• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /"ನನಗೆ ಆ ಯಮ್ಮ ಡೈರೆಕ್ಟ್‌ ಫೋನ್‌ ಮಾಡ್ಲಿ ಸರ್‌.. ದುಡ್ಡು ತಂದು ಬಿಸಾಕ್ತೀನಿ” – ಧನ್ವೀರ್‌ ಆಡಿಯೋ ವೈರಲ್

"ನನಗೆ ಆ ಯಮ್ಮ ಡೈರೆಕ್ಟ್‌ ಫೋನ್‌ ಮಾಡ್ಲಿ ಸರ್‌.. ದುಡ್ಡು ತಂದು ಬಿಸಾಕ್ತೀನಿ” – ಧನ್ವೀರ್‌ ಆಡಿಯೋ ವೈರಲ್

Actor Dhanveer Audio Viral: ನಟಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್‌ ನಡುವಿನ ಹಣಕಾಸಿನ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ಯಾ..? ಧನ್ವೀರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಲಭ್ಯವಾಗಿದ್ದು, ಅದರಲ್ಲಿ ಹಣದ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ.

Written ByRamya. R. Gowda
Published: Oct 26, 2026, 04:40 PM IST|Updated: Oct 26, 2026, 05:07 PM IST
joinshare
"ನನಗೆ ಆ ಯಮ್ಮ ಡೈರೆಕ್ಟ್‌ ಫೋನ್‌ ಮಾಡ್ಲಿ ಸರ್‌.. ದುಡ್ಡು ತಂದು ಬಿಸಾಕ್ತೀನಿ” – ಧನ್ವೀರ್‌ ಆಡಿಯೋ ವೈರಲ್

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಕಬ್ಬು ಬೆಳೆಗಾರರ ಸಭೆ: ಬೆಳಗಾವಿಯ ಸುವರ್ಣಸೌಧದಲ್ಲೇ ಹೊಡೆದಾಡಿಕೊಂಡ ರೈತರು!

ಕಬ್ಬು ಬೆಳೆಗಾರರ ಸಭೆ: ಬೆಳಗಾವಿಯ ಸುವರ್ಣಸೌಧದಲ್ಲೇ ಹೊಡೆದಾಡಿಕೊಂಡ ರೈತರು!

2

ಮದುವೆಯಾದ ಐದೇ ದಿನಕ್ಕೆ ನವವಿವಾಹಿತರು ಭೀಕರ ಅಪಘಾತದಲ್ಲಿ ಸಾವು

3

8000mAh ಬ್ಯಾಟರಿ, 90Hz ಡಿಸ್‌ಪ್ಲೇ! ಬಜೆಟ್‌ ಬೆಲೆಗೆ ಹಾನರ್‌ನ ಹೊಸ ಮಿನಿ ಟ್ಯಾಬ್ಲೆಟ್ ಬಿಡುಗಡೆ

4

"ನನಗೆ ಆ ಯಮ್ಮ ಡೈರೆಕ್ಟ್‌ ಫೋನ್‌ ಮಾಡ್ಲಿ ಸರ್‌.. ದುಡ್ಡು ತಂದು ಬಿಸಾಕ್ತೀನಿ” – ಧನ್ವೀರ್‌ ಆಡಿಯೋ ವೈರಲ್

5

ಇನ್‌ಸ್ಟಾದಲ್ಲಿ ಶ್ರೀಮಂತಿಕೆಯ ನಾಟಕ! 20 ಮಹಿಳಾ ಪೊಲೀಸರಿಗೆ ಮದುವೆ ಆಸೆ ತೋರಿಸಿ ₹24 ಲಕ್ಷ ನಾಮ ಹಾಕಿದ ಚೋರ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 ನಟಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್‌ ನಡುವಿನ ಹಣಕಾಸಿನ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ಯಾ..? ಧನ್ವೀರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಲಭ್ಯವಾಗಿದ್ದು, ಅದರಲ್ಲಿ ಹಣದ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ. “ನಾನು ದುಡ್ಡು ಕೊಡಲ್ಲ ಅಂತ ಹೇಳಿಲ್ಲ.. ಯಾರ ಮನೆಯ ಜೀತದ ಆಳೂ ನಾನಲ್ಲ” ಎಂದು ಧನ್ವೀರ್‌ ಹೇಳಿದ್ದಾರೆ ಎನ್ನಲಾದ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. ಹಾಗಾದ್ರೆ ಆ ಆಡಿಯೋದಲ್ಲೇನಿದೆ..? ಹಣದ ವಿಚಾರವಾಗಿ ಧನ್ವೀರ್‌ ಹೇಳಿದ್ದೇನು..? ನೋಡೋಣ ಈ ಎಕ್ಸ್‌ಕ್ಲ್ಯೂಸಿವ್‌ ವರದಿಯಲ್ಲಿ

 ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್‌ ನಡುವಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಹೊಸ ಬೆಳವಣಿಗೆ ನಡೆದಿದೆ. ಧನ್ವೀರ್‌ ಅವರದ್ದು ಎನ್ನಲಾಗಿರುವ ಆಡಿಯೋವೊಂದು ಲಭ್ಯವಾಗಿದೆ. ಈ ಆಡಿಯೋದಲ್ಲಿ ಹಣದ ವಿಚಾರವಾಗಿ ಮಾತನಾಡಿರುವ ಧ್ವನಿ ಕೇಳಿಬಂದಿದೆ ಎನ್ನಲಾಗಿದೆ.ಹಣ ವಾಪಸ್‌ ನೀಡುವ ವಿಚಾರ ಪ್ರಸ್ತಾಪವಾಗಿದ್ದು, “ನಾನು ದುಡ್ಡು ಕೊಡಲ್ಲ ಅಂತ ಹೇಳಿಲ್ಲ” ಎಂದು ಧನ್ವೀರ್‌ ಹೇಳಿದ್ದಾರೆ ಎನ್ನಲಾದ ಮಾತುಗಳು ಗಮನ ಸೆಳೆದಿವೆ.

ಹೌದು.. ಧನ್ವೀರ್ ಹಾಗೂ ದರ್ಶನ್ ಅತ್ಯಾಪ್ತ ಗೆಳೆಯರು.ವಿಜಯಲಕ್ಷ್ಮೀ ಜೊತೆಗೆ ಕೂಡ ಅಷ್ಟೇ ಆತ್ಮೀಯತೆಯಿಂದ ಇದ್ದ ಬಜಾರ್ ಹುಡುಗನನ್ನು ವಿಜಯಲಕ್ಷ್ಮೀ ಕೂಡ ಧನ್ವೀರ್ ನನ್ನ ತನ್ನ ಮನೆ ಸದಸ್ಯನಂತೆ ಕಾಣ್ತಿದ್ರು.ಆದ್ರೆ ಈಗ ಎಲ್ಲವು ಮೊದಲಿನಂತಿಲ್ಲ..ಆತ್ಮೀಯತೆ,ನಂಬಿಕೆ,ಪ್ರೀತಿ,ಕಾಳಜಿ ಅನ್ನೋದು ಮುಗಿದೋದ ಅಧ್ಯಾಯ.ಈಗೇನಿದ್ರು ಬರೀ ಕೋಪ,ಜಗಳ,ವೈಮನಸ್ಸು ಇಷ್ಟಕ್ಕೆಲ್ಲಾ ಕಾರಣ 10 ಕೋಟಿ ಹಣ ಅನ್ನೋ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ..

