• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /BBK 13 Elimination : 2 ಸ್ಪರ್ಧಿಗಳಿಗೆ ಗೇಟ್‌ ಪಾಸ್‌, ಯಾರೂ ಊಹಿಸಿದ ರೀತಿ ಶಾಕ್‌ ಕೊಟ್ಟ ಬಿಗ್‌ ಬಾಸ್‌!

BBK 13 Elimination : 2 ಸ್ಪರ್ಧಿಗಳಿಗೆ ಗೇಟ್‌ ಪಾಸ್‌, ಯಾರೂ ಊಹಿಸಿದ ರೀತಿ ಶಾಕ್‌ ಕೊಟ್ಟ ಬಿಗ್‌ ಬಾಸ್‌!

BBK 13 today Elimination : ಬಿಗ್ ಬಾಸ್ ಕನ್ನಡ ಸೀಸನ್ 13ರ ಎರಡನೇ ವಾರದಲ್ಲಿ ಎಲಿಮಿನೇಷನ್‌ಗೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಶಾಕ್‌ ನೀಡಿದೆ. ಈ ವಾರ ನಿಜವಾದ ಎಲಿಮಿನೇಷನ್ ಇರುವುದಿಲ್ಲ ಎಂಬ ವಿಷಯ ಪ್ರೇಕ್ಷಕರಿಗೆ ಮೊದಲೇ ತಿಳಿದಿದ್ದರೂ, ಇಬ್ಬರು ಸ್ಪರ್ಧಿಯನ್ನು ದೊಡ್ಮನೆಯಿಂದ ಹೊರ ಕಳುಹಿಸುವ ಮೂಲಕ ಟ್ವಿಸ್ಟ್‌ ನೀಡಿದೆ.. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..

Reported ByKrishna NKEdited ByKrishna NK
Published: Sep 21, 2026, 06:07 AM IST|Updated: Sep 21, 2026, 06:11 AM IST
joinshare
BBK 13 Elimination : 2 ಸ್ಪರ್ಧಿಗಳಿಗೆ ಗೇಟ್‌ ಪಾಸ್‌, ಯಾರೂ ಊಹಿಸಿದ ರೀತಿ ಶಾಕ್‌ ಕೊಟ್ಟ ಬಿಗ್‌ ಬಾಸ್‌!
Image Credit: Bigg Boss Kannada Season 13

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kannada 13 elimination : ಬಿಗ್ ಬಾಸ್ ಕನ್ನಡ ಸೀಸನ್ 13ರ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಬಿಗ್ ಬಾಸ್ ಮನೆಯಲ್ಲಿ ಭಾರಿ ಕುತೂಹಲ ಹಾಗೂ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದೆ. ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂಬ ವಿಷಯ ಪ್ರೇಕ್ಷಕರಿಗೆ ಮೊದಲೇ ತಿಳಿದಿತ್ತು ಆದರೂ, ಮನೆಯ ಸದಸ್ಯರಲ್ಲಿ ಆತಂಕ ಮತ್ತು ಗೊಂದಲ ಮೂಡಿಸುವಲ್ಲಿ ಬಿಗ್ ಬಾಸ್ ಟ್ವಿಸ್ಟ್‌ ಒಂದನ್ನು ನೀಡಿದೆ..

ಹೌದು.. ನಾಮಿನೇಟ್ ಆಗಿದ್ದ ಹಲವು ಸ್ಪರ್ಧಿಗಳ ಪೈಕಿ ಅಂತಿಮವಾಗಿ ನಾಲ್ಕು ಜನರನ್ನು ಬಿಗ್ ಬಾಸ್ ಒಂದು ವಿಶೇಷವಾದ ಟಾಸ್ಕ್‌ಗೆ ಆಯ್ಕೆ ಮಾಡಿದರು. ಅವಿನಾಶ್, ವೈಷ್ಣವಿ, ಕಿರಣ್ ಶಾಸ್ತ್ರಿ ಮತ್ತು ಮಾಡರ್ನ್ ಕವಿ ಮಂಜ ಅವರನ್ನಷ್ಟೇ ನಾಲ್ಕು ಪ್ರತ್ಯೇಕ ಕನ್ನಡಿಗಳ ಮುಂದೆ ನಿಲ್ಲಿಸಿ, ಪ್ರತಿಯೊಬ್ಬರಿಗೂ ತಮ್ಮೊಟ್ಟಿಗೆ ತಾವೇ ಮಾತನಾಡುವಂತೆ ಸೂಚಿಸಲಾಯಿತು.

ಟಾಸ್ಕ್ ಆರಂಭವಾಗುತ್ತಿದ್ದಂತೆ, ಅವಿನಾಶ್ ತಮ್ಮ ಕನ್ನಡಿಯ ಮುಂದೆ ನಿಂತು ಮಾತನಾಡುತ್ತಾ ಅತ್ಯಂತ ಭಾವುಕರಾದರು. ತದನಂತರ ವೈಷ್ಣವಿ ಕೂಡ ತಮ್ಮ ಮನದಾಳದ ಮಾತುಗಳನ್ನು ಕನ್ನಡಿಯ ಎದುರು ಹಂಚಿಕೊಂಡರು. ಇವರಿಬ್ಬರ ಸಂಭಾಷಣೆಯ ನಂತರವೂ ಕನ್ನಡಿಗಳು ಒಡೆಯದೆ ಸುರಕ್ಷಿತವಾಗಿದ್ದವು. ಹೀಗಾಗಿ ಅವಿನಾಶ್ ಮತ್ತು ವೈಷ್ಣವಿ ಅವರನ್ನು ಎಲಿಮಿನೇಷನ್‌ನಿಂದ 'ಸೇಫ್' ಎಂದು ಘೋಷಿಸಿ, ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಯಿತು.

ಆದರೆ, ತದನಂತರ ಕನ್ನಡಿಯ ಮುಂದೆ ನಿಂತು ಮಾತನಾಡಿದ ಮಾಡರ್ನ್ ಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಅವರಿಗೆ ಕಾದಿತ್ತು ಬಿಗ್ ಶಾಕ್. ಇವರಿಬ್ಬರೂ ಮಾತನಾಡುತ್ತಿದ್ದಂತೆಯೇ ಅವರ ಎದುರಿದ್ದ ಕನ್ನಡಿಗಳು ಒಡೆದು ಚೂರುಚೂರಾದವು. ಇದರೊಂದಿಗೆ ಇಬ್ಬರೂ ಮನೆಯಿಂದ ನಿರ್ಗಮಿಸಬೇಕೆಂದು ಬಿಗ್ ಬಾಸ್ ಆಜ್ಞಾಪಿಸಿದರು. ಕಿರಣ್ ಶಾಸ್ತ್ರಿ ಕಣ್ಣೀರಿಡುತ್ತಾ ಭಾವುಕರಾಗಿ ಮನೆಯಿಂದ ಹೊರನಡೆದರೆ, ಮಂಜ ತಮ್ಮದೇ ಆದ ಹುಂಬತನದ ಮಾತುಗಳನ್ನಾಡುತ್ತಾ ನಿರ್ಗಮಿಸಿದರು.

ಪ್ರೇಕ್ಷಕರಿಗೆ ತಿಳಿದಿರುವಂತೆ ಈ ವಾರ ಯಾವುದೇ ಅಧಿಕೃತ ಎಲಿಮಿನೇಷನ್ ನಡೆದಿಲ್ಲ. ಬದಲಾಗಿ, ಮನೆಯ ಸದಸ್ಯರನ್ನು ನಂಬಿಸಲು ಈ ನಾಟಕವನ್ನು ಸೃಷ್ಟಿಸಲಾಗಿದ್ದು, ನಿರ್ಗಮಿಸಿದಂತೆ ನಟಿಸಿದ ಕಿರಣ್ ಶಾಸ್ತ್ರಿ ಮತ್ತು ಮಂಜ ಅವರನ್ನು ನೇರವಾಗಿ 'ಸೀಕ್ರೆಟ್ ರೂಮ್'ಗೆ ಕಳುಹಿಸಲಾಗಿದೆ. ಕಳೆದ ಸೀಸನ್‌ನಲ್ಲೂ ಇದೇ ಮಾದರಿಯಲ್ಲಿ ಇಬ್ಬರು ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್‌ನಲ್ಲಿರಿಸಿ, ಅಲ್ಲಿಂದಲೇ ಆಟವನ್ನು ವೀಕ್ಷಿಸಲು ಮತ್ತು ನಿಯಂತ್ರಿಸಲು ಅವಕಾಶ ನೀಡಲಾಗಿತ್ತು. ಈಗ ಶಾಸ್ತ್ರಿ ಹಾಗೂ ಮಂಜ ಕೂಡ ಮುಂದಿನ ಕೆಲವು ದಿನಗಳ ಕಾಲ ಸೀಕ್ರೆಟ್ ರೂಮ್‌ನಲ್ಲಿದ್ದುಕೊಂಡು ಆಟದ ಗತಿಯನ್ನೇ ಬದಲಾಯಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Bigg Boss Kannada Season 13