ಮಂಜನ ಕ್ಯಾರೆಕ್ಟರ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಂಗೀತಾ..! ಏಕಾಏಕಿ ಹೀಗಾ ಅನ್ನೋದು..
ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿರುವ ಮಾಡ್ರನ್ ಮಹಾಕವಿ ಮಂಜು ಅವರ ಬಗ್ಗೆ ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಮಂಜು ಸಂಪೂರ್ಣ ಕೆಟ್ಟ ವ್ಯಕ್ತಿಯಲ್ಲ ಎಂದು ಸಮರ್ಥಿಸಿಕೊಂಡಿರುವ ಅವರು, ಅವರ ವರ್ತನೆ ಹಾಗೂ ಆಟದ ಹಿಂದಿನ ಕಾರಣಗಳನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Sangeetha Bhat on Manja : ಬಿಗ್‌ಬಾಸ್ ಮನೆಯಿಂದ ತಮ್ಮ ನಡವಳಿಕೆ ಹಾಗೂ ಹುಟ್ಟುಹಬ್ಬದ ದಿನವೇ ಹೊರಬಂದಿರುವ ಮಾಡ್ರನ್ ಮಹಾಕವಿ ಮಂಜು ಬಗ್ಗೆ ನಟಿ ಸಂಗೀತಾ ಭಟ್ ಮಾತನಾಡಿದ್ದು, ಅವರು ಸಂಪೂರ್ಣ ಕೆಟ್ಟ ವ್ಯಕ್ತಿಯಲ್ಲ ಅಂತ ಹೊಗಳಿದ್ದಾರೆ, ಅಲ್ಲದೆ, ಮಂಜು ಅವರ ವ್ಯಕ್ತಿತ್ವ ಹಾಗೂ ಆಟದ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಅಭದ್ರತೆಯ ಭಾವನೆ ಕಾರಣ
ಮಂಜು ಬಿಗ್‌ಬಾಸ್ ಮನೆಗೆ ಕಾಲಿಟ್ಟಾಗ ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟೀಸ್ ಎಂಬ ವಿಂಗಡಣೆ ಇದ್ದುದರಿಂದ ಅವರಿಗೆ ಗೊಂದಲ ಮತ್ತು ಅಭದ್ರತೆಯ ಭಾವನೆ ಕಾಡಿರಬಹುದು ಎಂದು ಸಂಗೀತಾ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ ಮತ್ತು ತಪ್ಪು ಮಾಡಿದವರಿಗೆ ಮತ್ತೊಂದು ಅವಕಾಶ ನೀಡಿ ಗಮನಿಸಬೇಕಿತ್ತು ಎಂದಿದ್ದಾರೆ.
ಭಾವನೆ ಹಾಗೂ ಅರಿವು ಇರುವ ವ್ಯಕ್ತಿ
ಮಂಜು ಕಂಪ್ಲೀಟ್ ಆಗಿ ಬ್ಯಾಡ್ ಸೈಡ್ ಅಲ್ಲ ಎಂದು ಹೇಳಿರುವ ಅವರು, ಒಬ್ಬ ವ್ಯಕ್ತಿ ಸಂಪೂರ್ಣ ಕೆಟ್ಟವರಾಗಿದ್ದರೆ ಅವರಿಗೆ ಯಾವುದೇ ಅರಿವು ಅಥವಾ ಭಾವನೆಗಳು ಇರುವುದಿಲ್ಲ ಎಂದಿದ್ದಾರೆ. ಆದರೆ ಮಂಜು ಬಳಿ ಆ ಎರಡೂ ಗುಣಗಳಿದ್ದವು ಎಂದು ತಾವು ವೈಯಕ್ತಿಕವಾಗಿ ಮಾತನಾಡುವಾಗ ಗಮನಿಸಿದ್ದಾಗಿ ತಿಳಿಸಿದ್ದಾರೆ.
ಗೌರವಯುತ ವರ್ತನೆ ಮತ್ತು ತಪ್ಪುಗಳ ಅರಿವು
ತಮಗೆ ಗೌರವ ನೀಡುವ ಸ್ಪರ್ಧಿಗಳ ಜೊತೆ ಮಂಜು ಎಂದಿಗೂ ಕೆಟ್ಟ ಪದಗಳನ್ನು ಬಳಸಿಲ್ಲ ಎಂದು ಸಂಗೀತಾ ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಸೂಚಿಸಿದ ಟಾಸ್ಕ್‌ಗಳ ಸಂದರ್ಭದಲ್ಲಿ ಹಾಗೂ ಉಸ್ತುವಾರಿಯಾದಾಗ ಅವರು ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಅಂತಿಮವಾಗಿ ಮನೆಯಿಂದ ಹೊರಬರುವಾಗ ತಾವೇನು ತಪ್ಪು ಮಾಡಿದ್ದೇವೆ ಎಂಬ ಅರಿವು ಅವರಿಗೆ ಮೂಡಿದೆ ಎಂದು ಹೇಳಿದ್ದಾರೆ.