SOCIAL MEDIA

Newsletter

PARTNER SITES
Select Language Select State

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಧರಿಸುವ ಮೈಕ್‌ ಬೆಲೆ ಎಷ್ಟು ಗೊತ್ತಾ?

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಧರಿಸುವ ಮೈಕ್‌ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ....

Written By Chetana Devarmani
Published: Oct 19, 2026, 05:58 PM IST | Updated: Oct 19, 2026, 06:01 PM IST
Join

ವಾರದ ಕಥೆಯಲ್ಲಿ ಕಿಚ್ಚ ಸುದೀಪ್‌ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅದರ ಬೆಲೆ ಕೇಳಿ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ, ಮೈಕ್‌ ಹಾಳು ಮಾಡಿದ ಪ್ರಶಾಂತ್‌ ಗೌಡ ಅವರನ್ನು ಸುದೀಪ್‌ ತಮಾಷೆಯಾಗಿಯೇ ಕಾಲೆಳೆದಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ದಿನದಿಂದ ದಿನಕ್ಕೆ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಮನೆಯೊಳಗೆ ನಡೆಯುವ ಸಣ್ಣಪುಟ್ಟ ಘಟನೆಗಳೂ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆಗೆ ಬರುತ್ತವೆ. ಅದರಲ್ಲೂ ಸ್ಪರ್ಧಿಗಳು ಮಾಡುವ ತಪ್ಪುಗಳು ಕಿಚ್ಚ ಸುದೀಪ್‌ ಅವರ ಪಂಚಾಯಿತಿಯಲ್ಲಿ ಪ್ರಸ್ತಾಪವಾದಾಗ ವೀಕ್ಷಕರಿಗೂ ಮನರಂಜನೆ ಸಿಗುತ್ತದೆ. ಈ ವಾರ ಸ್ಪರ್ಧಿಗಳು ಧರಿಸುವ ಮೈಕ್‌ನ ಬೆಲೆ ವಿಚಾರವೇ ಎಲ್ಲರ ಗಮನ ಸೆಳೆದಿದೆ.

ಇತ್ತೀಚಿನ ಸಂಚಿಕೆಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿ ಪ್ರಶಾಂತ್‌ ಗೌಡ ಆಕಸ್ಮಿಕವಾಗಿ ಸ್ವಿಮ್ಮಿಂಗ್‌ ಪೂಲ್‌ಗೆ ಬಿದ್ದಿದ್ದರು. ಈ ವೇಳೆ ಅವರು ಧರಿಸಿದ್ದ ಮೈಕ್‌ ನೀರಿನಲ್ಲಿ ಮುಳುಗಿ ಹಾಳಾಗಿತ್ತು. ಈ ವಿಚಾರ ವಾರಾಂತ್ಯದ ಸಂಚಿಕೆಯಲ್ಲಿ ಪ್ರಸ್ತಾಪವಾದಾಗ, ಕಿಚ್ಚ ಸುದೀಪ್‌ ಸ್ಪರ್ಧಿಗಳ ಮುಂದೆ ಕುತೂಹಲಕಾರಿ ಪ್ರಶ್ನೆಯೊಂದನ್ನು ಇಟ್ಟರು. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಧರಿಸುವ ಒಂದು ಮೈಕ್‌ನ ಬೆಲೆ ಎಷ್ಟಿರಬಹುದು ಎಂದು ಕೇಳಿದರು.

ಸುದೀಪ್‌ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್‌ ಗೌಡ, ಮೈಕ್‌ನ ಬೆಲೆ ಸುಮಾರು 25 ಸಾವಿರ ರೂಪಾಯಿ ಇರಬಹುದು ಎಂದು ಅಂದಾಜಿಸಿದರು. ಮತ್ತೊಬ್ಬ ಸ್ಪರ್ಧಿ ತಾಂಡವ್‌ 78 ಸಾವಿರ ರೂಪಾಯಿ ಇರಬಹುದು ಎಂದು ಹೇಳಿದರು. ಆದರೆ, ಮೈಕ್‌ನ ನಿಜವಾದ ಬೆಲೆಯನ್ನು ಸುದೀಪ್‌ ಬಹಿರಂಗಪಡಿಸಿದಾಗ ಸ್ಪರ್ಧಿಗಳಿಗೆ ಅಚ್ಚರಿಯಾಯಿತು.

ಬಿಗ್‌ ಬಾಸ್‌ ಮನೆಯಲ್ಲಿ ಬಳಸುವ ಮೈಕ್‌ನ ಬೆಲೆ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಎಂದು ಕಿಚ್ಚ ಸುದೀಪ್‌ ತಿಳಿಸಿದರು. ಸಾಮಾನ್ಯವಾಗಿ ಮೈಕ್‌ ಎಂದರೆ ಕೆಲವೇ ಸಾವಿರ ರೂಪಾಯಿ ಇರಬಹುದು ಎಂದು ಅಂದಾಜಿಸುವವರಿಗೆ ಈ ಮೊತ್ತ ಅಚ್ಚರಿ ಮೂಡಿಸುವಂತಿದೆ. ಅದರಲ್ಲೂ ಪ್ರಶಾಂತ್‌ ಗೌಡ ಅವರು ಮೈಕ್‌ ಹಾಳು ಮಾಡಿಕೊಂಡಿರುವ ವಿಚಾರದ ಹಿನ್ನೆಲೆಯಲ್ಲಿ ಈ ಬೆಲೆ ಚರ್ಚೆಗೆ ಕಾರಣವಾಯಿತು.