‎ಆಗಿದ್ದೇನಂದ್ರೆ ನಟ ದರ್ಶನ್ ಜೈಲು ಸೇರಿದ ಬಳಿಕ ದರ್ಶನ್ ಮನೆ ಪೊಲೀಸರ ಅತಿಥಿ ಗೃಹದಂತಾಗಿತ್ತು. ಮನೆ ಪರಿಶೀಲನೆ ಅಂತಾ ಆಗಾಗ ಹೋಗಿ ಬರ್ತಿದ್ರು.ಇದರಿಂದ ಹೆದರಿದ್ದ ವಿಜಯಲಕ್ಷ್ಮೀ ಮನೆಯಲ್ಲಿದ್ದ 10 ಕೋಟಿ ಹಣವನ್ನು ಧನ್ವೀರ್ ಗೆ ನೀಡಿದ್ದರಂತೆ..ಇದನ್ನು ಇಟ್ಟುಕೊ ಪೊಲೀಸರಿಗೆ ಹಣ ಇರೋ ಸಂಗತಿ ಗೊತ್ತಾದರೆ ಕಷ್ಟವಾಗುತ್ತೆ..ಎಲ್ಲಾ ಸರಿ ಆದಮೇಲೆ ತೆಗೆದುಕೊಳ್ತಿನಿ ಅಂತಾ ಹೇಳಿದ್ರಂತೆ..ಆದ್ರೆ ಹಣ ಪಡೆದ ಧನ್ವೀರ್ ವಾಪಸ್ಸು ಕೊಡೊ ಮನಸ್ಸು ಮಾಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ..ಕೇಳಿದ್ರೆ ಧಮ್ಕಿ ಹಾಕೋದು,ಫೋನ್ ರಿಸೀವ್ ಮಾಡದೇ ಇರೋದು ಮಾಡ್ತಿದ್ದನಂತೆ..ಅಲ್ಲದೆ ಅಣ್ಣ ಅಂದ್ರೆ ದರ್ಶನ್ ಹೇಳಿದ್ರೆ ಹಣ ಕೊಟ್ಟು ಬಿಡ್ತಿನಿ ಅಂದಿದ್ದನಂತೆ..ಹೇಗೆ ಹೇಳ್ತಾ ಕಾಲಾಹರಣ ಮಾಡುತ್ತಿದ್ದಿದ್ದಾಗಿ ಗೊತ್ತಾಗಿದೆ..

ಇದೇ ವಿಚಾರ ಪದೇ ಪದೇ ಪ್ರಸ್ತಾಪವಾಗಿದ್ದು ವಿಜಯದಶಮಿ ದಿನ ಧನ್ವೀರ್ ತಂದೆ ತಿಮ್ಮೇಗೌಡಗೆ ಮೆಸೆಜ್ ಮಾಡಿ ವಿಜಯಲಕ್ಷ್ಮೀ ಮನೆಗೆ ಬಂದು ಹಣ ಕೇಳಿದ್ದಾರೆ..ಈ ವೇಳೆ ಗಲಾಟೆ ತೆಗೆದಿದ್ದು,ಅವ್ರು ತೆರಳಿದ ಬಳಿಕ ಧನ್ವೀರ್ ವಿಜಯಲಕ್ಷ್ಮೀ ಮ್ಯಾನೆಜರ್ ನಾಗರಾಜ್ ಗೆ ಕರೆ ಮಾಡಿ ಮನ ಬಂದಂತೆ ನಿಂದಿಸಿದ್ದಾರೆ..ಇದು ಸರಿಯಾದ ನಡತೆ ಅಲ್ಲಾ ಅಂತಾ ವೇಲು ನಾಯ್ಕರ್ ಆರೋಪಿಸಿದ್ದು,ಧನ್ವೀರ್ ಸಾಕಷ್ಟು ಜನರಿಂದ ಹಣ ಪಡೆದುಕೊಂಡಿದ್ದಾನೆ..ವಾಪಸ್ಸು ಕೇಳಿದ್ರೆ ಕೇರಳಿಬಿಡ್ತಾನೆ ಅಂತಾ ಗಂಭೀರ ಆರೋಪವನ್ನೇ ವೇಲು ನಾಯಕರ್ ಮಾಡಿದ್ದಾರೆ.

ಆದ್ರೀಗ ಧನ್ವೀರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗ್ತಿದ್ದು,ಅದರಲ್ಲಿ ಹಣದ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ. “ನಾನು ದುಡ್ಡು ಕೊಡಲ್ಲ ಅಂತ ಹೇಳಿಲ್ಲ.. ಯಾರ ಮನೆಯ ಜೀತದ ಆಳೂ ನಾನಲ್ಲ” ಎಂದು ಆಡಿಯೋದಲ್ಲಿದೆ
 

 

ಧನ್ವೀರ್‌ದು ಎನ್ನಲಾದ ಆಡಿಯೋದಲ್ಲಿ ಏನಿದೆ?
*ಯಾವುದೇ ಕಾರಣಕ್ಕೂ ನಾನ್‌ ಬಿಡಲ್ಲ ಸರ್‌.. ಬಿಡಲ್ಲ..!
*ದುಡ್ಡಾ.. ಫೋನ್‌ ಮಾಡ್ಲಿ ಸರ್‌ ನನಗೆ.... 
*ಫೋನ್‌ ಮಾಡಿ ನನಗೆ, ಧನ್ವೀರ್‌ ತಂದು ದುಡ್ಡು ಇಡಪ್ಪಾ ಅನ್ಲಿ 
*ತೆಗೆದುಕೊಂಡು ಹೋಗಿ ದುಡ್ಡು ಬಿಸಾಕ್ತೀನಿ 
*ನಾನು ಏನೂ ಮಾತನಾಡಲ್ಲ, ಮತ್ತೆ ನೋಡಿ ಇದೆ ಆಟ..!
*ನನಗೆ ಆ ಯಮ್ಮ ಡೈರೆಕ್ಟ್‌ ಆಗಿ ಫೋನ್‌ ಮಾಡ್ಲಿ 
*ಫೋನ್‌ ಮಾಡಿ ಒಂದ್‌ ಮಾತು ಹೇಳೋದು ಹೆಂಗಿರುತ್ತೆ. 
*ಇಲ್ಲ ಮೆಸೇಜ್‌ ಮಾಡಿ ಹೇಳೋದು ಹೆಂಗಿರುತ್ತೆ..? 
*ನಾನು ಯಾರ ಮನೆಯ ಜೀತದ ಆಳಲ್ಲ ಎಂದ ಧನ್ವೀರ್‌ 
*ನಾನು ದುಡ್ಡು ಕೊಡಲ್ಲ ಅಂತಾ ಹೇಳಿಲ್ಲ ಎಂದ  ಧನ್ವೀರ್‌
 

ಇಷ್ಟೇ ಅಲ್ಲ, “ನನಗೆ ಆ ಯಮ್ಮ ಡೈರೆಕ್ಟ್‌ ಆಗಿ ಫೋನ್‌ ಮಾಡ್ಲಿ.. ಫೋನ್‌ ಮಾಡಿ ಒಂದು ಮಾತು ಹೇಳೋದು ಹೇಗಿರುತ್ತೆ..? ಇಲ್ಲ ಮೆಸೇಜ್‌ ಮಾಡಿ ಹೇಳೋದು ಹೇಗಿರುತ್ತೆ..?” ಎಂದು ಧನ್ವೀರ್‌ ಹೇಳಿದ್ದಾರೆ ಎನ್ನಲಾದ ಮಾತುಗಳೂ ಆಡಿಯೋದಲ್ಲಿವೆ.“ನಾನು ಯಾರ ಮನೆಯ ಜೀತದ ಆಳಲ್ಲ” ಎಂಬ ಹೇಳಿಕೆಯೂ ಕೇಳಿಬಂದಿದೆ ಎನ್ನಲಾಗಿದೆ.ಹಾಗಾದ್ರೆ ಈ ಮಾತುಗಳ ಹಿನ್ನೆಲೆ ಏನು..? ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಏನು ನಡೆದಿದೆ..? ಆಡಿಯೋದ ಸಂಪೂರ್ಣ ಹಿನ್ನೆಲೆ ಮತ್ತು ಸತ್ಯಾಸತ್ಯತೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಒಟ್ಟಿನಲ್ಲಿ, ಹಣದ ವಿಚಾರವಾಗಿ ನಟ ಧನ್ವೀರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ಕುತೂಹಲ ಮೂಡಿಸಿದೆ. ಈ ಆಡಿಯೋದಲ್ಲಿರುವ ಧ್ವನಿಯ ಅಧಿಕೃತ ದೃಢೀಕರಣ ಹಾಗೂ ಅದರ ಸಂಪೂರ್ಣ ಸಂದರ್ಭದ ಬಗ್ಗೆ ಸ್ಪಷ್ಟನೆ ಅಗತ್ಯವಿದೆ. ಈ ಬೆಳವಣಿಗೆ ಕುರಿತು ಸಂಬಂಧಪಟ್ಟವರ ಪ್ರತಿಕ್ರಿಯೆ ಏನು ಅನ್ನೋದನ್ನ ಕಾದು ನೋಡಬೇಕಿದೆ.

 

 

 

 

Add Zee News as a Preferred Source
TAGS:
Sandalwood