SOCIAL MEDIA

Newsletter

PARTNER SITES
Select Language Select State

ಬಿಗ್‌ಬಾಸ್‌ ಮನೆಯಲ್ಲಿ ತುರ್ತು ಪರಿಸ್ಥಿತಿ : ಶಾಕಿಂಗ್ ಟ್ವಿಸ್ಟ್‌ ಕೊಟ್ಟ ಸುದೀಪ್

Bigg boss: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

Written By Ramya. R. Gowda
Published: Sep 21, 2026, 10:37 AM IST | Updated: Sep 21, 2026, 10:52 AM IST
Join

Bigg boss kannada: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. 

ಈ ವಾರ ಮನೆಯಲ್ಲಿರೋ ಪ್ರತಿಯೊಬ್ಬ ಸ್ಪರ್ಧಿಯೂ ನಾಮಿನೇಟ್! ಅಷ್ಟೇ ಅಲ್ಲ, ಯಾವಾಗ ಬೇಕಾದರೂ ಎಮರ್ಜೆನ್ಸಿ ಎಕ್ಸಿಟ್ ಆಗಬಹುದು ಅಂತ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ಬಿಗ್ ಬಾಸ್ ಮನೆಯಲ್ಲಿ ಆಗಿದ್ದೇನು? ಯಾರ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡ್ತಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.


ಬಿಗ್ ಬಾಸ್ ಕನ್ನಡ ಸೀಸನ್ 13... ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗ್ತಿದೆ. ಟಾಸ್ಕ್, ಜಗಳ, ತಂತ್ರ-ಪ್ರತಿತಂತ್ರದ ನಡುವೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಎದುರಾಗಿದೆ.


ಹೊಸ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ‘ಎಮರ್ಜೆನ್ಸಿ’ ಘೋಷಣೆಯಾಗಿದೆ. ನಿರೂಪಕ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟು ಮನೆಯ ಸದಸ್ಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ‘ಈ ವಾರ ಎಲ್ಲರೂ ನಾಮಿನೇಟ್. ಈ ಮನೆಯಲ್ಲಿ ಯಾರು ಉಳಿಯುತ್ತಾರೆ ಅನ್ನೋದಕ್ಕೆ ಯಾವುದೇ ಗ್ಯಾರಂಟಿ ಇಲ್ಲ’... ಅನ್ನೋ ಸುದೀಪ್ ಮಾತು ಕೇಳಿ ಸ್ಪರ್ಧಿಗಳ ಮುಖದಲ್ಲಿ ಆತಂಕ ಮನೆ ಮಾಡಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ, ವೋಟಿಂಗ್ ಮತ್ತು ಎಲಿಮಿನೇಷನ್‌ಗೆ ತನ್ನದೇ ಆದ ನಿಯಮಗಳಿರುತ್ತವೆ. ಆದರೆ ಈ ಬಾರಿ ಆಟದ ನಿಯಮವೇ ಬದಲಾಗಿರುವ ಸೂಚನೆ ಸಿಕ್ಕಿದೆ.
‘ಪ್ರತಿಯೊಬ್ಬ ಕಂಟೆಸ್ಟೆಂಟ್‌ ಅನ್ನು ನಾವೇ ಖುದ್ದಾಗಿ ನಾಮಿನೇಟ್ ಮಾಡುತ್ತಿದ್ದೇವೆ’ ಅಂತ ಸುದೀಪ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ...ಈ ವಾರ ಯಾವಾಗ ಏನು ಬೇಕಾದರೂ ಆಗಬಹುದು. ಹೀಗಾಗಿ ‘ಎಮರ್ಜೆನ್ಸಿ ಎಕ್ಸಿಟ್’ಗೆ ಸಿದ್ಧರಾಗಿರಿ ಅಂತ ಎಚ್ಚರಿಕೆ ನೀಡಿದ್ದಾರೆ.

ಈ ಮಾತು ಕೇಳ್ತಿದ್ದಂತೆ ಮನೆಯ ಸದಸ್ಯರ ಟೆನ್ಶನ್ ಮತ್ತಷ್ಟು ಹೆಚ್ಚಾಗಿದೆ. ಯಾರು ಯಾವಾಗ ಎಲಿಮಿನೇಟ್ ಆಗ್ತಾರೆ? ಯಾರ ಆಟಕ್ಕೆ ಬ್ರೇಕ್ ಬೀಳುತ್ತೆ? ಅನ್ನೋ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.

ಒಂದಿಲ್ಲೊಂದು ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿರುವ ಬಿಗ್ ಬಾಸ್, ಈ ಬಾರಿ ಎಮರ್ಜೆನ್ಸಿ ಎಲಿಮಿನೇಷನ್ ಮೂಲಕ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.


ಹಾಗಾದ್ರೆ ಈ ಎಮರ್ಜೆನ್ಸಿ ನಾಮಿನೇಷನ್ ಹಿಂದೆ ಬಿಗ್ ಬಾಸ್‌ನ ಪ್ಲಾನ್ ಏನು? ನಿಜಕ್ಕೂ ಈ ವಾರ ಮನೆಯಿಂದ ಯಾರಾದ್ರೂ ಎಮರ್ಜೆನ್ಸಿ ಎಕ್ಸಿಟ್ ಪಡೆಯುತ್ತಾರಾ? ಅಥವಾ ಇದು ಆಟದ ಮತ್ತೊಂದು ದೊಡ್ಡ ತಿರುವಾ? ಅದಕ್ಕೆ ಉತ್ತರ ಸಿಗಬೇಕಾದ್ರೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮುಂದಿನ ಎಪಿಸೋಡ್ ನೋಡಲೇಬೇಕು

ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಕಿರಿಕ್‌.. ಸ್ಪರ್ಧಿಗಳಿಗೆ ಸುದೀಪ್‌ ಖಡಕ್ ವಾರ್ನಿಂಗ್‌!

