SOCIAL MEDIA

Newsletter

PARTNER SITES
Select Language Select State

ಅವಳ ಮಡಿಲಲ್ಲಿ ಕುಳಿತುಕೊಳ್ಳೋಕೆ ನಾಚಿಕೆಯಾಗಲ್ವಾ? ಬಿಗ್‌ಬಾಸ್‌ ಮನೆಯಲ್ಲಿ ಅಣ್ಣ-ತಂಗಿ ಸಂಬಂಧಕ್ಕೆ ಹೊಸ ಟ್ವಿಸ್ಟ್‌!

Bigg boss: ಬಿಗ್‌ಬಾಸ್‌ ಮನೆಯಲ್ಲಿ ಲವ್ವಡವ್ವಿ ಹಾಗೂ ಈ ಎರಡು ಸ್ಪರ್ಧಿಗಳ ಅಸಭ್ಯ ವರ್ತನೆಗೆ ಬ್ರೇಕ್‌ ಹಾಕಲಾಗಿದೆ.. ಬಿಗ್‌ಬಾಸ್‌ ವೇದಿಕೆಯಿಂದಲ್ಲೇ ಖಕ್‌ ಆಗಿ ಕ್ಲಾಸ್‌ ತೆಗೆದುಕೊಳ್ಳಲಾಗಿದೆ.

Written By Ramya. R. Gowda
Published: Oct 26, 2026, 02:15 PM IST | Updated: Oct 26, 2026, 02:31 PM IST
Join

Bigg boss : ಬಿಗ್‌ಬಾಸ್ ಮನೆಯಲ್ಲಿ ಸ್ಕೌಟ್ ಒಪಿ ಮತ್ತು ಲವ್ ಗಿಲ್ ನಡುವಿನ ನಿಕಟತೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಬ್ಬರೂ ಪರಸ್ಪರ ಅಣ್ಣ-ತಂಗಿ, ಸಹೋದರ-ಸಹೋದರಿ ಎಂದು ಹೇಳಿಕೊಳ್ಳುತ್ತಿದ್ದರೂ, ಅವರ ವರ್ತನೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದೀಗ ವೀಕೆಂಡ್ ಕಾ ವಾರ್‌ನಲ್ಲಿ ಎಂಟ್ರಿ ಕೊಟ್ಟ ನಿರ್ದೇಶಕ ರೋಹಿತ್ ಶೆಟ್ಟಿ, ಇಬ್ಬರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ವರ್ತನೆಯಿಂದ ಯಾವ ರೀತಿಯ ಸಂದೇಶ ರವಾನೆಯಾಗುತ್ತಿದೆ ಎಂಬುದನ್ನು ಯೋಚಿಸುವಂತೆ ಮಾಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಸ್ನೇಹ, ಪ್ರೀತಿ, ಜಗಳದ ಜೊತೆಗೆ ಸಂಬಂಧಗಳ ವಿಚಾರವೂ ಸದ್ದು ಮಾಡ್ತಿದೆ. ಅದರಲ್ಲೂ ಸ್ಕೌಟ್ ಒಪಿ ಮತ್ತು ಲವ್ ಗಿಲ್ ನಡುವಿನ ಬಾಂಧವ್ಯ ವೀಕ್ಷಕರ ಗಮನ ಸೆಳೆದಿದೆ. ಇಬ್ಬರೂ ತಮ್ಮ ಸಂಬಂಧವನ್ನು ಸಹೋದರ-ಸಹೋದರಿಯರ ಬಾಂಧವ್ಯ ಎಂದು ಹೇಳಿಕೊಂಡಿದ್ದಾರೆ. ಆದ್ರೆ, ಅವರ ನಡುವಿನ ಕೆಲ ವರ್ತನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಇದೀಗ ಇದೇ ವಿಚಾರ ವೀಕೆಂಡ್ ಕಾ ವಾರ್ ವೇದಿಕೆಯಲ್ಲೂ ಪ್ರಸ್ತಾಪವಾಗಿದೆ.

ಈ ವಿಚಾರವನ್ನು ಪ್ರಸ್ತಾಪಿಸಿದ ರೋಹಿತ್ ಶೆಟ್ಟಿ, ಮೊದಲು ಲವ್ ಗಿಲ್‌ಗೆ ನೇರ ಪ್ರಶ್ನೆ ಕೇಳಿದ್ದಾರೆ. “ಲವ್, ನಿನಗೆ ಸ್ಕೌಟ್ ಯಾರು?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಲವ್, “ಅವನು ನನ್ನ ಸಹೋದರ” ಎಂದು ಉತ್ತರಿಸಿದ್ದಾನೆ. ಬಳಿಕ, “ನೀನು ಅವನನ್ನು ಎಷ್ಟು ಪ್ರೀತಿಸುತ್ತೀಯಾ? ಅವನಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೀಯಾ?” ಎಂದು ಕೇಳಿದ್ದಾರೆ. ಲವ್ ಕೂಡ ಹೌದು ಎಂದು ಉತ್ತರಿಸಿದ್ದಾನೆ. ಇಲ್ಲಿಗೆ ನಿಲ್ಲದ ರೋಹಿತ್ ಶೆಟ್ಟಿ, ಇಬ್ಬರ ವರ್ತನೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಈ ಹಿಂದೆ ಈ ವಿಚಾರದ ಬಗ್ಗೆ ಸುಳಿವು ನೀಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. ಸ್ಕೌಟ್ ಒಪಿ ಲವ್ ಗಿಲ್‌ಗೆ ಕಾಲು, ಕೈ ಅಥವಾ ಕುತ್ತಿಗೆ ಒತ್ತುವಂತಹ ವರ್ತನೆ ತೋರಿದಾಗ ಅದು ವೀಕ್ಷಕರಿಗೆ ತಪ್ಪು ಸಂದೇಶ ನೀಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

“ಲವ್, ನೀನೂ ಒಬ್ಬ ಹುಡುಗಿ. ನಿಮ್ಮ ವರ್ತನೆಯಿಂದ ತಪ್ಪು ಇಮೇಜ್ ಸೃಷ್ಟಿಯಾಗಬಾರದು. ಆದರೆ, ಈಗ ಅಂತಹ ಇಮೇಜ್ ಸೃಷ್ಟಿಯಾಗುತ್ತಿದೆ” ಎಂಬ ಅರ್ಥದಲ್ಲಿ ರೋಹಿತ್ ಶೆಟ್ಟಿ ಇಬ್ಬರಿಗೂ ಕಿವಿಮಾತು ಹೇಳಿದ್ದಾರೆ. ತಮ್ಮ ಮಾತುಗಳನ್ನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ ಎಂದೂ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮನೆಯೊಳಗಿನ ತಮ್ಮ ವರ್ತನೆ ಮತ್ತು ಅದರ ಪರಿಣಾಮದ ಬಗ್ಗೆ ಇಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.


ಒಟ್ಟಿನಲ್ಲಿ, ಸ್ಕೌಟ್ ಒಪಿ ಮತ್ತು ಲವ್ ಗಿಲ್ ನಡುವಿನ ನಿಕಟತೆಯ ವಿಚಾರ ಇದೀಗ ಬಿಗ್‌ಬಾಸ್ ಮನೆಯ ಪ್ರಮುಖ ಚರ್ಚೆಯಾಗಿದೆ. ರೋಹಿತ್ ಶೆಟ್ಟಿಯ ಈ ಖಡಕ್ ಮಾತುಗಳಿಗೆ ಇಬ್ಬರೂ ಹೇಗೆ ಪ್ರತಿಕ್ರಿಯಿಸುತ್ತಾರೆ? ಮುಂದಿನ ದಿನಗಳಲ್ಲಿ ಅವರ ನಡುವಿನ ಬಾಂಧವ್ಯದಲ್ಲಿ ಬದಲಾವಣೆಯಾಗುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES