• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ವಿವಾದಕ್ಕೆ ಕಾರಣವಾಯ್ತು ಗಗನ್‌ ಹೇಳಿಕೆ : ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಪಕ್ಕಾ ಅಂತೀದಾರೆ ನೆಟ್ಟಿಗರು

ವಿವಾದಕ್ಕೆ ಕಾರಣವಾಯ್ತು ಗಗನ್‌ ಹೇಳಿಕೆ : ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಪಕ್ಕಾ ಅಂತೀದಾರೆ ನೆಟ್ಟಿಗರು

ಫಿನಾಲೆ ಹಂತಕ್ಕೆ ಹತ್ತಿರವಾಗುತ್ತಿದ್ದಂತೆ ಬಿಗ್‌ ಬಾಸ್‌ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಸ್ಪರ್ಧಿ ಗಗನ್ ಚಿನ್ನಪ್ಪ ಅವರು ಆಡಿದ "ನಾಲ್ಕು ಹೆಣ್ಣುಮಕ್ಕಳು" ಎಂಬ ಮಾಡು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದ ಹುಟ್ಟು ಹಾಕಿದೆ. ಅಷ್ಟೇ ಅಲ್ಲದೆ, ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಪಕ್ಕಾ ಅಂತೀದಾರೆ ನೆಟ್ಟಿಗರು.. ಅಸಲಿಗೆ ಗಗನ್‌ ಹೇಳಿದ್ದೇನು..? ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Nov 27, 2026, 15:58 IST|Updated: Nov 27, 2026, 16:09 IST
joinshare
ವಿವಾದಕ್ಕೆ ಕಾರಣವಾಯ್ತು ಗಗನ್‌ ಹೇಳಿಕೆ : ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಪಕ್ಕಾ ಅಂತೀದಾರೆ ನೆಟ್ಟಿಗರು
Image Credit: Gagan Chinnappa

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಫಿನಾಲೆ ಹಂತಕ್ಕೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಮನೆಯೊಳಗಿನ ಮಾತುಕತೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಇದೀಗ ಸ್ಪರ್ಧಿ ಗಗನ್ ಚಿನ್ನಪ್ಪ ಅವರು ಆಡಿದ "ನಾಲ್ಕು ಹೆಣ್ಣುಮಕ್ಕಳು" ಎಂಬ ಹೇಳಿಕೆ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮನೆಯಲ್ಲಿ ಸದ್ಯ ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ ಇರುವಾಗ ಗಗನ್ ನಾಲ್ವರ ಬಗ್ಗೆ ಪ್ರಸ್ತಾಪಿಸಿದ್ದು ಏಕೆ ಎಂಬ ಪ್ರಶ್ನೆ ವೀಕ್ಷಕರು ಹಾಗೂ ನೆಟ್ಟಿಗರಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮೂಡಿಸಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಾಗಿ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಮಾತ್ರ ಇದ್ದಾರೆ. ಹೀಗಿರುವಾಗ, ಸಹಸ್ಪರ್ಧಿಗಳಾದ ತಾಂಡವ್ ಮತ್ತು ಪ್ರಶಾಂತ್ ಅವರ ಜೊತೆ ಕುಳಿತು ಗಗನ್ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಮಾತುಕತೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಊಟದ ವೇಳೆ ತಾಂಡವ್ ಅವರು, "ಮನೆಯಲ್ಲಿ ಮೂರು ಹೆಣ್ಣುಮಕ್ಕಳಿದ್ದಾರೆ ಮತ್ತು ಅವರು ಬಹಳ ಡೇಂಜರ್" ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗಗನ್ ಚಿನ್ನಪ್ಪ, "ನಾಲ್ಕು ಹೆಣ್ಣುಮಕ್ಕಳು ಇರೋದಲ್ವ?" ಎಂದು ಕೇಳುತ್ತಾ ಮುಗುಳುನಗೆ ನಕ್ಕಿದ್ದಾರೆ.

ತಾಂಡವ್ ಅವರು ಏನನ್ನೋ ಎಚ್ಚರಿಕೆ ನೀಡುವ ಧಾಟಿಯಲ್ಲಿ ಮಾತನಾಡಿದ ಬೆನ್ನಲ್ಲೇ, ಗಗನ್ ತಮ್ಮ ಮಾತಿನ ವರಸೆಯನ್ನು ದಿಢೀರನೆ ಬದಲಿಸಿದ್ದಾರೆ. "ಹೌದು, ಮೂವರೇ ಇದ್ದಿದ್ದು. ಸೋನಿಕಾ ಕೂಡ ಇದ್ದಾರೆ ಎಂದುಕೊಂಡೆ" ಎಂದು ನಾಟಕೀಯವಾಗಿ ಸಮಜಾಯಿಷಿ ನೀಡಿದ್ದಾರೆ. ಆದರೆ, ಗಗನ್ ಅವರ ಈ ಮಾತು ಬದಲಾವಣೆ ಮತ್ತು ಸಮಜಾಯಿಷಿಯಲ್ಲಿ ಕೃತಕತೆ ಹಾಗೂ ನಾಟಕೀಯತೆ ಎದ್ದು ಕಾಣುತ್ತಿತ್ತು ಎಂಬುದು ಹಲವು ವೀಕ್ಷಕರ ಅನಿಸಿಕೆಯಾಗಿದೆ.

GAGAN: “Four women in the house,” apparently. @KicchaSudeep should ask him to name all four. Let’s see! 🗣️ And where’s the same Prasanth Pioneer's fight for women's dignity now? Why is he silent when it's his friend?🤔 @ColorsKannada @JHSKannada #BBK13 https://t.co/skxWDABaPj

— GROYPER (@PrithviRPatil) November 26, 2026

 ಇದೇ ವಿಚಾರವಾಗಿ ನೆಟ್ಟಿಗರು ಹಾಗೂ ಬಿಗ್ ಬಾಸ್ ಅಭಿಮಾನಿಗಳು ನಾನಾ ರೀತಿಯ ವಾದಗಳನ್ನು ಮುಂದಿಡುತ್ತಿದ್ದಾರೆ. ಕೆಲವರ ಪ್ರಕಾರ, ಗಗನ್ ಅವರು ಯಶಸ್ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಈ ಮಾತು ಆಡಿರಬಹುದು ಎನ್ನಲಾಗುತ್ತಿದೆ. ಯಶಸ್ ಅವರು ಮನೆಯೊಳಗೆ ಸದಾ ಮಹಿಳಾ ಸ್ಪರ್ಧಿಗಳ ಜೊತೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಆರೋಪ ಹಿಂದಿನಿಂದಲೂ ಇರುವುದರಿಂದ, ಅದೇ ಹಿನ್ನೆಲೆಯಲ್ಲಿ ಗಗನ್ ಈ ರೀತಿ ಹೇಳಿರಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಒಂದು ವೇಳೆ ಯಶಸ್ ವಿಷಯ ಇದರಲ್ಲಿ ಇಲ್ಲದಿದ್ದರೆ, ಸುಮಾರು ಎರಡು ವಾರಗಳ ಹಿಂದೆಯೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋದ ಸೋನಿಕಾ ಅವರ ಹೆಸರನ್ನು ಈಗ ದಿಢೀರನೆ ಯಾಕೆ ತರುತ್ತಾರೆ? ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳುತ್ತಿದ್ದಾರೆ.

ಮತ್ತೊಂದೆಡೆ, ಈ ಇಡೀ ಪ್ರಕರಣವು ವೀಕೆಂಡ್ ಪಂಚಾಯಿತಿಯಲ್ಲಿ ಗಂಭೀರವಾಗಿ ಚರ್ಚೆಯಾಗಬೇಕು ಎಂಬುದು ಅಭಿಮಾನಿಗಳ ಪ್ರಬಲ ಒತ್ತಾಯವಾಗಿದೆ. ನಿರೂಪಕರು ಈ ವಿಷಯವನ್ನು ಎತ್ತಿಕೊಂಡು ಗಗನ್ ಚಿನ್ನಪ್ಪ ಅವರಿಗೆ ನೇರ ಪ್ರಶ್ನೆಗಳನ್ನು ಕೇಳುತ್ತಾರೆಯೇ, ಅಥವಾ ಈ ಮಾತುಕತೆಯ ಹಿಂದಿನ ಅಸಲಿ ಉದ್ದೇಶವೇನು ಎಂಬುದನ್ನು ಬಿಚ್ಚಿಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಫಿನಾಲೆ ಹತ್ತಿರವಾಗುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಇಂತಹ ಹೇಳಿಕೆಗಳು ಮತ್ತು ಮಾತಿನ ಲಯ ತಪ್ಪುವ ಪ್ರಸಂಗಗಳು ಸ್ಪರ್ಧಿಗಳ ಆಟ ಹಾಗೂ ಜನಪ್ರಿಯತೆಯ ಮೇಲೆ ದೊಡ್ಡ ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

Add Zee News as a Preferred Source
TAGS:
Bigg Boss Kannada Season 13