ಬಿಗ್‌ಬಾಸ್ ಕನ್ನಡ ಸೀಸನ್ 13 ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ. ದೊಡ್ಮನೆಯೊಳಗಿನ ಸ್ಪರ್ಧಿಗಳ ವರ್ತನೆ, ಜಗಳ ಹಾಗೂ ವಿವಾದಗಳು ಸದ್ಯ ಭಾರೀ ಚರ್ಚೆಗೆ ಕಾರಣವಾಗಿವೆ. ಇದರ ನಡುವೆ ಅಗ್ನಿಪರೀಕ್ಷೆ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಪಡೆದ ಕೆಲ ಸ್ಪರ್ಧಿಗಳ ವರ್ತನೆ ಬಗ್ಗೆ ಕಿಚ್ಚ ಸುದೀಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದೊಡ್ಮನೆಯಲ್ಲಿ ಏನಾಯ್ತು? ಸುದೀಪ್‌ ಯಾರಿಗೆಲ್ಲ ಕ್ಲಾಸ್ ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಸ್ಟೋರಿ.

ಬಿಗ್‌ಬಾಸ್ ಕನ್ನಡ ಸೀಸನ್ 13.. ಆರಂಭವಾದ ಕೆಲವೇ ದಿನಗಳಲ್ಲಿ ದೊಡ್ಮನೆ ಕದನದ ಅಖಾಡವಾಗಿ ಬದಲಾಗ್ತಿದೆ. ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ, ವೈಯಕ್ತಿಕ ಟೀಕೆ ಹಾಗೂ ಕಿರಿಕ್‌ಗಳು ಹೆಚ್ಚಾಗ್ತಿವೆ. ಈ ನಡುವೆ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಕೆಲ ಸ್ಪರ್ಧಿಗಳ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

ವಿಶೇಷವಾಗಿ ಅಗ್ನಿಪರೀಕ್ಷೆ ಮೂಲಕ ಬಿಗ್‌ಬಾಸ್ ಮನೆಗೆ ಬಂದಿರುವ ಮಂಜಾ, ಕಿರಣ್ ಶಾಸ್ತ್ರಿ, ಧನುಷ್ ಸೇರಿದಂತೆ ಕೆಲ ಸ್ಪರ್ಧಿಗಳ ವರ್ತನೆ ಚರ್ಚೆಗೆ ಬಂದಿದೆ. ಸುದೀಪ್‌ ಅವರ ವರ್ತನೆ ಬಗ್ಗೆ ಪ್ರಶ್ನೆ ಮಾಡಿದ್ದು, ಇಂತಹ ನಡೆ ಮುಂದಿನ ಸಾಮಾನ್ಯ ಸ್ಪರ್ಧಿಗಳ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.


ಇನ್ನು ಈ ಸೀಸನ್‌ನಲ್ಲಿ ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಜನರಿಗೂ ಬಿಗ್‌ಬಾಸ್ ಮನೆ ಪ್ರವೇಶದ ಅವಕಾಶ ನೀಡಲಾಗಿದೆ. ‘ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾದ ಸ್ಪರ್ಧಿಗಳು ಹಲವು ಹಂತದ ಸವಾಲುಗಳನ್ನು ಎದುರಿಸಿ ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ. ಆದ್ರೆ ದೊಡ್ಮನೆಗೆ ಬಂದ ಬಳಿಕವೇ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಗಳು ಜೋರಾಗಿವೆ. 

ಈಗ ಸುದೀಪ್‌ ಅವರ ಖಡಕ್ ಮಾತಿನ ಬಳಿಕ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುತ್ತಾರಾ? ಅಥವಾ ದೊಡ್ಮನೆಯ ಕಿರಿಕ್‌ ಇನ್ನಷ್ಟು ಹೆಚ್ಚಾಗುತ್ತಾ? ಅನ್ನೋ ಕುತೂಹಲ ಮೂಡಿದೆ.

ಸದ್ಯ  ಈ ಎಮರ್ಜೆನ್ಸಿ ನಾಮಿನೇಷನ್ ಹಿಂದೆ ಬಿಗ್ ಬಾಸ್‌ನ ಪ್ಲಾನ್ ಏನು? ನಿಜಕ್ಕೂ ಈ ವಾರ ಮನೆಯಿಂದ ಯಾರಾದ್ರೂ ಎಮರ್ಜೆನ್ಸಿ ಎಕ್ಸಿಟ್ ಪಡೆಯುತ್ತಾರಾ? ಅಥವಾ ಇದು ಆಟದ ಮತ್ತೊಂದು ದೊಡ್ಡ ತಿರುವಾ? ಅದಕ್ಕೆ ಉತ್ತರ ಸಿಗಬೇಕಾದ್ರೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಮುಂದಿನ ಎಪಿಸೋಡ್ ನೋಡಲೇಬೇಕು

ಇದನ್ನೂ ಓದಿ: BBK 13 Elimination : 2 ಸ್ಪರ್ಧಿಗಳಿಗೆ ಗೇಟ್‌ ಪಾಸ್‌, ಯಾರೂ ಊಹಿಸಿದ ರೀತಿ ಶಾಕ್‌ ಕೊಟ್ಟ ಬಿಗ್‌ ಬಾಸ್‌!

 

 


 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES