ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಆಗ್ನೇಯ ವಿಭಾಗ, ನೈಋತ್ಯ ವಿಭಾಗ, ವಾಯುವ್ಯ ವಿಭಾಗ, ಈಶಾನ್ಯ ವಿಭಾಗ, ವೈಟ್‌ಫೀಲ್ಡ್‌ ಪ್ರದೇಶ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ 
ಬೆಂಗಳೂರು ನಗರ ಕಮೀಷನರೇಟ್ ನ 11 ವಿಭಾಗದ ಈ ಕೆಳಕಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಜಾರಿಯಲ್ಲಿರಲಿದೆ ಎನ್ನಲಾಗಿದೆ.

ಕೇಂದ್ರ ವಿಭಾಗ: 
* ಹೈಗ್ರೌಂಡ್ಸ್ 
* ಕಬ್ಬನ್ ಪಾರ್ಕ್ 
* ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿ

ಪೂರ್ವ ವಿಭಾಗ:
* ಪುಲಿಕೇಶಿನಗರ 
* ಗೋವಿಂದಪುರ

ಪಶ್ಚಿಮ ವಿಭಾಗ: 
* ಚಾಮರಾಜಪೇಟೆ 
* ವಿಜಯನಗರ 
* ಗೋವಿಂದರಾಜನಗರ 
* ಅನ್ನಪೂರ್ಣೇಶ್ವರಿ ನಗರ

ಉತ್ತರ ವಿಭಾಗ: 
* ರಾಜಾಜಿನಗರ 
* ಮಲ್ಲೇಶ್ವರ 
* ಸುಬ್ರಹ್ಮಣ್ಯನಗರ 
* ಹೆಬ್ಬಾಳ

ದಕ್ಷಿಣ ವಿಭಾಗ: 
* ವಿವಿ ಪುರ 
* ಹನುಮಂತನಗರ
* ಜಯನಗರ

ಆಗ್ನೇಯ ವಿಭಾಗ: 
* ಕೋರಮಂಗಲ 
* ಹೆಚ್ ಎಸ್ ಆರ್ ಲೇಔಟ್

ನೈರುತ್ಯ ವಿಭಾಗ: 
* ಕೆಂಗೇರಿ 
* ಸುಬ್ರಹ್ಮಣ್ಯ ಪುರ 
* ಕೋಣನಕುಂಟೆ

ವಾಯುವ್ಯ ವಿಭಾಗ: 
* ಬ್ಯಾಡರಹಳ್ಳಿ 
* ಬಾಗಲಗುಂಟೆ

ಈಶಾನ್ಯ ವಿಭಾಗ: 
* ದೇವನಹಳ್ಳಿ 
* ಅಮೃತಹಳ್ಳಿ 
* ಯಲಹಂಕ

ವೈಟ್‌ಫೀಲ್ಡ್‌ ವಿಭಾಗ:
* ಕೆ ಆರ್ ಪುರ

ಎಲೆಕ್ಟ್ರಾನಿಕ್ ಸಿಟಿ: 
* ಎಲೆಕ್ಟ್ರಾನಿಕ್ ಸಿಟಿ 
* ಬೇಗೂರು

ಮತ ಎಣಿಕೆ ದಿನವೂ ಡ್ರೈ ಡೇ:
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಹಾಗೂ ಕರ್ನಾಟಕ ದಕ್ಷಿಣ ಪೂರ್ವ ಪದವೀಧರರ ಕ್ಷೇತ್ರದ 
ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ಹಿನ್ನಲೆಯಲ್ಲಿ, ಹಲಸೂರ್‌ ಗೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್‌ 27ರ ಬೆಳಿಗ್ಗೆ 6 ಗಂಟೆಯಿಂದ ಆ ದಿನ ರಾತ್ರಿ 11:59 ರವರೆಗಗೂ ಮದ್ಯ ನಿಷೇಧ ದಿನ (ಡ್ರೈ ಡೇ) ಜಾರಿಯಲ್ಲಿ ಇರಲಿದೆ ಎಂದು ತಿಳಿದುಬಂದಿದೆ. 
 

 

Add Zee News as a Preferred Source
TAGS:
Kannada News