ಮೈಕ್‌ನ ಬೆಲೆ ಕೇಳಿದ ಸ್ಪರ್ಧಿಗಳು ಶಾಕ್‌ ಆಗಿದ್ದರೆ, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುವ ಸಾಧ್ಯತೆ ಮೂಡಿದೆ. ಎರಡೂವರೆ ಲಕ್ಷ ರೂಪಾಯಿಗೆ ಬೈಕ್‌ ಖರೀದಿಸಬಹುದು ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಬಳಸುವ ಉಪಕರಣಗಳ ಬೆಲೆಯ ಬಗ್ಗೆ ಕುತೂಹಲ ಹೊಂದಿರುವವರಿಗೂ ಈ ಮಾಹಿತಿ ಗಮನ ಸೆಳೆದಿದೆ.

ಮೈಕ್‌ ಹಾಳು ಮಾಡಿದ ಪ್ರಶಾಂತ್‌ ಗೌಡ ಅವರನ್ನು ಸುದೀಪ್‌ ಹಾಸ್ಯಮಯವಾಗಿ ತರಾಟೆಗೆ ತೆಗೆದುಕೊಂಡರು. ಸ್ಪರ್ಧಿಗಳಿಗೆ ವಾರಕ್ಕೊಮ್ಮೆ ಬಿಗ್‌ ಬಾಸ್‌ನಿಂದ ಪೇಮೆಂಟ್‌ ಬರುತ್ತದೆ ಎಂದು ನೆನಪಿಸಿದ ಅವರು, ಮೈಕ್‌ನ ಮೊತ್ತವನ್ನು ಆ ಹಣದಿಂದ ಕಡಿತಗೊಳಿಸಲಾಗುವುದು ಎಂದು ತಮಾಷೆ ಮಾಡಿದರು. ಅಲ್ಲದೆ, ಮದುವೆಯಾದ ಎರಡೇ ತಿಂಗಳಿಗೆ ಇಷ್ಟೊಂದು ದೊಡ್ಡ ಸಾಲ ಮಾಡಿಕೊಂಡಿದ್ದೀರಿ ಎಂದು ಪ್ರಶಾಂತ್‌ ಅವರನ್ನು ರೇಗಿಸಿದರು. ಸುದೀಪ್‌ ಅವರ ಈ ಮಾತುಗಳು ಸಂಚಿಕೆಗೆ ಮತ್ತಷ್ಟು ಮನರಂಜನೆಯ ಕ್ಷಣಗಳನ್ನು ನೀಡಿದವು. ಸ್ಪರ್ಧಿಗಳು ಮಾಡುವ ಸಣ್ಣ ತಪ್ಪುಗಳೂ ಕೆಲವೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

ಇದೇ ಸಂಚಿಕೆಯಲ್ಲಿ ಬಿಗ್‌ ಬಾಸ್‌ ಮನೆಯ ನಿಯಮಗಳ ಉಲ್ಲಂಘನೆಯ ವಿಚಾರವೂ ಚರ್ಚೆಗೆ ಬಂತು. ಮನೆಯಲ್ಲಿ ಪಿಸುಧ್ವನಿಯಲ್ಲಿ ಮಾತನಾಡುತ್ತಿದ್ದ ಆಸಿಯಾ ವಿರುದ್ಧ ಸುದೀಪ್‌ ಅಸಮಾಧಾನ ವ್ಯಕ್ತಪಡಿಸಿದರು. ಬಿಗ್‌ ಬಾಸ್‌ ಮನೆಯಲ್ಲಿ ಪಿಸುಗುಟ್ಟಿ ಮಾತನಾಡುವುದು ನಿಯಮಬಾಹಿರವಾಗಿದ್ದು, ಕ್ಯಾಪ್ಟನ್‌ ಧನುಷ್‌ ನೀಡಿದ ಶಿಕ್ಷೆಯನ್ನು ಪಾಲಿಸದ ವಿಚಾರವೂ ಪ್ರಸ್ತಾಪವಾಯಿತು.

ಈ ಹಿನ್ನೆಲೆಯಲ್ಲಿ ಸುದೀಪ್‌ ಹೊಸ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಯಾರಾದರೂ ಪಿಸುಗುಟ್ಟಿ ಮಾತನಾಡಿದರೆ, ಅವರಿಗೆ ಒಂದು ವಾರ ಪೂರ್ತಿ ಮೈಕ್‌ ನೀಡುವುದಿಲ್ಲ ಎಂದು ಕಠಿಣ ನಿಯಮ ಘೋಷಿಸಿದರು. ಹೀಗಾಗಿ, ಮೈಕ್‌ನ ಬೆಲೆ ಬಹಿರಂಗವಾದ ಪ್ರಸಂಗದ ಜೊತೆಗೆ ಮನೆಯೊಳಗಿನ ಶಿಸ್ತು ಮತ್ತು ನಿಯಮಗಳ ಪಾಲನೆಯ ವಿಚಾರವೂ ಈ ವಾರದ ಸಂಚಿಕೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು. ಎರಡೂವರೆ ಲಕ್ಷ ರೂಪಾಯಿ ಬೆಲೆಯ ಮೈಕ್‌, ಪ್ರಶಾಂತ್‌ ಗೌಡ ಅವರ ಎಡವಟ್ಟು ಮತ್ತು ಆಸಿಯಾಗೆ ಸಿಕ್ಕ ಎಚ್ಚರಿಕೆ ಈ ವಾರದ ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಪ್ರಮುಖ ಚರ್ಚೆಯ ವಿಷಯಗಳಾಗಿವೆ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES